ಅನರ್ಹರ ವಿಚಾರಣೆ ಮುಗೀತು,ಕರ್ನಾಟಕ ಕಪ್ ಗೆದ್ದಿತು; ಇಲ್ಲಿವೆ ಅ.25ರ ಟಾಪ್ 10 ಸುದ್ದಿ!

Published : Oct 25, 2019, 05:18 PM ISTUpdated : Oct 25, 2019, 05:25 PM IST
ಅನರ್ಹರ ವಿಚಾರಣೆ ಮುಗೀತು,ಕರ್ನಾಟಕ ಕಪ್ ಗೆದ್ದಿತು; ಇಲ್ಲಿವೆ ಅ.25ರ ಟಾಪ್ 10 ಸುದ್ದಿ!

ಸಾರಾಂಶ

ಕರ್ನಾಟಕ ಅನರ್ಹ ಶಾಸಕರ ವಿಚಾರಣೆ ಕೊನೆಗೂ ಅಂತ್ಯವಾಗಿದೆ. ದೀಪಾವಳಿಗೆ ಸಿಹಿ ಸುದ್ದಿ ನಿರೀಕ್ಷಿಸಿದ್ದ ಅನರ್ಹರಿಗೆ ನಿರಾಸೆಯಾಗಿದೆ. ಕಾರಣ ತೀರ್ಪು ಕಾಯ್ದಿರಿಸಲಾಗಿದೆ. ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ಮಣಿಸಿದ ಕರ್ನಾಟಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಜೈಲಿನಿಂದ ಬಿಡುಗಡೆಯಾದ ಡಿಕೆ ಶಿವಕುಮಾರ್‌ಗೆ ಹೊಸ ಜವಾಬ್ದಾರಿ, ಸಿಎಂ ಯಡಿಯೂರಪ್ಪಗೆ ಹೊಸ ಸಂಕಷ್ಟ ಸೇರಿದಂತೆ ಅ.25ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.  

1) ಯಡಿಯೂರಪ್ಪ ನಾಯಕತ್ವವನ್ನೇ ಕಡೆಗಣಿಸುವ ರಣತಂತ್ರಕ್ಕೆ ಬ್ರೇಕ್‌?

 ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಆತಂಕವನ್ನೇ ಉಂಟು ಮಾಡಿದೆ. ಈ ಫಲಿತಾಂಶದ ಬಳಿಕ ಯಡಿಯೂರಪ್ಪ ನಾಯಕತ್ವವನ್ನು ಕಡೆಗಣಿಸಲು ಪಕ್ಷದ ಕೆಲವು ನಡೆಸುತ್ತಿದ್ದ ರಣತಂತ್ರಕ್ಕೆ  ಬ್ರೇಕ್‌ ಬೀಳುವ ಸಾಧ್ಯತೆ ಇದೆ.


2) ರಾಜ್ಯದಲ್ಲಿ 3 ದಿನ ಚಂಡಮಾರುತ ಸಹಿತ ಭಾರಿ ಮಳೆ?

 ‘ಕ್ಯಾರ್‌’ ಚಂಡಮಾರುತದಿಂದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನಿಡಲಾಗಿದೆ. 


3) 'ರಾಜ್ಯದಲ್ಲಿ ಮತ್ತೆ ಚುನಾವಣೆ : BSY ಕುರ್ಚಿ ಬಿಡ್ಬೇಕಾಗುತ್ತೆ!

ರಾಜ್ಯದಲ್ಲಿ ಶೀಘ್ರವೇ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳ ಸೋಲು ನಿಶ್ಚಿತ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ರಾಜೀನಾಮೆ ಕೊಡಬೇಕಾದ ಸ್ಥಿತಿ ಬರುತ್ತದೆ. ಹಾಗಂತ ನಾವು ಮತ್ತ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದಿಲ್ಲ. ಜೆಡಿಎಸ್‌ ಜತೆ ಈಗಾಗಲೇ ಅನುಭವಿಸಿ ಸಾಕಾಗಿದೆ. ಹೀಗಾಗಿ ಮರು ಚುನಾವಣೆಗೆ ಹೋಗುತ್ತೇವೆ.

4) ಕೊನೆಗೂ ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ...

ಅನರ್ಹ ಶಾಸಕರ ವಿಚಾರಣೆಯನ್ನು ಆಲಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಇಂದು ನಮ್ಮ ಪರ ತೀರ್ಪು ಬರಲಿದೆ ಅಂದು ಕೊಂಡಿದ್ದ ಅನರ್ಹ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ. ದೀಪಾವಳಿ ಬಳಿಕ ಅನರ್ಹ ಶಾಸಕರ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ. ಎನ್. ವಿ ರಮಣ ನೇತೃತ್ವದ ತ್ರೀಸದಸ್ಯ ಪೀಠ ಅನರ್ಹ ಶಾಸಕರು, ಕಾಂಗ್ರೆಸ್, ಅನರ್ಹಗೊಂಡ ಶಾಸಕರ ಪರ ವಕೀಲರ ವಾದ, ಪ್ರತಿವಾದವನ್ನು ಕೂಲಂಕುಷವಾಗಿ ಆಲಿಸಿದೆ. 10 ದಿನಗಳ ಬಳಿಕ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

5) ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!


ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 4ನೇ ಟ್ರೋಫಿ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ಕರ್ನಾಟಕ ಪ್ರಶಸ್ತಿ ಗೆದ್ದುಕೊಂಡಿದೆ.

6) ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಹೊಸ ಪಾತ್ರ; ಬಿಜೆಪಿಗೆ ತಾಪತ್ರಯ!

ಹಾರ್ ಜೈಲಿನಿಂದ ಮೊನ್ನೆಯಷ್ಟೇ ಬಿಡುಯಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಗೆ ಪಕ್ಷವು ದೊಡ್ಡ ಜವಾಬ್ದಾರಿ ನೀಡಲು ಮುಂದಾಗಿದೆ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್  ರಣತಂತ್ರವನ್ನು ಹೆಣೆದಿದ್ದು,  ಡಿಕೆಶಿಗಾಗಿ ಬೃಹತ್ ರಾಜಕೀಯ ವೇದಿಕೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಡಿಕೆಶಿಯನ್ನು ಕಳೆದ ತಿಂಗಳು ಬಂಧಿಸಿದ್ದರು. ಕಳೆದ ಬುಧವಾರ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿತ್ತು.  

7) ಅಯ್ಯಯ್ಯೋ... ಇದನ್ನು ತೆಗೆಯಲು ಮರೆತೇ ಬಿಟ್ರಾ ಜಾನ್ವಿ ಕಪೂರ್?

ಬಾಲಿವುಡ್ ಸ್ಟೈಲ್ ಐಕಾನ್, ಕ್ಯೂಟ್ ಗರ್ಲ್ ಜಾನ್ವಿ ಕಪೂರ್ ಏನೇ ಮಾಡಿದ್ರೂ ಸೋಷಿಯಲ್ ಮೀಡಿಯಾ ಮಾತ್ರ ಅವರನ್ನು ಬಿಡುವುದಿಲ್ಲ. ಯಾವಾಗಲೂ ತುಂಡುಡುಗೆ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಜಾನ್ವಿ ಸಲ್ವಾರ್ ಕಮೀಜ್ ಹಾಕಿಕೊಂಡರೂ ಬಿಡಲಿಲ್ಲ. ಅರೇ ಇದರಲ್ಲೇನಿದೆ ಅಂತೀರಾ? ಸಲ್ವಾರ್ ಹಾಕಿಕೊಂಡರೂ ಎಡವಟ್ಟು ಮಾಡಿಕೊಂಡಿದ್ದಾರೆ. 

8) OMG! ಬೆಂಗ್ಳೂರಿನಲ್ಲಿ ದೇವರ ವಿರುದ್ಧವೇ ದಾಖಲಾಯ್ತು ಕ್ರಿಮಿನಲ್ ಕೇಸ್?

ದೇವರ ಮೇಲೆ ಮೊಕದ್ದಮೆ ದಾಖಲಿಸಿ, ಕಾನೂನು ಹೋರಾಟ ನಡೆಸುವ ಪರೇಶ್ ರಾವಲ್ ನಟನೆಯ ಓ ಮೈ ಗಾಡ್ (OMG) ಹಿಂದಿ ಚಿತ್ರ ಭಾರೀ ಸದ್ದು ಮಾಡಿತ್ತು. ಈಗ ಬೆಂಗಳೂರಿನಲ್ಲೇ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೈಮೇಲೆ ಬಂದು ಅವಾಂತರ ಮಾಡಿದ್ದಕ್ಕೆ ದೇವರ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲಾಯ್ತಾ? ವಿಚಿತ್ರ ಘಟನೆ ವಿವರ ಈ ಸ್ಟೋರಿಯಲ್ಲಿ. 

9) ಮಣ್ಣು ಇಲ್ಲದೇ ಹೂವು, ಸೊಪ್ಪು ಬೆಳೆಯಬಹುದು!

ಮಣ್ಣನ್ನು ಬಳಸದೆ ನೀರಿನಲ್ಲಿ ಪೋಷಕಾಂಶಗಳ ದ್ರಾವಣವನ್ನು ಬಳಸಿಕೊಂಡು ಸೊಪ್ಪು, ಹೂವು ಮತ್ತು ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ಹೈಡ್ರೋಪೋನಿಕ್ಸ್‌(ಜಲಕೃಷಿ) ಕೃಷಿ ಪದ್ಧತಿ ಕೃಷಿ ಮೇಳದಲ್ಲಿ ನಗರವಾಸಿಗಳ ಮನ ಸೆಳೆಯುತ್ತಿದೆ.

10) ದೀಪಾವಳಿ ಗಿಫ್ಟ್: ಪೆಟ್ರೋಲ್, ಡೀಸೆಲ್ ದರದಲ್ಲಿ ಗಮನಾರ್ಹ ಇಳಿಕೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 30 ಸೇಂಟ್ಸ್ ಇಳಿಕೆ ಕಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ