ಕಾಂಗ್ರೆಸ್ಸಲ್ಲೀಗ ರಾಜೀನಾಮೆ ಪರ್ವ

By Web DeskFirst Published Jun 30, 2019, 8:41 AM IST
Highlights

ಕಾಂಗ್ರೆಸ್ ಪಾಳಯದಲ್ಲೀಗ ರಾಜೀನಾಮೆ ಪರ್ವ ಮುಂದುವರೆದಿದ್ದು, ಕಾಂಗ್ರೆಸ್‌ನ 130 ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎನ್ನುವುದನ್ನು ನೀವೇ ನೋಡಿ...

ನವದೆಹಲಿ[ಜೂ.30]: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡು, ಪಕ್ಷದ ವ್ಯವಹಾರಗಳಿಂದ ದೂರ ಸರಿದಿರುವ ರಾಹುಲ್‌ ಗಾಂಧಿ ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಪಕ್ಷದೊಳಗೆ ರಾಜೀನಾಮೆ ಪರ್ವ ಶುರುವಾಗಿದೆ. ಎರಡು ದಿನಗಳ ಅಂತರದಲ್ಲಿ ವಿವಿಧ ಘಟಕಗಳ 165 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿ, ರಾಹುಲ್‌ಗೆ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ.

ದಕ್ಷಿಣ ಭಾರತಕ್ಕೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ : ರೇಸಲ್ಲಿ ಯಾರು?

ರಾಹುಲ್‌ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿ ಒಂದು ತಿಂಗಳಾಗಿದೆ. ಅವರಿಗೆ ಬೆಂಬಲ ಸೂಚಿಸಿ ರಾಜೀನಾಮೆ ಘೋಷಣೆ ಮಾಡಿದ್ದೇವೆ ಎಂದು ಈ ಪದಾಧಿಕಾರಿಗಳು ಸಾರಿದ್ದಾರೆ. ಒಂದು ವೇಳೆ ಹಿರಿಯ ನಾಯಕರು ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ, ಪಕ್ಷವನ್ನು ಮರುಸಂಘಟಿಸಲು ರಾಹುಲ್‌ ಅವರಿಗೆ ಅವಕಾಶ ನೀಡದೇ ಹೋದಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೆಲ ಯುವ ಮುಂದಾಳುಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಿಯಾಂಕಾ ಆರೋಪಕ್ಕೆ ತಿರುಗೇಟು ಕೊಟ್ಟ ಯುಪಿ ಪೊಲೀಸ್!

ಕಾಂಗ್ರೆಸ್‌ ಕೇಂದ್ರ ಕಚೇರಿ ಇರುವ ದೆಹಲಿಯ ಅಕ್ಬರ್‌ ರಸ್ತೆಯಲ್ಲಿ ಸುಮಾರು 300 ನಾಯಕರು ಹಾಗೂ ಕಾರ್ಯಕರ್ತರು ಶುಕ್ರವಾರದ ದಿಢೀರ್‌ ಜಮಾವಣೆಗೊಂಡರು. ಬಳಿಕ 130 ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಈ ನಡುವೆ, ಉತ್ತರಪ್ರದೇಶ ಕಾಂಗ್ರೆಸ್‌ ಸಮಿತಿಯ 35 ಪದಾಧಿಕಾರಿಗಳು ಶನಿವಾರ ರಾಜೀನಾಮೆ ಪ್ರಕಟಿಸಿದ್ದಾರೆ. ಯುಪಿಸಿಸಿಯಲ್ಲಿ ಒಟ್ಟು 100 ಪದಾಧಿಕಾರಿಗಳು ಇದ್ದಾರೆ.
 

click me!