ಭಾರತ ಹಾಗೂ ಬಾಂಗ್ಲಾದೇಶ ನಡುವಿನ ದೆಹಲಿ ಟಿ20 ಪಂದ್ಯಕ್ಕೆ ಉಗ್ರರ ಕರಿನೆರಳು ಬಿದ್ದಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರನ್ನು ಟಾರ್ಗೆಟ್ ಮಾಡಿರುವುದಾಗಿ ರಾಷ್ಟ್ರೀಯ ತನಿಖಾದಳಕ್ಕೆ ಅನಾಮಧೇಯ ಪತ್ರವೊಂದು ಬಂದಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಜೊತೆ ಹೆಚ್ ಡಿ ಕುಮಾರಸ್ವಾಮಿ ಕೈಜೋಡಿಸುತ್ತಾರಾ ಅನ್ನೋ ಅನುಮಾನಗಳಿಗೆ ಖುದ್ದು HDK ಉತ್ತರಿಸಿದ್ದಾರೆ. ಮುಖೇಶ್ ಅಂಬಾನಿಯಿಂದ ಇ ಕಾಮರ್ಸ್ ಸೇರಿದಂತೆ ಅ.29ರ ಟಾಪ್ 10 ಸುದ್ದಿ ಇಲ್ಲಿವೆ.
1) ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ ಎಂದ ಸಿದ್ದು: ಏನದು..?
undefined
ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಮೆರವಣಿಗೆ ವೇಳೆ ಜೆಡಿಎಸ್ ಬಾವುಟ ಹಿಡಿದಿರುವ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವುದು ವಿಡಿಯೋ ವೈರಲ್ ಆಗಿದೆ. ಅದಕ್ಕೆ ಇದೀಗ ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಜತೆಗೆ ತಮ್ಮ ವಿರೋಧಿಗಳಿಗೆ ಸಂದೇಶವೊಮದನ್ನು ರವಾನಿಸಿದ್ದಾರೆ.
2) ಪ್ರಧಾನಿ ಮೋದಿಯೊಂದಿಗೆ ಕೈ ಜೋಡಿಸುತ್ತಾರಾ ಎಚ್.ಡಿ.ಕುಮಾರಸ್ವಾಮಿ?
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಬಿಜೆಪಿಯೆಡೆಗೆ ಮೃದು ಧೋರಣೆ ತಾಳಿದ್ದಾರೆ. ಇದಕ್ಕೆ ಕಾರಣಗಳೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಬಿಜೆಪಿ ಸರಕಾರ ಬೀಳಲು ಬಿಡೋಲ್ಲ ಎನ್ನುತ್ತಿದ್ದಾರೆ. ಜತೆಗೆ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಾರೆ ಎಂಬ ಸುದ್ದಿಗೆ ಎಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.
3) ರಾಜ್ಯೋತ್ಸವ ಪ್ರಶಸ್ತಿ: ವಿವಾದ ಸೃಷ್ಟಿಸಿದೆ ನಿರುಪಮ ರಾಜೇಂದ್ರ ವಿಡಿಯೋ!
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆಗೊಂಡವರ ಪಟ್ಟಿ ಪ್ರಕಟವಾದ ಬೆನ್ನಲ್ಲೇ, ಆಯ್ಕೆ ಸಮಿತಿಯ ಮಹಿಳಾ ಸದಸ್ಯೆಯೊಬ್ಬರ ವಿಡಿಯೋ ಒಂದು ವಿವಾದಕ್ಕೆ ಕಾರಣವಾಗಿದೆ. ರಾಜೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸದಸ್ಯೆಯಾಗಿದ್ದ ನಿರುಪಮ ರಾಜೇಂದ್ರ, ರಾಜ್ಯೋತ್ಸವ ಪ್ರಶಸ್ತಿ ಪಡೆದವರೊಬ್ಬರನ್ನು ಉಲ್ಲೇಖಿಸಿ, ಶುಭಾಶಯ ರೆಕಾರ್ಡ್ ಮಾಡಿ, ನನ್ನಿಂದ ನಿಮಗೆ ಪ್ರಶಸ್ತಿ ಬಂದಿದೆ ಎನ್ನುವ ಅರ್ಥದಲ್ಲಿ ಅದನ್ನ ಬಿಂಬಿಸಿದ್ದಾರೆ.
4) ಕೇರಳ ವಿಧಾನಸಭೆಯಲ್ಲಿ ಕನ್ನಡ, ಭಾಷಾಭಿಮಾನ ಮೆರೆದ ಗಡಿನಾಡ ಶಾಸಕ..!
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸಿ.ಖಮರುದ್ದೀನ್ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸೋ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ.
5) ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಭಾರತ vs ಬಾಂಗ್ಲಾದೇಶ ಪಂದ್ಯ!
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಉಗ್ರರ ಕರಿನೆರಳು ಬಿದ್ದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಗೆ ಉಗ್ರರು ಪತ್ರದ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡ, ಅಭಿಮಾನಿಗಳು, ಪಂದ್ಯ ವೀಕ್ಷಿಸಲು ಬರುವ ಗಣ್ಯರೇ ಟಾರ್ಗೆಟ್ ಎಂದು ಉಗ್ರರು ಹೇಳಿದ್ದಾರೆ.
6) ಚೈತ್ರಾ ಮಾತಿಗೆ ಸುದೀಪ್ ಗರಂ; 24 ವರ್ಷ ಇಂಡಸ್ಟ್ರಿಲಿ ಸುಮ್ಮನೆ ಇಲ್ಲ ಎಂದ ಕಿಚ್ಚ
ಬಿಗ್ ಬಾಸ್ ನಿಂದ ಚೈತ್ರಾ ವಾಸುದೇವನ್ ಮೇಲೇ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಸ್ಟೇಜ್ ಮೇಲೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿದ್ದು ಇಲ್ಲಿ ಬಂದು ನಿಂತಿಲ್ಲ. ಬಹಳ ನೊಂದುಕೊಂಡು ಹೇಳುತ್ತಿದ್ದೇನೆ' ಎಂದು ಮಾತಿನಲ್ಲೇ ಚಾಟಿ ಬೀಸಿದ್ದಾರೆ.
7) ಏನೂ ತಿಳಿಯದೆ ಎರಡನೇ ಮದುವೆಯಾದ ಜೈಜಗದೀಶ್; ವಿಜಯಲಕ್ಷ್ಮಿ ಧೈರ್ಯಕ್ಕೆ ಜೈ!
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಚಾಕೋಲೆಟ್ ಬಾಯ್ ಜೈಜಗದೀಶ್ ಮೊದಲನೇ ಹಾಗೂ ಎರಡನೇ ಮದುವೆಯ ವಿಚಾರವನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.
8) ಮುಕೇಶ್ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ
ಇ- ಕಾಮರ್ಸ್ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗೆ ಪೈಪೋಟಿಯಾಗಿ ಇ- ಕಾಮರ್ಸ್‌ನ ದೈತ್ಯ ಸಂಸ್ಥೆಯೊಂದನ್ನು ನಿರ್ಮಿಸಲು ಮುಂದಾಗಿರುವ ಭಾರತದ ಅಗ್ರ ಶ್ರೀಮಂತ ಮುಕೇಶ್ ಅಂಬಾನಿ, 1.7 ಲಕ್ಷ ಕೋಟಿ ರು.ಮೊತ್ತದಲ್ಲಿ ಡಿಜಿಟಲ್ ಸೇವಾ ಸಂಸ್ಥೆಯೊಂದನ್ನು ಆರಂಭಿಸುವ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ.
9) ಅನರ್ಹರ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಯಡಿಯೂರಪ್ಪ ಮುಹೂರ್ತ ಫಿಕ್ಸ್: ಕ್ಯಾಂಪೇನ್ ಶೆಡ್ಯೂಲ್ ಸಹ ರೆಡಿ..!
ಒಂದು ಕಡೆ ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಮೊನ್ನೇ ನಡೆದಿ ಕೋರ್ ಕಮಿಟಿ ಸಭೆಯಲ್ಲಿ ಮೂಲ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ. ಆದ್ರೆ, ಇತ್ತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪ್ರಚಾರಕ್ಕೆ ಮುಹೂರ್ತವನ್ನು ಸಹ ಫಿಕ್ಸ್ ಮಾಡಿದ್ದಾರೆ.
10) ಶೃಂಗೇರಿಯ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು ಪೊಲೀಸರ ಗುಂಡಿಗೆ ಖಲ್ಲಾಸ್!
ಕೇರಳ ಪೊಲೀಸರು ಪಾಲಕ್ಕಡ್‌ನಲ್ಲಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಅವರಲ್ಲಿ ಇಬ್ಬರು ಕರ್ನಾಟಕ ಮೂಲದ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು. ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕನೊಬ್ಬ ಗಾಯಗೊಂಡಿದ್ದಾನೆ.