ಕೊರೋನಾ ಹೀರೋ: ವಲಸೆ ಕಾರ್ಮಿಕರಿಗೆ ಉಚಿತ ಸೇವೆ ನೀಡುತ್ತಿರುವ ಕೂಲಿ!

By Suvarna News  |  First Published Jun 2, 2020, 3:43 PM IST

ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿರುವವರೇ ನಿಜವಾದ ಹೀರೋಗಳು. ಇದೀಗ ರೈಲು ನಿಲ್ದಾಣದಲ್ಲಿ ಲಗೇಜ್ ಸಾಗಿಸುವ ಕೂಲಿ ಇದೀಗ ದೇಶದ ಗಮನಸೆಳೆದಿದ್ದಾರೆ. 


ಲಕ್ನೋ(ಜೂ.02): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಬಹುತೇಕರ ಒಂದಲ್ಲಾ ಒಂದು ರೀತಿ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಅದರಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು, ಕೂಲಿ ಕಾರ್ಮಿಕರು ಸೇರಿದಂತೆ ಹಲವು ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವರು ತಮ್ಮ ಕೈಲಾದ ಸಹಾ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ರೈಲು ನಿಲ್ದಾಣದಲ್ಲಿನ ಕೂಲಿ, ವಲಸೆ ಕಾರ್ಮಿರಿಗೆ ಉಚಿತ ಸೇವೆ ನೀಡೋ ಮೂಲಕ ಹೀರೋ ಆಗಿ ಎಲ್ಲರ ಗಮನೆಸೆಳೆದಿದ್ದಾರೆ.

ರಾಜ್ಯ ಗಡಿ ದಾಟಿ ಸಂಚರಿಸುವವರಿಗೆ ಪಾಸ್ ವ್ಯವಸ್ಥೆ..?.

Latest Videos

undefined

ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿನ 80 ವರ್ಷದ ಕೂಲಿ ಮುಜೀಬುಲ್ಲಾ ರೆಹಮಾನ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಚಾರ್‌ಬಾಗ್ ರೈಲು ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿ ವಾಸವಾಗಿರುವ ಮುಜೀಬುಲ್ಲಾ, ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಿ ರೈಲು ಸೇವೆ ಆರಂಭವಾದಾಗಿನಿಂದ ಉಚಿತ ಸೇವೆ ನೀಡುತ್ತಿದ್ದಾರೆ. ವಲಸೆ ಕಾರ್ಮಿಕರ ಲಗೇಜ್, ಬ್ಯಾಗ್‌ಗಳನ್ನು ಹೊತ್ತು ಸಾಗಿಸುತ್ತಿರುವ ಮುಜೀಬಲ್ಲ ಹಣ ಪಡೆಯುತ್ತಿಲ್ಲ. ನನ್ನಿಂದ ಇಷ್ಟಾದರೂ ಸೇವೆ ಮಾಡಲು ಸಾಧ್ಯಾವಾಗುತ್ತಿದೆ ಅನ್ನೋ ಖುಷಿಯಿದೆ ಎಂದು ಮುಜೀಬುಲ್ಲ ಹೇಳಿದ್ದಾರೆ.

ಅಲ್ಲಿಗೆ ಹೋಗಿ ತುಮಕೂರು ಪೊಲೀಸ್ರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಜಿ-ಐಜಿಪಿ

ಚಾರ್‌ಬಾಗ್ ರೈಲು ನಿಲ್ದಾಣ ನನಗೆ ಎರಡನೇ ಮನೆಯಿದ್ದಂತೆ. ನನ್ನ ಕುಟುಂಬದ ನಿರ್ವಹಣೆ ಇದೇ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿ ಸಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕಷ್ಟವಾಗಿದೆ. ಆದರೆ ಊಟಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಹಲವರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆರ್ಥಿಕ ಸಹಾಯ ಮಾಡಲು ನನ್ನಿಂದ ಸಾಧ್ಯವಿಲ್ಲ. ಆದರೆ ವಲಸೆ ಕಾರ್ಮಿಕರಿಗೆ ನಾನು ಉಚಿತ ಸೇವೆ ನೀಡುತ್ತಿರುವ ಸಂತೃಪ್ತಿ ಇದೆ ಎಂದಿದ್ದಾರೆ.

ರೈಲು ಆಗಮಿಸುವ ವೇಳಾಪಟ್ಟಿ ನೋಡಿಕೊಂಡು ನಾನು ನಿಲ್ದಾಣಕ್ಕೆ ಆಗಮಿಸುತ್ತೇನೆ. ಪ್ರತಿ ರೈಲಿನಲ್ಲಿ ವಲಸೆ ಕಾರ್ಮಿಕರು, ಮಕ್ಕಳು, ಮಹಿಳೆಯರು ತಮ್ಮ ಬ್ಯಾಗ್, ಲಗೇಜು ಹಿಡಿದು ಆಗಮಿಸುತ್ತಾರೆ. ಊಟ,ಆಹಾರವಿಲ್ಲದೆ ಸೊರಗಿರುವ ಅವರ ಮುಖ ನೋಡುವಾಗ ನನಗೂ ಅಷ್ಟೇ ದುಃಖವಾಗುತ್ತಿದೆ. ಅವರಿಗೆ ನನ್ನ ಕೈಲಾದ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ಮುಜೀಬುಲ್ಲಾ ಹೇಳಿದ್ದಾರೆ. ಸಾಮಾಜಿಕ ಸೇವೆಗೆ ಮನಸ್ಸು ಮುಖ್ಯ, ವಯಸ್ಸಲ್ಲ ಅನ್ನೋದನ್ನು ಮುಜಿಬುಲ್ಲಾ ಸಾಬೀತು ಪಡಿಸಿದ್ದಾರೆ.

click me!