ಸೂಕ್ತ ಚಿಕಿತ್ಸೆ ಸಿಗದೇ ಕೊರೋನಾಗೆ ಬಿಜೆಪಿ ಶಾಸಕ ಬಲಿ: ಪತ್ನಿ, ಪುತ್ರನ ಸ್ಥಿತಿ ಗಂಭೀರ

By Suvarna NewsFirst Published Apr 24, 2021, 4:04 PM IST
Highlights

ಕೊರೋನಾ ಎರನಡೇ ಅಲೆ ಭಯಾನಕವಾಗಿದ್ದು, ಈ ಮಹಾಮಾರಿಗೆ ಇಂದು (ಶನಿವಾರ) ಉತ್ತರ ಪ್ರದೇಶದ ಔರಿಯಾ ಕ್ಷೇತ್ರದ ಬಿಜೆಪಿ ಶಾಸಕ ಬಲಿಯಾಗಿದ್ದಾರೆ.

ಲಕ್ನೋ, (ಏ.24): ಕೊರೋನಾ ಮಹಾಮಾರಿಗೆ ಇಂದು (ಶನಿವಾರ) ಉತ್ತರ ಪ್ರದೇಶದ ಔರಿಯಾ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್​ ದಿವಾಕರ್​ ಅಸುನೀಗಿದ್ದಾರೆ.

 56 ವರ್ಷದ ಶಾಸಕ ರಮೇಶ್​ ದಿವಾಕರ್ ಅವರಿಗೆ ಕೊರೋನಾ ದೃಢಪಟ್ಟಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೀರತ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ರಮೇಶ್​ ಅವರ ಪತ್ನಿ ಹಾಗೂ ಪುತ್ರನ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಸ್ಸಾಂ, ಉತ್ತರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ!

ಇನ್ನು ಈ ವಿಚಾರವಾಗಿ ಮಾತನಾಡಿದ ರಮೇಶ್​ ಸೋದರಳಿಯ ದೀಪಕ್​ ದಿವಾಕರ್, ನನ್ನ ಮಾವ, ಅವರ ಪತ್ನಿ ಹಾಗೂ ಪುತ್ರ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಮೊದಲು ನಾವು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದೆವು. ಅಲ್ಲಿಂದ ಮೂವರನ್ನ ಕಾನ್ಪುರಕ್ಕೆ ಶಿಫ್ಟ್ ಮಾಡಲಾಯ್ತು. ಆದರೆ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಅವರ ಪರಿಸ್ಥಿತಿ ಗಂಭೀರವಾಗುತ್ತಲೇ ಹೋಯ್ತು ಎಂದು ಹೇಳಿದರು.

 ಇದಾದ ಬಳಿಕ ರಮೇಶ್​ರನ್ನ ಘಾಜಿಯಾಬಾದ್​ ಬಳಿಕ ಮೀರತ್​ನಲ್ಲಿ ದಾಖಲು ಮಾಡಲಾಗಿತ್ತು. ಮೀರತ್​ನ ಲಾಲಾ ಲಜಪತ್​ ರಾಯ್​ ಮೆಮೊರಿಯಲ್​ ಕಾಲೇಜಿನಲ್ಲಿ ರಮೇಶ್​ರನ್ನ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ್​ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಇತ್ತ ರಮೇಶ್​ ಸಹೋದರ ಲಾಲ್​ ಜಿ ದಿವಾಕರ್​ ಕೂಡ ಇದೇ ವಿಚಾರವಾಗಿ ಮಾತನಾಡಿ, ಕಾನ್ಪುರದಲ್ಲಿ ರಮೇಶ್​ಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಅವರನ್ನ ವಾಪಸ್ ಔರಿಯಾಗೆ ತಂದು ಆಕ್ಸಿಜನ್​ ವ್ಯವಸ್ಥೆ ಮಾಡಲಾಗಿತ್ತು . ಆದರೆ ರಮೇಶ್ ಸ್ಥಿತಿ ಸುಧಾರಿಸದ ಕಾರಣ ಮತ್ತೆ ಘಾಜಿಯಾಬಾದ್​ಗೆ ಸೇರಿಸಲಾಯ್ತು. ಅಲ್ಲೂ ಸಹ ರಮೇಶ್​ಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಕೊನೆಗೂ ರಮೇಶ್‌ಗೆ ಮೀರತ್​ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆಯಾಗಿತ್ತು ಎಂದು ಹೇಳಿದ್ರು.

click me!