‘ಆಂಧ್ರದಲ್ಲಿ ಮುಂದಿನ ಚುನಾವಣೆ ವೇಳೆ ‘ಚಂದ್ರ ಗ್ರಹಣ‘

By Web DeskFirst Published Feb 23, 2019, 4:06 PM IST
Highlights

ಆಂಧ್ರ ಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಕಾಲ ಮುಕ್ತಾಯವಾಯಿತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

ರಾಜಮಂಡ್ರಿ : ಆಂಧ್ರ ಪ್ರದೇಶದಲ್ಲಿ  ಟಿಡಿಪಿ ಮುಖಂಡ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ಕಾಲ ಮುಗಿಯಿತು. ಅವರು ಹಲವು ನಾಯಕರಿಗೆ ಬೆನ್ನಿಗೆ ಚೂರಿ ಹಾಕಿರುವುದು ಅವರ ಅಳಿವಿಗೆ ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. 

ಅವರ ಮಾವ NT ರಾಮರಾವ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ, ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರಿಗೂ ವಂಚನೆ ಎಸಗಿದ್ದಾರೆ. 

ವಿಶೇಷ ಸ್ಥಾನಕ್ಕಾಗಿ ಧರಣಿ ನಡೆಸುವ ಚಂದ್ರಬಾಬು ನಾಯ್ಡು ರಾಜ್ಯದ ಅಭಿವೃದ್ಧಿಯನ್ನು ಮರೆತುಬಿಟ್ಟಿದ್ದಾರೆ. ಧರಣಿ ಬಿಟ್ಟು ಮೊದಲು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. 

ಬೆನ್ನಿಗೆ ಚೂರಿ ಹಾಕುವುದಕ್ಕೆ ದೇಶದಲ್ಲಿ ಯಾವುದಾದರೂ ಪ್ರಶಸ್ತಿ ನೀಡುವುದಾದಲ್ಲಿ ಮೊದಲು ಚಂದ್ರಬಾಬು ನಾಯ್ಡು ಅವರಿಗೆ ನೀಡಬೇಕು ಎಂದು ಅಮಿತ್ ಶಾ ಹೇಳಿದರು. 

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೋಲನ್ನು ಅನುಭವಿಸಿದರೂ ಇದೀಗ ಮತ್ತೆ ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದಾಗಿ ವ್ಯಂಗ್ಯವಾಡಿದ್ದಾರೆ. 

click me!