ವರನಟ ದಿವಗಂತ ಡಾ ರಾಜ್‌ಕುಮಾರ್ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇತ್ತ ಮಾಸ್ಟರ್ ಬಾಸ್ಟರ್ ಸಚಿನ್ ತೆಂಡುಲ್ಕರ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಕಾರಣ ಭಾರತದಲ್ಲಿ ಎದುರಾಗಿರುವ ಆಕ್ಸಿಜನ್ ಸಮಸ್ಯೆಗೆ ವಿದೇಶದಿಂದ ಆಮದುಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ, ರಾಜ್ಯಾದ್ಯಂತ ಬ್ಯಾಂಕಿಂಗ್ ಸೇವೆ ಸಮಯ ಬದಲು ಸೇರಿದಂತೆ ಏಪ್ರಿಲ್ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಉನ್ನತ ಮಟ್ಟದ ಸಭೆ; ಲಸಿಕೆ, ಆಕ್ಸಿಜನ್, ವೈದ್ಯಕೀಯ ಸಲಕರಣೆ ಆಮದು ಸುಂಕ ರದ್ದು!...
ಕೊರೋನ ವೈರಸ್ ಕಾರಣ ದೇಶದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ, ವೈದ್ಯಕೀಯ ಸಲಕರಣೆ, ಲಸಿಕೆ ಸಮಸ್ಯೆ ಸೇರಿದಂತೆ ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿದೇಶದಿಂದ ಆಕ್ಸಿಜನ್ ಸೇರಿದಂತೆ ಕೆಲ ವೈದ್ಯಕೀಯ ಸಲಕರಣೆಗೆ ಆಮದು ಸುಂಕ ರದ್ದು ಮಾಡಲಾಗಿದೆ. ಮೋದಿ ಉನ್ನತ ಮಟ್ಟದ ಸಭೆಯ ಪ್ರಮುಖಾಂಶ ಇಲ್ಲಿದೆ
ಇದು ಚೀನಾ ಅಲ್ಲ, ಯೂರೋಪ್ ಕೂಡಾ ಅಲ್ಲ, ನಮ್ಮ ನಿಮ್ಮ ಬೆಂಗಳೂರಿನ ಫೋಟೋ!...
ರಾಜ್ಯವನ್ನೇ ನಡುಗಿಸಿದೆ ಕೊರೋನಾ| ಹೀಗಿದ್ದರೂ ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿರುವ ಜನ| ಕೊರೋನಾದಿಂದಾಗಿ ಆರೋಗ್ಯ ಸಿಬ್ಬಂದಿ ಪಾಡು ಕೇಳುವವರಿಲ್ಲ| ವಿದೇಶದಲ್ಲಿ ಕಂಡು ಬರುತ್ತಿದ್ದಂತಹ ದೃಶ್ಯ ನಮ್ಮ ಬೆಂಗಳೂರಿನಲ್ಲಿ
ದೇಶದಲ್ಲಿ ಮತ್ತೆ ವಿಶ್ವದಾಖಲೆಯ 3.54 ಲಕ್ಷ ಕೋವಿಡ್ ಕೇಸ್!...
ಮತ್ತೆ ವಿಶ್ವದಾಖಲೆಯ 3.54 ಲಕ್ಷ ಕೋವಿಡ್ ಕೇಸ್| ಸತತ 3ನೇ ದಿನ 3 ಲಕ್ಷಕ್ಕೂ ಅಧಿಕ ಪ್ರಕರಣ| 2263 ಬಲಿ, ಇದೂ ಸರ್ವಾಧಿಕ| ಸಕ್ರಿಯ ಕೇಸ್ 24 ಲಕ್ಷಕ್ಕೆ ಏರಿಕೆ| ಚೇತರಿಕೆ ಪ್ರಮಾಣ ಶೇ.83ಕ್ಕೆ ಕುಸಿತ
ಸಚಿನ್ ತೆಂಡುಲ್ಕರ್‌ಗಿಂದು 48ನೇ ಜನ್ಮದಿನದ ಸಂಭ್ರಮ: ಹರಿದು ಬಂತು ಶುಭಾಶಯಗಳ ಮಹಾಪೂರ...
ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ 48ನೇ ವಸಂತಕ್ಕೆ ಕಾಲಿರಿಸಿದ್ದಾರೆ. ದಿಗ್ಗಜ ಕ್ರಿಕೆಟಿಗನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ರಾಜ್ ಇದ್ದಲ್ಲಿ ಸಹಾನುಭೂತಿ, ಪ್ರೀತಿ, ಶ್ರದ್ಧೆ ಇರುತ್ತಿತ್ತು; ಇಂದು ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ!...
1960ನೇ ಇಸವಿ. ಚೆನ್ನೈನ ಗೋಲ್ಡನ್ ಸ್ಟುಡಿಯೋದಲ್ಲಿ ಭಕ್ತ ಕನಕದಾಸ ಕನ್ನಡ ಚಿತ್ರದ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂಬ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಕನಕದಾಸರ ಪಾತ್ರದಲ್ಲಿ ರಾಜ್‌ಕುಮಾರ್‌ರವರು ಅಭಿನಯಿಸುತ್ತಿದ್ದರು. ಉಡುಪಿ ಶ್ರೀಕೃಷ್ಣ ಕನಕದಾಸನಿಗೆ ದರ್ಶನ ಕೊಡುವ ದೃಶ್ಯ. ಅಲ್ಲಿ ಶ್ರೀಕೃಷ್ಣ ಕನಕನ ಕಡೆಗೆ ತಿರುಗುತ್ತಾ ದರ್ಶನ ಕೊಡುವ ಸಂದರ್ಭದಲ್ಲಿ ಓರ್ವ ಸ್ವಾಮಿಗಳು ಶ್ರೀಕೃಷ್ಣನಿಗೆ ಮಂಗಳಾರತಿ ಮಾಡುತ್ತಿರುವ ದೃಶ್ಯಕ್ಕಾಗಿ ಓರ್ವ ಸ್ವಾಮಿ ಅಲ್ಲಿರಬೇಕಾಗಿತ್ತು.
ಕೋವಿಡ್ : ರಾಜ್ಯಾದ್ಯಂತ ಬ್ಯಾಂಕಿಂಗ್ ಸೇವೆ ಸಮಯ ಬದಲು...
ರಾಜ್ಯದಲ್ಲಿ ಬ್ಯಾಂಕುಗಳ ಕೆಲಸದ ಅವಧಿಯನ್ನು ಕಡಿತಗೊಳಿಸಲಾಗಿದೆ. ಕೊರೋನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆಯಲ್ಲಿ ಕೆಲಸದ ಅವಧಿಯಲ್ಲಿ ಕಡಿಮೆ ಮಾಡಲಾಗಿದೆ. ಈ ಆದೇಶ ಏ.22ರಿಂದ ಮೇ 31ರ ವರೆಗೆ ಅನ್ವಯವಾಗಲಿದೆ.
ಸೂಕ್ತ ಚಿಕಿತ್ಸೆ ಸಿಗದೇ ಕೊರೋನಾಗೆ ಬಿಜೆಪಿ ಶಾಸಕ ಬಲಿ: ಪತ್ನಿ, ಪುತ್ರನ ಸ್ಥಿತಿ ಗಂಭೀರ...
ಕೊರೋನಾ ಎರನಡೇ ಅಲೆ ಭಯಾನಕವಾಗಿದ್ದು, ಈ ಮಹಾಮಾರಿಗೆ ಇಂದು (ಶನಿವಾರ) ಉತ್ತರ ಪ್ರದೇಶದ ಔರಿಯಾ ಕ್ಷೇತ್ರದ ಬಿಜೆಪಿ ಶಾಸಕ ಬಲಿಯಾಗಿದ್ದಾರೆ.
ಪ್ಲಾಸ್ಮಾ ಬೇಕೆಂದು ನಂಬರ್ ಕೊಟ್ಟರೆ, ಶಿಶ್ನದ ಫೋಟೋ ಕಳುಹಿಸುವುದಾ? ಛೇ.. ...
ತನ್ನ ಬಂಧುಗಳಿಗೆ ಕೋವಿಡ್ ತುರ್ತು ಚಿಕಿತ್ಸೆಗಾಗಿ ಪ್ಲಾಸ್ಮಾ ಪಡೆಯಲು ಟ್ವಿಟರ್‌ನಲ್ಲಿ ತನ್ನ ಫೋನ್ ನಂಬರ್ ಹಾಕಿಕೊಂಡ ಯುವತಿಗೆ ಲಫಂಗ ಪುರುಷರಿಂದ ಆದ ಕಿರುಕುಳ ಏನು ಗೊತ್ತಾ?
ಕೋವಿಡ್ ನಿಗ್ರಹ ರಾಷ್ಟ್ರೀಯ ನೀತಿ ವಿಚಾರಣೆಯಿಂದ ಸಾಳ್ವೆ ಹಿಂದಕ್ಕೆ!...
ಕೋವಿಡ್ ನಿಗ್ರಹ ರಾಷ್ಟ್ರೀಯ ನೀತಿ ವಿಚಾರಣೆಯಿಂದ ಸಾಳ್ವೆ ಹಿಂದಕ್ಕೆ| ಗೊಂದಲ ಸೃಷ್ಟಿಸಿದ ವಕೀಲರಿಗೂ ತರಾಟೆ| ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!...
ಕೊರೋನಾ ಸೋಂಕಿತರ ಚಿಕಿತ್ಸೆಗೆ ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಇದೀಗ ಸಿಂಗಾಪುರದಿಂದ ಆಮ್ಲಜನ ಟ್ಯಾಂಕ್‌ಗಳನ್ನು ಏರ್‌ಲಿಫ್ಟ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.