ಉಗ್ರರ ಇಂಟರ್ನೆಟ್‌ ಬಳಕೆಗೆ ಕಡಿವಾಣ

Published : Jun 30, 2019, 09:07 AM IST
ಉಗ್ರರ ಇಂಟರ್ನೆಟ್‌ ಬಳಕೆಗೆ ಕಡಿವಾಣ

ಸಾರಾಂಶ

ಜಿ-20 ದೇಶಗಳ ನಾಯಕರು ಭಯೋತ್ಫಾದನೆಯ ವಿರುದ್ಧ ಸಮರ ಸಾರಿದ್ದು, ಭಯೋತ್ಪಾದಕ ಕೃತ್ಯಗಳಿಗೆ ಹಣ ಹೊಂದಿಸಲು ಉಗ್ರಗಾಮಿಗಳು ಇಂಟರ್ನೆಟ್‌ ಬಳಸುವ ಪರಿಪಾಠಕ್ಕೆ ಕಡಿವಾಣ ಹಾಕುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಒಸಾಕ (ಜೂ.30): ಭಯೋತ್ಪಾದಕ ಕೃತ್ಯಗಳಿಗೆ ಹಣ ಹೊಂದಿಸಲು ಉಗ್ರಗಾಮಿಗಳು ಇಂಟರ್ನೆಟ್‌ ಬಳಸುವ ಪರಿಪಾಠಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಜಿ-20 ದೇಶಗಳ ನಾಯಕರು ಶನಿವಾರ ನಿಶ್ಚಯಿಸಿದ್ದಾರೆ. ಇಂಟರ್ನೆಟ್‌ ಎಂಬುದು ಮುಕ್ತ, ಉಚಿತ ಹಾಗೂ ಭದ್ರವಾಗಿರಬೇಕು. ಭಯೋತ್ಪಾದಕರ ಸುರಕ್ಷಿತ ನೆಲೆಯಾಗಬಾರದು ಎಂದು ಈ ನಾಯಕರು ಪ್ರತಿಪಾದಿಸಿದ್ದಾರೆ.

ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!

ಜಪಾನ್‌ನ ಬೃಹತ್‌ ಬಂದರು ನಗರಿ ಒಕಾಸದಲ್ಲಿ ಶುಕ್ರವಾರದಿಂದ ನಡೆದ ಎರಡು ದಿನಗಳ ಜಿ-20 ನಾಯಕರ ಶೃಂಗಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ನಾಯಕರು, ನಮ್ಮಗಳ ನಾಗರಿಕರ ಭದ್ರತೆಯನ್ನು ಕಾಪಾಡಿಕೊಳ್ಳುವುದು ನಾಯಕರಾಗಿ ನಮ್ಮ ಮೇಲಿರುವ ಅತಿದೊಡ್ಡ ಜವಾಬ್ದಾರಿ. ಭಯೋತ್ಪಾದನೆಯನ್ನು ತಡೆಯುವುದು ಹಾಗೂ ಹತ್ತಿಕ್ಕುವುದು ಯಾವುದೇ ದೇಶದ ಮೊತ್ತ ಮೊದಲ ಹೊಣೆ. ಉಗ್ರರ ಇಂಟರ್ನೆಟ್‌ ಬಳಕೆಯಿಂದ ನಮ್ಮ ಜನರನ್ನು ರಕ್ಷಿಸಿಕೊಳ್ಳುವ ಬದ್ಧತೆಯನ್ನು ಒಸಾಕದಲ್ಲಿ ಮತೊಮ್ಮೆ ವ್ಯಕ್ತಪಡಿಸುತ್ತಿದ್ದೇವೆ ಎಂದು ನಾಯಕರು ತಿಳಿಸಿದ್ದಾರೆ.

ಕಿತ್ನಾ ಅಚ್ಛಾ ಹೈ ಮೋದಿ: ಆಸೀಸ್ ಪ್ರಧಾನಿ ಸೆಲ್ಫಿ ನೋಡಿ!

ಒಂದೇ ದಿನ 6 ದೇಶಗಳ ಜತೆ ಮೋದಿ ಮಾತುಕತೆ

ಜಿ-20 ಶೃಂಗಸಭೆಯ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಆರು ದೇಶಗಳ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇಂಡೋನೇಷ್ಯಾ, ಬ್ರೆಜಿಲ್‌, ಟರ್ಕಿ, ಆಸ್ಪ್ರೇಲಿಯಾ, ಸಿಂಗಾಪುರ ಮತ್ತು ಚಿಲಿ ದೇಶದ ನಾಯಕರ ಜೊತೆ ವ್ಯಾಪಾರ, ಭಯೋತ್ಪಾದನೆ ನಿಗ್ರಹ, ಸಮುದ್ರ ಭದ್ರತೆ ಮತ್ತು ಕ್ರೀಡೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಶುಕ್ರವಾರದಿಂದ ಎರಡು ದಿನ ನಡೆದ ಈ ಶೃಂಗಕ್ಕೆ ಶನಿವಾರ ತೆರೆಬಿದ್ದಿತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಜಪಾನ್‌ ಪ್ರವಾಸ ಮುಗಿಸಿ ಮೋದಿ ಅವರು ಶನಿವಾರ ರಾತ್ರಿ ಭಾರತಕ್ಕೆ ವಾಪಸ್‌ ಆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!