ಐಸಿಸ್ ಮುಖ್ಯಸ್ಥ ಅಬುಲ್ ಅಲ್ ಬಾಗ್ದಾದಿ| ಅಮೆರಿಕ-ಖುರ್ದಿಷ್ ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಹತನಾದ ಐಸಿಸ್ ಮುಖ್ಯಸ್ಥ| ಬಾಗ್ದಾದಿ ಅಡಗುತಾಣ ಪತ್ತೆ ಹಚ್ಚಿದ ಅಮೆರಿಕ ಸೇನೆಯ ನಾಯಿ| 75ನೇ ರೇಂಜರ್ಸ್ ರೆಜಿಮೆಂಟ್'ನ ಡೆಲ್ಟಾ ಫೋರ್ಸ್'ನ canine(ಕೋರೆಹಲ್ಲು) ನಾಯಿ| ಬಾಗ್ದಾದಿ ಪತ್ತೆ ಹಚ್ಚಿದ್ದ ನಾಯಿಯ ಫೋಟೋ ಶೇರ್ ಮಾಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್| ಮಿಲಿಟರಿ ನಾಯಿಯ ಅಸಲಿ ಹೆಸರು ಹೇಳಲು ನಿರಾಕರಿಸಿದ ಟ್ರಂಪ್|
ವಾಷಿಂಗ್ಟನ್(ಅ.29): ಐಸಿಸ್ ಮುಖ್ಯಸ್ಥ ಅಬುಲ್ ಅಲ್ ಬಾಗ್ದಾದಿಯನ್ನು ಅಮೆರಿಕ-ಖುರ್ದಿಷ್ ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ. ಈ ಮೂಲಕ ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆಯ ಮುಖ್ಯಸ್ಥ ನರಕಕ್ಕೆ ಪ್ರಯಾಣ ಬೆಳೆಸಿದ್ದಾನೆ.
ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ
undefined
ಅಮೆರಿಕ-ಖುರ್ದಿಷ್ ಸೇನೆಯ ಸತತ ಪ್ರಯತ್ನದ ಬಳಿಕ ಬಾಗ್ದಾದಿಯನ್ನು ಕೊಲ್ಲಲಾಗಿದೆ. ಉತ್ತರ ಸಿರಿಯಾದ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಬಾಗ್ದಾದಿಯನ್ನು ಪತ್ತೆ ಹಚ್ಚಿ ಆತನನ್ನು ಇನ್ನಿಲ್ಲವಾಗಿಸಲಾಗಿದೆ. ಅಮೆರಿಕ ಸೇನೆ ಈಗಾಗಲೇ ಬಾಗ್ದಾದಿ ಶವದ ಅಂತ್ಯಸಂಸ್ಕಾರವನ್ನು ಸಮುದ್ರದಲ್ಲಿ ಮಾಡಿದೆ.
ಈ ಮಧ್ಯೆ ಅಬು ಅಲ್ ಬಾಗ್ದಾದಿ ಅಡಗುತಾಣ ಪತ್ತೆ ಹಚ್ಚಿದ ಅಮೆರಿಕ ಸೇನೆಯ ನಾಯಿಯ ಫೋಟೋವನ್ನು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶೇರ್ ಮಾಡಿದ್ದಾರೆ.
ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!
ಬಾಗ್ದಾದಿ ಅಡಗುತಾಣದತ್ತ ಸೈನಿಕರನ್ನು ಮುನ್ನಡೆಸಿದ್ದ ಈ ನಾಯಿ, ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡ ಗುಹೆಯನ್ನು ಸೈನಿಕರಿಗೆ ತೋರಿಸಿತ್ತು. ಈ ನಾಯಿಯ ಫೋಟೋ ಶೇರ್ ಮಾಡಿರುವ ಟ್ರಂಪ್, ಇದರ ಹೆಸರನ್ನು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
We have declassified a picture of the wonderful dog (name not declassified) that did such a GREAT JOB in capturing and killing the Leader of ISIS, Abu Bakr al-Baghdadi! pic.twitter.com/PDMx9nZWvw
— Donald J. Trump (@realDonaldTrump)ಅಮೆರಿಕ ಸೇನೆಯಿಂದ ತರಬೇತಿ ಪಡೆದಿರುವ ಈ ನಾಯಿ ದಾಳಿಯಲ್ಲಿ ಗಾಯಗೊಂಡಿದ್ದು, ಸೂಕ್ತ ಚಿಕಿತ್ಸೆಗಾಗಿ ಅಮೆರಿಕಕ್ಕೆ ವಾಪಸ್ ಕರೆತರಲಾಗಿದೆ ಎಂದೂ ಟ್ರಂಪ್ ಮಾಹಿತಿ ನೀಡಿದ್ದಾರೆ.
ಅಮೆರಿಕ ಸೇನೆಯ 75ನೇ ರೇಂಜರ್ಸ್ ರೆಜಿಮೆಂಟ್'ನ ಡೆಲ್ಟಾ ಫೋರ್ಸ್'ನಲ್ಲಿ ಕರ್ತವ್ಯ ನಿರತವಾಗಿರುವ ಈ ನಾಯಿಗೆ ಸೈನಿಕರು ಪ್ರೀತಿಯಿಂದ canine(ಕೋರೆಹಲ್ಲು) ಎಂದೇ ಕರೆಯುತ್ತಾರೆ.
ಐಸಿಸ್ ಡೆಡ್ ಚೀಫ್ ಬಾಗ್ದಾದಿ: ಏಜೆಂಟ್‌ರು ಅಂಡರ್‌ವೇರ್ ಕದ್ದಿದ್ದು ಯಾಕಾಗಿ?
ಆದರೆ ಈ ನಾಯಿಯ ಅಸಲಿ ಹೆಸರನ್ನು ಬಹಿರಂಗಗೊಳಿಸಲು ನಿರಾಕರಿಸಿರುವ ಟ್ರಂಪ್, ಇದರ ಸಹಾಯದಿಂದಲೇ ವಿಶ್ವದ ಮೋಸ್ಟ್ ವಾಂಟೇಡ್ ಉಗ್ರ ಹತನಾಗಿದ್ದು ಎಂದು ಟ್ವಿಟ್ ಮಾಡಿದ್ದಾರೆ.