ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ ಕರ್ನಾಟಕ ಕೈಗೊಂಡ ಕಟ್ಟು ನಿಟ್ಟಿನ ಕ್ರಮಗಳಿಂದ ಹಬ್ಬುತ್ತಿರುವ ವೇಗ ಕಡಿಮೆ ಅನ್ನೋದು ಸಮಾಧಾನ. ಹಾಗಂತ ಮೈಮೆರತೆರೆ ಹೋರಾಟ ವ್ಯರ್ಥವಾಗಲಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1700ರ ಗಡಿ ದಾಟಿದೆ. ಕನ್ನಡ ಕಣ್ಮಣಿ ಡಾ. ರಾಜ್‌ಕುಮಾರ್ ಪುಣ್ಯಸ್ಮರಣೆಗೂ ಕೊರೋನಾ ಬಿಸಿ ತಟ್ಟಿದೆ. ಐಪಿಎಲ್ ಆಯೋಜನೆ ಕುರಿತು ಗಂಗೂಲಿ ಮಾತು, ಹೆಚ್‌ಡಿಎಫ್‌ಸಿ ಶೇರು ಖರೀದಿಸಿ ಅಚ್ಚರಿ ನೀಡಿದ ಚೀನಾ ಸೇರಿದಂತೆ ಏಪ್ರಿಲ್ 12ರ ಟಾಪ್ 10 ಸುದ್ದಿ ಇಲ್ಲಿವೆ.
ಕೊರೋನಾ ಆತಂಕದ ನಡುವೆ ಕರ್ನಾಟಕ ಕೊಂಚ ನಿರಾಳ..!...
undefined
ಕೊರೋನಾ ಕರ್ನಾಟಕದಲ್ಲಿ ಹಬ್ಬುತ್ತಿರುವ ವೇಗ ಕಮ್ಮಿ ಎನ್ನುವ ತುಸು ನೆಮ್ಮದಿಯ ಸುದ್ದಿ ರಾಜ್ಯದ ಜನರಿಗೆ ಸಿಕ್ಕಿದೆ. ಕೊರೋನಾ ಸೋಂಕು ದ್ವಿಗುಣಗೊಳ್ಳುವ ವಿಚಾರದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಆನಂತರದ ಸ್ಥಾನದಲ್ಲಿ ತೆಲಂಗಾಣ ಹಾಗೂ ರಾಜಸ್ಥಾನಗಳು ಮೊದಲ 3 ಸ್ಥಾನಗಳನ್ನು ಹಂಚಿಕೊಂಡಿವೆ.
ಮಹಾರಾಷ್ಟ್ರದಲ್ಲಿ 1700ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ..!...
ದೇಶದಲ್ಲಿ ಅತಿಹೆಚ್ಚು ಸೋಂಕು ತಗುಲಿದ ಹಾಗೂ ಬಲಿ ಪಡೆದ ರಾಜ್ಯವೆಂದರೆ ಅದು ಮಹಾರಾಷ್ಟ್ರ ಎನಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ 1,761 ಮಂದಿಗೆ ಸೋಂಕು ತಗುಲಿದ್ದು, 127 ಮಂದಿ ಕೊನೆಯುಸಿರೆಳೆದಿದ್ದಾರೆ.
ಜೀಬ್ರಾ ಹಾಗೂ ಡಾಂಕಿಯ ಪುಟ್ಟ ಕಂದ ಈ ಜಾಂಕಿ!
ಜಾಂಕಿ ಬಹುಶಃ ಈ ಹೆಸರನ್ನು ನೀವು ಮೊದಲ ಬಾರಿ ಕೇಳಿರುತ್ತೀರಿ. ಅಷ್ಟಕ್ಕೂ ಏನಿದು ಅಂತೀರಾ? ಇದು ಜೀಬ್ರಾ ಹಾಗೂ ಡಾಂಕಿ(ಕತ್ತೆ)ಗೆ ಹುಟ್ಟಿದ ಮರಿ. ಹೀಗಾಗಿ ಇವೆರಡನ್ನೂ ಸೇರಿಸಿ ಈ ಪುಟ್ಟ ಮರಿಗೆ ಜಾಂಕಿ ಎಂದು ಹೆಸರಿಡಲಾಗಿದೆ.
ಕೋವಿಡ್ ವಿರುದ್ಧ ಹೋರಾಟ: ತೋಂಟದಾರ್ಯ ಮಠದಿಂದ 10 ಲಕ್ಷ ರು. ಚೆಕ್
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಗದಗ ತೋಂಟದಾರ್ಯ ಮಠ ಸಹಾಯ ಹಸ್ತ ಚಾಚಿದೆ. ಹೌದು, ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮೀಜಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಚೆಕ್ ವಿತರಣೆ ಮಾಡಿದ್ದಾರೆ.
IPL 2020 ಆಯೋಜನೆ ಕುರಿತು ಸೌರವ್ ಗಂಗೂಲಿ ಖಡಕ್ ಮಾತು!
ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಭಾರತ ಲಾಕ್‌ಡೌನ್ ವಿಸ್ತರಿಸಿದರೂ ಕೊರೋನಾ ಹತೋಟಿಗೆ ಬರುತ್ತಿಲ್ಲ. ಮಾರ್ಚ್ 29ರಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಲಾಕ್‌ಡೌನ್ ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ 2020ರ ಐಪಿಎಲ್ ಕತೆ ಏನು? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ಈ ಗೊಂದಲಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟ ಉತ್ತರ ನೀಡಿದ್ದಾರೆ.
ಲಾಕ್‌ಡೌನ್ ಮುಗಿಯೋದೇ ತಡ ಸನ್ನಿಗೆ ಈ ಕೆಲಸ ಮಾಡೋದಕ್ಕೆ ಅವಸರ ಆಗಿದೆಯಂತೆ!
ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಮಕ್ಕಳನ್ನು ಸಂಭಾಳಿಸುವುದೇ ಒಂದು ಸವಾಲು. ಅವರನ್ನು ಯಾವಾಗಲೂ ಎಂಗೇಜ್ ಆಗಿಡೋದ್ರಲ್ಲಿ ಅಪ್ಪ ಅಮ್ಮ ಹೈರಾಣಾಗಿರುತ್ತಾರೆ. ಇದು ಒಬ್ಬರ ಮನೆಯ ಕಥೆಯಲ್ಲ. ಎಲ್ಲರ ಮನೆ ಮನೆ ಕಥೆ. ಮಾದಕ ಚೆಲುವೆ ಸನ್ನಿ ಲಿಯೋನ್ ಕೂಡಾ ಇದೇ ಮಾತನ್ನು ಹೇಳಿದ್ದಾರೆ.
ಡಾ. ರಾಜ್ ಪುಣ್ಯ ಸ್ಮರಣೆಗೆ ಬ್ರೇಕ್; ಮನೆಯಲ್ಲೇ ಪೂಜೆಗೆ ಕುಟುಂಬಸ್ಥರ ನಿರ್ಧಾರ.
ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಪುಣ್ಯ ಸ್ಮರಣೆಗೆ ಕೊರೋನಾದಿಂದ ಬ್ರೇಕ್ ಬಿದ್ದಿದೆ. ಮನೆಯಲ್ಲಿಯೇ ಪೂಜೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಲಾಕ್‌ಡೌನ್ ಮುಗಿದ ನಂತರ ಡಾ. ರಾಜ್ ಸಮಾಧಿಗೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಲಿದ್ದಾರೆ.
ಇದ್ದಕ್ಕಿದ್ದಂತೆ HDFCಯ ಬಹುಕೋಟಿ ಷೇರು ಖರೀದಿಸಿದ ಚೀನಾ, ಕಾರಣ ಏನಣ್ಣ?
ದಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಎಚ್‌ಡಿಎಫ್ ಸಿ ಯ 1.75 ಕೋಟಿ ಷೇರು ಖರೀದಿಗೆ ತೀರ್ಮಾನ ಮಾಡಿದೆ. ಚೀನಾದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಸುಮಾರು 1.75 ಕೋಟಿ ಷೇರುಗಳನ್ನು ಖರೀದಿ ಮಾಡಿ ಗಮನ ಸೆಳೆದಿದೆ.
ರಾಯಲ್ ಎನ್‌ಫೀಲ್ಡ್ ಫೊಟೊನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ!
ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನದತ್ತ ಕೇಂದ್ರೀಕೃತವಾಗಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ರಾಯಲ್ ಎನ್‌ಫೀಲ್ಡ್ ಫೊಟೊನ್ ಹೆಸರಿನಲ್ಲಿ ನೂತನ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಿದೆ. ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮನೆ ಮಾಲೀಕನಿಂದ ಕೆಲಸದಾಕೆಯ ಇಡೀ ಕುಟುಂಬ ಆಸ್ಪತ್ರೆಗೆ!
ಲಂಡನ್‌ನಿಂದ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ 52 ವರ್ಷದ ವ್ಯಕ್ತಿಗೆ ಮಾರ್ಚ್ 22 ರಂದು ಕೊರೋನಾ ಸೋಂಕು ತಗುಲಿತ್ತು. ಇವರಿಂದಾಗಿ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಇಡೀ ಕುಟುಂಬಕ್ಕೆ ಕೊರೋನಾ ಅಂಟಿದೆ.