ಸಚಿವ ಶ್ರೀರಾಮುಲು ಎಡವಟ್ಟು, ಟ್ರಂಪ್‌ಗೆ ಪ್ರತಿಭಟನೆ ಬಿಕ್ಕಟ್ಟು; ಜೂ.02ರ ಟಾಪ್ 10 ಸುದ್ದಿ!

Suvarna News   | Asianet News
Published : Jun 02, 2020, 04:54 PM ISTUpdated : Jun 02, 2020, 05:13 PM IST
ಸಚಿವ ಶ್ರೀರಾಮುಲು ಎಡವಟ್ಟು, ಟ್ರಂಪ್‌ಗೆ ಪ್ರತಿಭಟನೆ ಬಿಕ್ಕಟ್ಟು; ಜೂ.02ರ ಟಾಪ್ 10 ಸುದ್ದಿ!

ಸಾರಾಂಶ

ಆರೋಗ್ಯ ಸಚಿವ ಶ್ರೀರಾಮುಲು ಎಲ್ಲಾ ನಿಯಮ ಗಾಳಿಗೆ ತೂರಿದ ಘಟನೆ ನಡೆದಿದೆ. ರಾಮುಲು ಎಡವಟ್ಟಿಗೆ ಇದೀಗ ರಾಜೀನಾಮೆ ಆಗ್ರಹಗಳು ಕೇಳಿಬಂದಿದೆ. ಬಿಜೆಪಿಯಲ್ಲಿ ಅಸಧಾನ ಸ್ಫೋಟಗೊಂಡ ಕಾರಣ ಇದೀಗ ಇಬ್ಬರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ. ಕೊರೋನಾಕ್ಕೆ ಲಸಿಕೆ ಕುರಿತು ಭಾರತೀಯ ವಿಜ್ಞಾನಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿಲಿಂಡರ್ ಬೆಲೆಯಲ್ಲಿ ಏರಿಕೆ, ಅಸ್ಸಾಂನಲ್ಲಿ ಭೂಕುಸಿತ ಸೇರಿದಂತೆ ಜೂನ್ 2ರ ಟಾಪ್ 10 ಸುದ್ದಿ ಇಲ್ಲಿವೆ.

ಅಸ್ಸಾಂನಲ್ಲಿ ಭೂಕುಸಿತ 20 ಮಂದಿ ಸಾವು, ಅನೇಕರಿಗೆ ಗಾಯ!...

ಅಸ್ಸಾಂನ ಹಲವಾರು ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಕನಿಷ್ಟ 20 ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದೇ ಕಾರಣದಿಂದ ಭೂಕುಸಿತ ಸಂಭವಿಸಿದೆ. 

ಭಾರತೀಯ ವಸ್ತುಗಳ ಬಳಕೆಗೆ ಪ್ರತಿಜ್ಞೆ ಮಾಡಿ: ಅಮಿತ್ ಶಾ ಕರೆ!

ಪ್ರಧಾನಿ ನೇರಂದ್ರ ಮೋದಿ ಸ್ವಾವಲಂಬಿ ಭಾರತ ನಿರ್ಮಾಣದ ಬಳಿಕ ಸ್ಥಳೀಯ ವಸ್ತುಗಳ ಬಳಿಸಿ, ವಿದೇಶಿ ವಸ್ತು ಬಹಿಷ್ಕರಿಸಿ ಅನ್ನೋ ಅಭಿಯಾನ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಲವು ಗಣ್ಯರು, ಸೆಲೆಬ್ರೆಟಿಗಳು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯರಿಗೆ ಮಹತ್ವದ ಕರೆ ನೀಡಿದ್ದಾರೆ.

ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ಮಾತು!...

ಪಕ್ಷ ನನಗೆ ರಾಜೀನಾಮೆ ಕೊಡಲು ತಿಳಿಸಿದರೆ ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ತಂದೆಯನ್ನು ಇಮಿಟೇಟ್‌ ಮಾಡುತ್ತಾ ತಮ್ಮನಿಗೆ ಲಾಲಿ ಹಾಡುತ್ತಿರುವ ಐರಾ ವಿಡಿಯೋ ವೈರಲ್‌!...

ಸ್ಯಾಂಡಲ್‌ವುಡ್‌ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಮುದ್ದಿನ ಮಕ್ಕಳು ಒಟ್ಟಾಗಿ ಕಾಲ ಕಳೆಯತ್ತಿರುವ ವಿಡಿಯೋವನ್ನು ರಾಧಿಕಾ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಮಧ್ಯೆ ಎರಡು ಹೊಸ ಜಿಲ್ಲಾ ಉಸ್ತುವಾರಿಗಳ ನೇಮಕ

ಬೆಳಗಾವಿ ಹಾಗೂ ಹಾಸನ ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕವಾಗಿದೆ.  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಅವರಿಗೆ ಕೊನೆಗೂ ಬೆಳಗಾವಿ ಉಸ್ತುವಾರಿಯಾಗಿದ್ದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೆ. ಗೋಪಾಲಯ್ಯನವರಿಗೆ ಹಾಸನ ಜಿಲ್ಲಾ ಜವಾಬ್ದಾರಿ ವಹಿಸಲಾಗಿದೆ.

ಕೊರೋನಾಕ್ಕೆ ಲಸಿಕೆ, ಅಚ್ಚರಿ ಮಾಹಿತಿ ನೀಡಿದ ಭಾರತೀಯ ವಿಜ್ಞಾನಿ

ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಕೆಲಸ ಜಾರಿಯಲ್ಲಿದೆ. ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ಒಂದು ತಿಂಗಳು ಬಹಳ ಪ್ರಮುಖ ಎಂದು ಭಾರತ್ ಬಯೋಟೆಕ್ ನ  ಚೀಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಕೃಷ್ಣ ಮೋಹನ್ ಎಲ್ಲಾ ತಿಳಿಸಿದ್ದಾರೆ. 

LPG ಸಿಲಿಂಡರ್ ಬೆಲೆ ಭಾರೀ ಏರಿಕೆ, ಪರಿಷ್ಕೃತ ದರ ಇಂದಿನಿಂದಲೇ ಜಾರಿ!.

ಒಂದೆಡೆ ಲಾಕ್‌ಡೌನ್ ನಿಧಾನವಾಗಿ ಸಡಿಲಗೊಳಿಸಲಾಗುತ್ತಿದೆ. ಹೀಗಿರುವಾಗ ಮೂರು ತಿಂಗಳ ಇಳಿಕೆಯ ಬಳಿಕ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕೇಂದ್ರ ಸರ್ಕಾರ ಸೋಮವಾರ ಏರಿಕೆ ಮಾಡಿದೆ.

ಹೊಂಡಾ CD 110 ಡ್ರೀಮ್ BS6 ಬೈಕ್ ಬಿಡುಗಡೆ!

ಅನ್‌ಲಾಕ್1 ಜೂನ್ 8 ರಿಂದ ಜಾರಿಯಾಗಲಿದೆ. ಬಹುತೇಕ ವಲಯಗಳ ಮೇಲಿನ ನಿರ್ಬಂಧ ಸಡಿಲಿಕೆ ಮಾಡಲಾಗುತ್ತಿದೆ. ಹೀಗಾಗಿ ಆಟೋಮೊಬೈಲ್  ಕ್ಷೇತ್ರ ಮಾರಾಟ ಉತ್ತೇಜಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಸ್ಥಗಿತಗೊಂಡಿದ್ದ ಉತ್ಪಾದನ ಕಾರ್ಯಗಳು ಚುರುಗೊಂಡಿದೆ. ಹೊಂಡಾ ಕಂಪನಿ ನೂತನ CD 110 ಡ್ರೀಮ್ BS6 ಬೈಕ ಬಿಡುಗಡೆಯಾಗಿದೆ.

ಪ್ರತಿಭಟನೆಗೆ ಬೆಚ್ಚಿ ಬಂಕರಲ್ಲಿ ಅಡಗಿದ ಡೊನಾಲ್ಡ್‌ ಟ್ರಂಪ್‌!

 ಕಪ್ಪುವರ್ಣೀಯ ವ್ಯಕ್ತಿಯೊಬ್ಬ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಬಳಿಕ ಅಮೆರಿಕದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮತ್ತಷ್ಟುನಗರಗಳಿಗೆ ವ್ಯಾಪಿಸಿದೆ. ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಚೇರಿಯಾಗಿರುವ ‘ಶ್ವೇತಭವನ’ದ ಬಳಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಶ್ವೇತಭವನದ ಕೆಳಗಿನ ಬಂಕರ್‌ನಲ್ಲಿ ಭದ್ರತಾ ಸಿಬ್ಬಂದಿ ರಕ್ಷಿಸಿಟ್ಟ ಅಪರೂಪದ ಘಟನೆ ನಡೆದಿದೆ.

ಸಿಬ್ಬಂದಿಯನ್ನು ವಿಶೇಷ ವಿಮಾನದಲ್ಲಿ ತವರಿಗೆ ಕಳಿಸಿದ ದುಬೈ ಫಾರ್ಚ್ಯೂನ್‌ ಹೊಟೇಲ್ ಮುಖ್ಯಸ್ಥ

ದುಬೈ ಫಾರ್ಚ್ಯೂನ್ ಹೊಟೇಲ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ವಿಮಾನ ಮೂಲಕ ತವರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಖಾಸಗಿ ವ್ಯವಸ್ಥೆಯಡಿ ಪ್ರಥಮ ಚಾರ್ಟೆಡ್‌ ವಿಮಾನ ಸೋಮವಾರ ರಾತ್ರಿ ಮಂಗಳೂರು ತಲುಪಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ