ಹುತಾತ್ಮರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 'ಕೈ' ನಾಯಕನ ಮೇಲೆ ನೋಟುಗಳ ಮಳೆ!

Published : Feb 23, 2019, 04:10 PM ISTUpdated : Feb 23, 2019, 04:14 PM IST
ಹುತಾತ್ಮರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 'ಕೈ' ನಾಯಕನ ಮೇಲೆ ನೋಟುಗಳ ಮಳೆ!

ಸಾರಾಂಶ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗಾಗಿ ದೇಶವೇ ಕಂಬನಿ ಮಿಡಿಯುತ್ತಿದೆ. ಹೀಗಿರುವಾಗ ಅವರಿಗಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೈ ಶಾಸಕರು ಉದ್ಧಟತನ ಮೆರೆದಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ? ಇಲ್ಲಿದೆ ವಿವರ

ಉತ್ತರಾಖಂಡ[ಫೆ.23]: ಒಂದೆಡೆ ದೇಶ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಕಳೆದುಕೊಂಡ ದುಃಖದಲ್ಲಿದೆ. ಆದರೆ ಇತ್ತ ಉತ್ತರಾಖಂಡ್‌ನ ಹರಿದ್ವಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಹುತಾತ್ಮರನ್ನು ಗೇಲಿ ಮಾಡಿರುವ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಹಾಡೊಂದನ್ನು ಹಾಕಲಾಗಿದ್ದು, ಈ ವೇಳೆ ನೋಟುಗಳನ್ನು ಎಸೆಯಲಾಗಿದೆ. ಇಲ್ಲಿನ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮಗ ವೀರೇಂದ್ರ ರಾವತ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರೆಂಬುವುದು ಗಮನಾರ್ಹ ವಿಚಾರ. 

ಫೆ. 22 ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿದ್ದ ಗಾಯಕರ ಮೇಲೆ ಮಾತ್ರವಲ್ಲದೇ, ಮುಖ್ಯ ಅತಿಥಿ ವಿರೆಂದ್ರ ರಾವತ್ ಮೇಲೂ ಕಾರ್ಯಕರ್ತರು ನೋಟುಗಳನ್ನು ಎಸೆದಿದ್ದಾರೆ. ಆದರೆ ಕಾರ್ಯಕರ್ತರು ಹೀಗೆ ವರ್ತಿಸುತ್ತಿದ್ದರೂ, ಅವರನ್ನು ತಡೆಯದ ವಿರೇಂದ್ರ ರಾವತ್ ಖುಷಿಯಲ್ಲಿ ನಕ್ಕಿದ್ದು ಮತ್ತಷ್ಟು ಟೀಕೆಗೆ ಕಾರಣವಾಗಿದೆ. 

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿರೇಂದ್ರ ರಾವತ್ 'ಇದೊಂದು ಶ್ರದ್ಧಾಂಜಲಿ ಸಭೆ ಹಾಗೂ ಈ ಸಭೆಯ ಮೂಲಕ 56 ಇಂಚಿನ ಎದೆಯುಳ್ಳ ಪ್ರಧಾನಿ ಮೋದಿಯನ್ನು ಎಬ್ಬಿಸಲು ಇಚ್ಛಿಸುತ್ತೇನೆ' ಎಂದಿದ್ದಾರೆ.

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಈ ಬಲಿದಾನವನ್ನು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕ ಹುತಾತ್ಮ ಯೋಧನ ಚಿತೆಯ ಬಳಿ ಚಪ್ಪಲಿ ಹಾಕಿ ಕುಳಿತಿದ್ದರೆಂಬ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಕಾಂಗ್ರೆಸ್ ಕೂಡಾ ಇದನ್ನು ಕಟುವಾಗಿ ಖಂಡಿಸಿತ್ತು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!