ಸೆಕ್ಸ್‌ ವೇಳೆ ಉಸಿರುಗಟ್ಟಿ ಪ್ರಿಯತಮೆ ಸಾವು : ಪ್ರಿಯಕರನ ವಿರುದ್ಧ ಕೇಸ್‌!

Published : Jul 04, 2018, 09:52 AM ISTUpdated : Jul 04, 2018, 11:44 AM IST
ಸೆಕ್ಸ್‌ ವೇಳೆ ಉಸಿರುಗಟ್ಟಿ ಪ್ರಿಯತಮೆ ಸಾವು : ಪ್ರಿಯಕರನ ವಿರುದ್ಧ ಕೇಸ್‌!

ಸಾರಾಂಶ

ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಜೋಡಿಯೊಂದರ ಅತಿಯಾದ ವರ್ತನೆಯಿಂದ, ಸೆಕ್ಸ್‌ ವೇಳೆ ಪ್ರಿಯತಮೆ ಸಾವನ್ನಪ್ಪಿದ ಘಟನೆ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. 

ಮುಂಬೈ: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಮುಂಬೈಯಲ್ಲಿ ಇಸ್ರೇಲಿ ಜೋಡಿಯೊಂದರ ಅತಿಯಾದ ವರ್ತನೆಯಿಂದ, ಸೆಕ್ಸ್‌ ವೇಳೆ ಪ್ರಿಯತಮೆ ಸಾವನ್ನಪ್ಪಿದ ಘಟನೆ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಈಗ ಪ್ರಿಯತಮೆಯ ಸಾವಿಗೆ ಕಾರಣನಾದ 23ರ ಹರೆಯದ ಇಸ್ರೇಲಿ ಪ್ರಜೆಯ ವಿರುದ್ಧ ಐಪಿಸಿಯಡಿ ಉದ್ದೇಶಪೂರ್ವಕವಲ್ಲ ಹತ್ಯೆ ಯತ್ನದ ಪ್ರಕರಣ ದಾಖಲಾಗಿದೆ.

ಕಳೆದ ವರ್ಷದ ಮಾರ್ಚ್ ಲ್ಲಿ ಇಸ್ರೇಲ್‌ ಜೋಡಿಯೊಂದು ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿತ್ತು. ಈ ವೇಳೆ ಜೋಡಿ ಕೊಲಬಾದ ಹೋಟೆಲೊಂದರಲ್ಲಿ ತಂಗಿತ್ತು. ಹೋಟೆಲ್‌ ಕೋಣೆಯಲ್ಲಿ ಯುವಕ ಒರಿರಾನ್‌ ಯಾಕೊವ್‌ ತನ್ನ 20 ವರ್ಷದ ಪ್ರಿಯತಮೆಯ ಜೊತೆ ಸೆಕ್ಸ್‌ ನಡೆಸುತ್ತಿದ್ದಾಗ, ಆಕೆಯ ಕತ್ತಿನ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಉಸಿರುಗಟ್ಟಿಕೊನೆಯುಸಿರೆಳೆದಿದ್ದಾಳೆ.

ಪ್ರಿಯತಮೆಯ ಚಲನವಲನ ನಿಂತಾಗ ಯಾಕೊವ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆ ಮೃತಪಟ್ಟಿದ್ದು ದೃಢವಾಗಿತ್ತು. ಆದರೆ ಸಾವಿಗೆ ಕಾರಣ ಸ್ಪಷ್ಟವಾಗಿರಲಿಲ್ಲ. ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಯುವತಿ ಉಸಿರುಗಟ್ಟಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಹೀಗಾಗಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಪತ್ನಿಯನ್ನು ಸೆಕ್ಸ್ ಮೂಡಿಗೆ ತರಿಸುವ ಟಿಪ್ಸ್‌ಗಳಿವು
ಚೊಚ್ಚಲ ಮಗುವಾದ ನಂತರ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆಯೇ ?
ಸೆಕ್ಸ್ ಮಾಡುವ ಸಂದರ್ಭಗಳಲ್ಲಿ ಪುರುಷರಿಗೆ ಕಾಡುವ ನಿಜವಾದ ಚಿಂತೆಗಳಿವು
ಈ ಆಹಾರಗಳು ವಯಾಗ್ರಗಿಂತ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತವೆ!
ಸೆಕ್ಸ್ ಬಗ್ಗೆ ತಮ್ಮ ಪತಿಯಂದಿರ ಸಿಕ್ರೇಟ್ ಬಿಚ್ಚಿಟ್ಟ ಮಹಿಳೆಯರು
ವರ್ಜಿನ್ ಹಾಗೂ ಕನ್ಯೆಯಲ್ಲ ಎಂಬ ಪುರುಷ - ಮಹಿಳೆಯರಿಗಿರುವ ಸಂದೇಹಕ್ಕೆ ಇಲ್ಲಿದೆ ಉತ್ತರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!