
ಬೆಂಗಳೂರು(ಏ.12): ಲಂಡನ್‌ನಿಂದ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ 52 ವರ್ಷದ ವ್ಯಕ್ತಿಗೆ ಮಾರ್ಚ್ 22 ರಂದು ಕೊರೋನಾ ಸೋಂಕು ತಗುಲಿತ್ತು. ಇವರಿಂದಾಗಿ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಇಡೀ ಕುಟುಂಬಕ್ಕೆ ಕೊರೋನಾ ಅಂಟಿದೆ.
ಮನೆ ಮಾಲೀಕ ಕೊರೋನಾದಿಂದ ಗುಣಮುಖನಾಗಿ ಮೂರ್ನಾಲ್ಕು ದಿನಗಳ ಹಿಂದೆಯೇ ಮನೆ ಸೇರಿದ್ದಾನೆ. ಆದರೆ, ಆತನಿಂದ ಆತನ ಮನೆ ಕೆಲಸದ 35 ವರ್ಷದ ಮಹಿಳೆಗೆ ಸೋಂಕು ಹರಡಿತ್ತು. ಬಳಿಕ ಆಕೆಯಿಂದ ಆಕೆಯ 40 ವರ್ಷದ ಪತಿಗೂ ಸೋಂಕು ಹರಡಿ ಇಂದಿಗೂ ಆಸ್ಪತ್ರೆಯಲ್ಲಿದ್ದಾರೆ.
ಸಂಕಷ್ಟದಲ್ಲಿರೋ ಜನರ ಪರವಾಗಿ ಮೋದಿಗೆ ವಿಶೇಷ ಮನವಿ ಮಾಡಿಕೊಂಡ ಕುಮಾರಸ್ವಾಮಿ
ಇದೀಗ ಶನಿವಾರ ಮನೆಕೆಲಸದ ಮಹಿಳೆಯ 10 ವರ್ಷದ ಮಗನಿಗೂ ಸೋಂಕು ದೃಢಪಟ್ಟಿದೆ. ಈ ಮೂಲಕ ಮಾಲೀಕನಿಂದ ಮನೆಕೆಲಸದ ಇಡೀ ಕುಟುಂಬ ಆಸ್ಪತ್ರೆ ಪಾಲಾಗುವಂತಾಗಿದೆ. ಆ ವ್ಯಕ್ತಿ ಜವಾಬ್ದಾರಿಯುತವಾಗಿ ಕ್ವಾರಂಟೈನ್ ಆಗಿದ್ದರೆ ಇಷ್ಟುಮಂದಿಗೆ ಸೋಂಕು ಹರಡುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ