ಕುಂಭಮೇಳದ ಸಿದ್ಧತೆ ಫಿಪಾಗಿಂತ ಚೆನ್ನಾಗಿತ್ತು: ಹಾರ್ವರ್ಡ್?

Published : Feb 23, 2019, 04:35 PM ISTUpdated : Feb 23, 2019, 04:52 PM IST
ಕುಂಭಮೇಳದ ಸಿದ್ಧತೆ ಫಿಪಾಗಿಂತ ಚೆನ್ನಾಗಿತ್ತು: ಹಾರ್ವರ್ಡ್?

ಸಾರಾಂಶ

ಕುಂಭಮೇಳದ ಸಿದ್ಧತೆ ಹೊಗಳಿದ ಹಾರ್ವರ್ಡ್ ವಿವಿ?| 'ಕುಂಭಮೇಳದ ಸಿದ್ಧತೆ ಫಿಫಾ ಸಿದ್ಧತೆಯನ್ನೂ ನಾಚಿಸುವಂತ್ತಿತ್ತು'| 2013ರ ಕುಂಭಮೇಳದ ಕುರಿತು ಹಾರ್ವರ್ಡ್ ವಿವಿ ವಿದ್ಯಾರ್ಥಿಗಳಿಂದ ಸಂಶೋಧನೆ| 2014ರ ಫಿಫಾ ವಿಶ್ವಕಪ್‌ಗಿಂತ ಅಚ್ಚುಕಟ್ಟಾಗಿದ್ದ ಸಿದ್ಧತೆ| ಕಾಮನ್‌ವೆಲ್ತ್ ಗೇಮ್ಸ್ ಸಿದ್ಧತೆ ಕೂಡ ಕುಂಭಮೇಳದ ಸಿದ್ಧತೆ ಮುಂದೆ ಏನು ಅಲ್ವಂತೆ|

ಕೇಂಬ್ರಿಡ್ಜ್(ಫೆ.23): 2013ರ ಕುಂಭಮೇಳದ ಸಿದ್ಧತೆ ಕುರಿತು ಬ್ರಿಟನ್ ನ ಹಾರ್ವರ್ಡ್ ವಿವಿ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕುಂಭ ಮೇಳ: ಅನೂಹ್ಯ, ಅಗಾಧ, ಅಪ್ರತಿಮ!

2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳಕ್ಕೆ ಉತ್ತರ ಪ್ರದೇಶದ ಅಂದಿನ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಅತ್ಯಂತ ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಹಾರ್ವರ್ಡ್ ಹೇಳಿದೆ ಎನ್ನಲಾಗಿದೆ.

ಉತ್ತರ ಆಯ್ತು, ಈಗ ದಕ್ಷಿಣ ಕುಂಭಮೇಳ!

ಅಲ್ಲದೇ ಕುಂಭಮೇಳದ ಸಿದ್ಧತೆಗಳು 2014ರ ಫಿಪಾ ಫುಡ್ಬಾಲ್ ವಿಶ್ವಕಪ್‌ ಸಿದ್ಧತೆಗಳನ್ನು ನಾಚಿಸುವಂತಿತ್ತು ಎಂದೂ ಹಾರ್ವರ್ಡ್ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯೋಗಿ ಸಂಪುಟ ಕುಂಭಸ್ನಾನ: ತರೂರ್‌ ವ್ಯಂಗ್ಯ ಟ್ವೀಟ್‌ ವಿವಾದ

ಹಾರ್ವರ್ಡ್ ವಿದ್ಯಾರ್ಥಿಗಳ ತಂಡ ನಡೆಸಿದ ಸಂಶೋಧನೆಯ ಪ್ರಕಾರ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಸಿದ್ಧತೆಗಿಂತಲೂ 2013ರ ಕುಂಭಮೇಳದ ಸಿದ್ಧತೆ ಅಚ್ಚುಕಟ್ಟಾಗಿತ್ತು ಎನ್ನಲಾಗಿದೆ.

ಕುಂಭಮೇಳದಿಂದ 1.2 ಲಕ್ಷ ಕೋಟಿ ಆದಾಯ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Google ಜೆಮಿನಿಯನ್ನೇ ಪತ್ನಿಯೆಂದು ನಂಬಿ ಜೀವ ಕಳೆದುಕೊಂಡ ವ್ಯಕ್ತಿ! ಮೃತ ಹೆಂಡತಿಗಾಗಿ ಜೀವಕೊಟ್ಟ
ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ಬೇಕು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ