ಉಗ್ರರಿಂದ ಕಂದನ ಕಾಪಾಡಿದ ಯೋಧ, ವಿಕ್ಟೋರಿಯಾದಲ್ಲಿ ನಿರ್ಲಕ್ಷ್ಯ: ಇಲ್ಲಿದೆ ಜು. 01ರ ಟಾಪ್ 10 ಸುದ್ದಿ!

By Suvarna News  |  First Published Jul 1, 2020, 5:54 PM IST

ಒಂದೆಡೆ ಕೊರೋನಾದಿಂದಾದಿ ದೇಶದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೆ, ಅತ್ತ ಗಡಿಯಲ್ಲಿ ಚೀನಾ ಹಾವಳಿ ಆರಂಭವಾಗಿದೆ. ಹೀಗಿರುವಾಗ ಡ್ರ್ಯಾಗನ್‌ ನಿಯಂತ್ರಿಸಲು ಭಾರತ ಡಿಜಿಟಲ್‌ ಸ್ಟ್ರೈಕ್ ನೀಡಿದೆ. ಸದ್ಯ ಅಮೆರಿಕ ಕೂಡಾ ಭಾರತದ ಈ ನಡೆ ಬೆನ್ನಲ್ಲೇ ಚೀನಾದ ಎರಡು ಕಂಪನಿಗಳಿಗೆ ನಿರ್ಬಬಂಧ ಹೇರಿದೆ. ಇವೆಲ್ಲದರ ನಡುವೆ ಅತ್ತ ಉಗ್ರರು ಸಿಆರ್‌ಪಿಎಫ್‌ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಯೋಧ ಹಾಗೂ ಸ್ಥಳೀಯರೊಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಯೋಧರು ಮೂರು ವರ್ಷದ ಕಂದನನ್ನು ರಕ್ಷಿಸಿರುವ ಫೋಟೋ ಸದ್ಯ ವೈರಲ್ ಆಗಿದೆ. ಇವಿಷ್ಟೇ ಅಲ್ಲದೇ ಜು. 01ರ ಟಾಪ್‌ ಟೆನ್ ಸುದ್ದಿಗಳು ಇಲ್ಲಿವೆ ನೋಡಿ.


ಉಗ್ರರ ಗುಂಡಿನ ದಾಳಿ ನಡುವೆ ಭಾರತೀಯ ಯೋಧನ ಕೈಯ್ಯಲ್ಲಿ ಸುರಕ್ಷಿತ ಈ ಕಂದ!

Tap to resize

Latest Videos

ಜಮ್ಮು ಕಾಶ್ಮೀರದ ಸೋಪೋರ್‌ನಲ್ಲಿ ಸಿಆರ್‌ಪಿಎಫ್‌ ತಂಡದ ಮೇಲೆ ಉಗ್ರರಿಂದ ನಡೆದ ಗುಮಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಓರ್ವ ಸ್ಥಳೀಯ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಿರುವಾಗ ಯೋಧನೊಬ್ಬ ಪುಟ್ಟ ಕಂದನ್ನನು ಎತ್ತಿಕೊಂಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

'ಒಬ್ಬ ಕಳ್ಳ, ಇನ್ನೊಬ್ಬ ಸುಳ್ಳ' ಕುತಂತ್ರಿ ಪಾಕ್‌ಗಾಗಿ ಭದ್ರತಾ ಮಂಡಳಿಯಲ್ಲೂ ಚೀನಾ ಲಾಬಿ!


ಕರಾಚಿಯಲ್ಲಿನ ಸ್ಟಾಕ್‌ ಎಕ್ಸ್‌ಚೆಂಜ್‌  ಮೇಲೆ  ನಡೆದ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನ ಆರೋಪ ಮಾಡಿತ್ತು.   ಈ ಆರೋಪಕ್ಕೆ ಯುನ್ ಸೆಕ್ಯೂರಿಟಿ ಕೌನ್ಸಿಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಬಲೂಚಿಸ್ತಾನದ ನಾಲ್ವರು ಉಗ್ರರು ಸೇರಿದಂತೆ ದಾಳಿಯಲ್ಲಿ  19 ಜನ ಸಾವಿಗೀಡಾಗಿದ್ದರು.

ಸಾವಿನ ಸಂಖ್ಯೆ ಸತತ 10 ದಿನ ಇಳಿದರೆ ಕೊರೋನಾ ಕ್ಷೀಣ!

ದೇಶದಲ್ಲಿ ಕೊರೋನಾ ಹರಡುವಿಕೆ ಯಾವಾಗ ಗರಿಷ್ಠಕ್ಕೆ ತಲುಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸತತ 10 ದಿನಗಳ ಕಾಲ ಕೊರೋನಾ ಸಂಬಂಧಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಾ ಬಂದರೆ ಆಗ ಗರಿಷ್ಠಕ್ಕೆ ತಲುಪಿದೆ ಎಂದು ಹೇಳಬಹುದು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸಾರ್ವಜನಿಕ ಆರೋಗ್ಯ ತಜ್ಞ ಪ್ರೊ.ಕೆ.ಶ್ರೀನಾಥ್‌ ರೆಡ್ಡಿ ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನರಳಿ ನರಳಿ ಪ್ರಾಣ ಬಿಟ್ಟ ವ್ಯಕ್ತಿ..!\

ನಗರದ ವಿಕ್ಟೋರಿಯ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ 52 ವರ್ಷದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದ ಹೃದಯಕಲುಕುವ ಘಟನೆ ನಡೆದಿದೆ. BBMP ಬೇಜವ್ದಾರಿಗೆ ಅಮಾಯಕ ವ್ಯಕ್ತಿಯ ಸಾವು ಸಂಭವಿಸಿದೆ.

ದೇಶದ ಜನತೆಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಧಾನಿ ಮೋದಿ..!

ದೇಶ ಏಕಕಾಲದಲ್ಲಿ ಎರಡೆರಡು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಒಂದು ಕಡೆ ಚೀನಾ ಗಡಿ ಗಲಾಟೆಯಾದರೆ ಮತ್ತೊಂದೆಡೆ ಕೊರೋನಾ ಕಾಟ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಿದ್ದಾರೆ. 

ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನಕ್ಕೆ ಅರ್ಹ: ಹೈಕೋರ್ಟ್!

ವಿವಾಹದ ಬಳಿಕವೂ ಮಹಿಳೆ ಸಿಂಧೂರ ಮತ್ತು ಕೈಗೆ ಬಳೆಗಳನ್ನು ತೊಡಲು ನಿರಾಕರಿಸುತ್ತಾಳೆ ಎಂದಾದಲ್ಲಿ, ಆಕೆ ತನ್ನ ಗಂಡನನ್ನು ಪತಿಯಾಗಿ ಸ್ವೀಕರಿಸಲು ಸಿದ್ಧವಿಲ್ಲ ಎಂದೇ ಅರ್ಥ ಎಂದು ಗುವಾಹಟಿ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟ ಯಾರಿಗೂ ಬೇಡ!

ನಗರದ ವಿಕ್ಟೋರಿಯ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ 52 ವರ್ಷದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದ ಹೃದಯಕಲುಕುವ ಘಟನೆ ನಡೆದಿದೆ. BBMP ಬೇಜವ್ದಾರಿಗೆ ಅಮಾಯಕ ವ್ಯಕ್ತಿಯ ಸಾವು ಸಂಭವಿಸಿದೆ

ಅಮೆಝಾನ್ ಪ್ರೈಂ ಜೊತೆ ಪ್ರಿಯಾಂಕ ಚೋಪ್ರಾ ಡೀಲ್..!

ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕ ಚೋಪ್ರಾ ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್‌ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶೀಯ ಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಿಗ್ಗಿ ಪ್ರಯತ್ನ ನಡೆಸಿದ್ದಾರೆ.

ಭಾರತದ ಬೆನ್ನಲ್ಲೇ ಚೀನಾಗೆ ಶಾಕ್ ಕೊಟ್ಟ ಅಮೆರಿಕ: ತತ್ತರಿಸಿದ ಡ್ರ್ಯಾಗನ್

ಲಡಾಖ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಇಪ್ಪತ್ತು ಯೊಧರು ಹುತಾತ್ಮರಾಗಿದ್ದರು. ಇದಾದ ಬಳಿಕ ದೇಶಾದ್ಯಂತ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಸರ್ಕಾರ ಟಿಕ್‌ಟಾಕ್, ಶೇರ್‌ ಇಟ್, ಹೆಲೋ ಸೇರಿದಂತೆ ಚೀನಾದ ಒಟ್ಟು 59 App ಗಳನ್ನು ಬ್ಯಾನ್ ಮಾಡಿತ್ತು. ಭಾರತದ ಈ ಡಿಜಿಟಲ್ ಸ್ಟ್ರೈಕ್‌ ಬೆನ್ನಲ್ಲೇ ಚೀನಾಗೆ ಅಮೆರಿಕ ಕೂಡಾ ಬಿಸಿ ಮುಟ್ಟಿಸಿದೆ. ಚೀನಾ ವಿರುದ್ಧ ದೊಡ್ಡಣ್ಣ ಕೂಡಾ ಬಹುದೊಡ್ಡ ಹೆಜ್ಜೆ ಇಟ್ಟಿದೆ. 

#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?

ನಾನೊಬ್ಬಳು ಗೃಹಿಣಿ. ಮದುವೆಯಾಗಿ ಎರಡು ವರ್ಷದ ಬಳಿಕ ಮಗುವಾಗಿದೆ. ಮಗು ಆರೋಗ್ಯಕರವಾಗಿದೆ. ಆದರೆ ನನಗೀಗ ಪೀರಿಯೆಡ್ಸ್ ದೇ ಭಯ. ಏಕೆಂದರೆ ಮಗ ಹುಟ್ಟಿ ಒಂಭತ್ತು ತಿಂಗಳಾಗುತ್ತಾ ಬಂತು. ಇನ್ನೂ ನನಗೆ ಪೀರಿಯೆಡ್ಸ್ ಆಗಿಲ್ಲ. ಮಗುವಿಗೆ ನಾಲ್ಕು ತಿಂಗಳಾಗುತ್ತಿದ್ದ ಹಾಗೆ ನಾವು ಸೆಕ್ಸ್ ಮಾಡಲು ಶುರು ಮಾಡಿದ್ದೇವೆ. ಮಗುವಿಗೆ ಹಾಲೂಡುತ್ತಿರುವಾಗ ಸೆಕ್ಸ್ ಮಾಡಿದರೆ ಗರ್ಭವತಿಯಾಗೋದಿಲ್ಲ ಅಂತ ಗೊತ್ತಾಯ್ತು. ಹಾಗಾಗಿ ಮುಂಜಾಗ್ರತೆ ವಹಿಸಲಿಲ್ಲ. ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯೆಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ? ಇತ್ತೀಚೆಗೆ ಸ್ವಲ್ಪ ದಪ್ಪವಾಗಿದ್ದೇನೆ. ಪದೇ ಪದೇ ಮೂತ್ರ ಮಾಡುವ ಹಾಗಾಗುತ್ತದೆ. ದಯಮಾಡಿ ಪರಿಹಾರ ತಿಳಿಸಿ.

click me!