ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ದಿನಗಣನೆ| ಕೊನೆ ಕ್ಷಣದಲ್ಲಿ ಗಲ್ಲು ಶಿಕ್ಷೆ ವಿರುದ್ಧ ವಿಶೇಷ ಮೇಲ್ಮನವಿ ಸಲ್ಲಿಸಿದ ರೇಪಿಸ್ಟ್| ಅಕ್ಷಯ್ ಸಿಂಗ್ ಅರ್ಜಿ ಸ್ವೀಕರಿಸಿದ ಸುಪ್ರೀಂ| ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬ
ನವದೆಹಲಿ[ಡಿ.10]: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನಗಣನೆ ಆರಂಭವಾಗಿದೆ, ತಿಹಾರ್ ಜೈಲಿನಲ್ಲೂ ಎಲ್ಲಾ ತಯಾರಿ ನಡೆಯುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ 2012ರಲ್ಲಿ ನಿರ್ಭಯಾಳನ್ನು ಅತ್ಯಾಚಾರಗೈದಿದ್ದ ಅಪರಾಧಿಗಳಲ್ಲೊಬ್ಬ, ಅಕ್ಷಯ್ ಸಿಂಗ್ ಗಲ್ಲು ಶಿಕ್ಷೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ.
ಅಕ್ಷಯ್ ಸಿಂಗ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಈ ಮೇಲ್ಮನವಿಯಿಂದಾಗಿ, ನಿರ್ಭಯಾ ಅತ್ಯಾಚಾರಿಗೆ ಆಗಬೇಕಿದ್ದ ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ. ಇನ್ನು ಸುಪ್ರೀಂ ಕೋರ್ಟ್ ಕೂಡಾ ಅಪರಾಧಿ ಸಲ್ಲಿಸಿರುವ ಈ ಪುನರ್ ಪರಿಶೀಲನಾ ಅರ್ಜಿಯನ್ನು ಸ್ವೀಕರಿಸಿದೆ.
ನಾನು 'ನಿರ್ಭಯ': ಅತ್ಯಾಚಾರಿಗಳ ಕತ್ತಿಗೆ ಹಗ್ಗ ಹಾಕುವೆನೆಂದ ಪೇದೆ!
ಈ ಅತ್ಯಾಚಾರ ಪ್ರಕರಣದ ಮತ್ತಿಬ್ಬರು ಅಪರಾಧಿಗಳು, ವಿನಯ್ ಹಾಗೂ ಪವನ್ ಕುಮಾರ್ ಗುಪ್ತಾ ಸದ್ಯ ಸುಪ್ರೀಂ ಕೋರ್ಟ್ ಗೆ ಯಾವುದೇ ವಿಶೇಷ ಮೇಲ್ಮನವಿ ಸಲ್ಲಿಸುತ್ತಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಅಪರಾಧಿಗಳ ಪರ ವಕೀಲ ಅಕ್ಷಯ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ತೀರ್ಪು ಹೊರ ಬಂದ ಬಳಿಕ, ಇನ್ನುಳಿದ ಮೂವರು ಅಪರಾಧಿಗಳು ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ(curative petition) ಸಲ್ಲಿಸಲಿದ್ದಾರೆ ಎಂದಿದ್ದಾರೆ.
ಗಲ್ಲು ಶಿಕ್ಷೆಗೆ ತಿಹಾರ್ ನಲ್ಲಿ ತಯಾರಿ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿದೆ. ಹೈದರಾಬಾದ್ ಎನ್ ಕೌಂಟರ್ ಪ್ರಕರಣದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ಮತ್ತೆ ಜೋರಾಗಿತ್ತು. ಹೀಗಿರುವಾಗ ಡಿಸೆಂಬರ್ 16ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿರುವಾಗಲೇ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ನೀಡುವ ಕೊಠಡಿ ಸ್ವಚ್ಛತೆ ಕೆಲಸ ಆರಂಭವಾಗಿದ್ದು, ಗಲ್ಲಿಗೇರಿಸುವ ಹಗ್ಗ ತಯಾರು ಮಾಡುವಂತೆ ತಿಹಾರ್ ಜೈಲು ಸಿಬ್ಬಂದಿ, ಬಕ್ಸಾರ್ ಸಿಬ್ಬಂದಿಗೆ ಮನವಿ ಮಾಡಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ನಿರ್ಭಯಾ ರೇಪಿಸ್ಟ್ ಪವನ್ ತಿಹಾರ್ ಜೈಲಿಗೆ ಶಿಫ್ಟ್!
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇಂದು, ಮಂಗಳವಾರ ಮಂಡೋಲಿ ಜೈಲಿನಲ್ಲಿದ್ದ ನಿರ್ಭಯಾ ಅತ್ಯಾಚಾರಿ ಪವನ್ ಗುಪ್ತಾನನ್ನು ತಿಹಾರ್ ಗೆ ಶಿಫ್ಟ್ ಮಾಡಲಾಗಿತ್ತು. ಪ್ರಕರಣದ ಉಳಿದ ಮೂವರು ಅಪರಾಧಿಗಳು ತಿಹರ್ ಜೈಲಿನಲ್ಲೇ ಇದ್ದಾರೆ. ಈ ನಾಲ್ವರೂ ದೋಷಿಗಳನ್ನು ಪ್ರತ್ಯೇಕ ಜೈಲು ಕೊಠಡಿಗಳಲ್ಲಿ ಇರಿಸಲಾಗಿದೆ.
ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು: ವಾರದೊಳಗೆ ಹಗ್ಗ ತಯಾರಿಕೆಗೆ ಬಕ್ಸರ್ ಜೈಲಿಗೆ ಸೂಚನೆ!