ಸಿದ್ದುಗೆ ವಾರ್ನಿಂಗ್ ನೀಡಿದ ಹೆಚ್‌ಡಿಕೆ, ರಾಜಕೀಯದಲ್ಲಿ 'ಅಮೂಲ್ಯ' ನಡಿಗೆ; ಅ.19ರ ಟಾಪ್ 10 ಸುದ್ದಿ!

By Suvarna News  |  First Published Oct 19, 2020, 5:21 PM IST

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಖಡಕ್ ಎಚ್ಚರಿಕೆ ನೀಡಿದ್ದಾರೆ.  ಬಸವನಗುಡಿಯ ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಇತ್ತ ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಅಧಿಕಾರ ಪದಗ್ರಹಣ, iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ ಸೇರಿದಂತೆ ಅಕ್ಟೋಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. 
 


ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಅಧಿಕಾರ ಪದಗ್ರಹಣ!...

Tap to resize

Latest Videos

ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ಸೋಮವಾರ ಭಾರತೀಯ ಜನತಾ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಇಲ್ಲಿದೆ ಚಿತ್ರಗಳು

10 ರೂ. ನೋಟ್ ಇದ್ಯಾ..? ಮನೆಯಲ್ಲಿದ್ದೇ ನೀವು ಗಳಿಸ್ಬೋದು 25 ಸಾವಿರ...

ಕೊರೋನಾ ಸಂದರ್ಭ ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಇರಾದೆ ನಿಮಗಿದೆಯಾ..? ಹಾಗಾದರೆ ಮನೆಯಲ್ಲೇ ಇದ್ದು 25 ಸಾವಿರ ರುಪಾಯಿ ಸಂಪಾದಿಸುವ ಅವಕಾಶವೊಂದಿದೆ.

ಓಣಂ ಮುನ್ನ 54000 ಕೇಸು, ಈಗ 3 ಲಕ್ಷ: ದೇಶಕ್ಕೆ ಕೇರಳದಲ್ಲಿ ಅವಾಂತರ!...

ಕೇರಳದಲ್ಲಿ ಕೊರೋನಾ ನಿಯಂತ್ರಣ ತಪ್ಪಲು ಓಣಂ ಹಬ್ಬದ ವೇಳೆಯಲ್ಲಿ ತೋರಿದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಸಮುದಾಯಕ್ಕೆ ಹಬ್ಬಿದ ಕೊರೋನಾ: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!...

ದೇಶದಲ್ಲಿ ಕೊರೋನಾ ವೈರಸ್‌ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಕೆಲ ತಿಂಗಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದರೂ ನಿರಾಕರಿಸುತ್ತಿದ್ದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅದನ್ನು ಒಪ್ಪಿಕೊಂಡಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ವೈರಸ್‌ ಸಮುದಾಯಕ್ಕೆ ಹರಡಿದೆ ಎಂದು ಹೇಳಿದೆ.

ಮ್ಯಾನ್ ಆಫ್ ದಿ ಮ್ಯಾಚ್ ಶಮಿಗೆ ಕೊಡಬೇಕಿತ್ತು ಎಂದ ಯೂನಿವರ್ಸಲ್ ಬಾಸ್..!...

ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕವಾಗಿ ಗೆಲುವು ದಾಖಲಿಸಿತು. ಈ ಪಂದ್ಯದ ನಿಜವಾದ ಹೀರೋ ಮೊಹಮ್ಮದ್ ಶಮಿ ಎಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೊಂಡಾಡಿದ್ದಾರೆ.

ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಡ; ನೋಡಿದ ಜನ ಗಢಗಢ.!...

ಬೆಣ್ಣೆ ದೋಸೆ ಹೊಟೇಲ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಬಸವನಗುಡಿ ನೆಟ್‌ಕಲ್ಲಪ್ಪ ಸರ್ಕಲ್‌ ನಲ್ಲಿ ಈ ಅವಘಡ ನಡೆದಿದೆ. 

ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ, ಸ್ಟಾರ್ ಪ್ರಚಾರಕಿ ಆಗ್ತಾರಾ..?...

ಚಿತ್ರರಂಗದಿಂದ ದೂರ ಉಳಿದಿರುವ ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅವರು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಅಲ್ಲದೇ ಬೈ ಎಲೆಕ್ಷನ್‌ ಪ್ರಚಾರಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

iPhone ಮೊಬೈಲ್ ರಿಪೇರಿಗೆ ಎಷ್ಟು ಖರ್ಚಾಗುತ್ತೆ? ಬೆಲೆ ಬಹಿರಂಗ ಪಡಿಸಿದ Apple!...

ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪಲ್ ಐಫೋನ್‌ಗೆ ಅಗ್ರಸ್ಥಾನ. ಎಲ್ಲಾ ರೀತಿಯಿಂದ ಐಫೋನ್ ಉತ್ತಮವಾಗಿದೆ. ಬಾಳಿಕೆಯಲ್ಲೂ, ಫೀಚರ್ಸ್, ಹಾಗೂ ವೈಯುಕ್ತಿಕ ಮಾಹಿತಿ ಸುರಕ್ಷಿತವಾಗಿಡಲು ಐಫೋನ್ ಸೂಕ್ತ. ಆದರೆ ಇದರ ಬೆಲೆ ಕೂಡ ದುಬಾರಿಯಾಗಿದೆ. ಇನ್ನು ಈ ಫೋನ್ ರಿಪೇರಿ ಬೆಲೆ ಎಷ್ಟಾಗುತ್ತೆ? ಈ ಕುರಿತ ಮಾಹಿತಿಯನ್ನು ಆ್ಯಪಲ್ ಬಹಿರಂಗ ಪಡಿಸಿದೆ.

ಹಬ್ಬಕ್ಕೆ ಡಬಲ್ ಧಮಾಕ; ಮಾರುತಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!...

ನವರಾತ್ರಿ ಹಬ್ಬಕ್ಕೆ ಮಾರುತಿ ಸುಜುಕಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ 24 ಲಕ್ಷ ಸ್ವಿಫ್ಟ್ ಕಾರುಗಳ ಮಾರಾಟದ ಸಂತದಲ್ಲಿ ಮಾರುತಿ ಇದೀಗ ಹೆಚ್ಚುವರಿ ಫೀಚರ್ಸ್, ಆಕರ್ಷಕ ಬೆಲೆ ಜೊತೆಗೆ ಹಬ್ಬದ ಕೆಲ ರಿಯಾಯಿತಿಗಳು ಲಭ್ಯವಿದೆ. 

ಸಿದ್ದರಾಮಯ್ಯಗೆ 'ವಾರ್ನಿಂಗ್‌' ಕೊಟ್ಟ ಎಚ್.ಡಿ ಕುಮಾರಸ್ವಾಮಿ...!...

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಸಿದ್ದರಾಮಯ್ಯ ಅವರಿಗೆ ಎಚ್‌ಡಿಕೆ ವಾರ್ನಿಂಗ್ ಕೊಟ್ಟಿದ್ದಾರೆ.

click me!