ಅತೃಪ್ತ ಶಾಸಕರು ಅನರ್ಹಗೊಂಡು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ ಇದೀಗ ಬಿಜೆಪಿ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಸುಳಿವನ್ನು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು [ಜು.31]: ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಬಿ.ಎಸ್ ಯಡಿಯೂರಪ್ಪ ಅವರು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.
ಲಿಂಗಾಯತ, ಪಂಚಮಸಾಲಿ ಸಮುದಾರಲ್ಲಿ ಒಟ್ಟು 16 ಶಾಸಕರು ಗೆದ್ದಿದ್ದು, ಅವರಲ್ಲಿ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಾಲ್ಕು ಸಾಕಾ, ಐದು ಬೇಡವಾ ಎಂದು ಪ್ರಶ್ನೆ ಮಾಡಿದ್ದಾರೆ.
undefined
ಐದು ಬೇಡ, ನಾಲ್ಕು ಮಾಡಿ ಎಂದು ಕೇಳಿದ್ದಕ್ಕೆ ಉತ್ತರ ನೀಡಿದ ಅವರು ನಿಮಗೆ ಎಲ್ಲಾ ಕೊಟ್ಟರೆ ರಾಜೀನಾಮೆ ಕೊಟ್ಟವರು ವಿಷ ಕುಡಿಯಬೇಕಾ ಎಂದು ತಿರುಗಿ ಕೇಳಿದ್ದಾರೆ.
ಸಂಪುಟ ವಿಸ್ತರಣೆಗೂ ಮುನ್ನ ಮೂವರ ಟೀಮ್ ರೆಡಿ ಮಾಡ್ಕೊಂಡ BSY
ರಾಜೀನಾಮೆ ಕೊಟ್ಟ 16 ಶಾಸಕರು ಏನು ವಿಷ ಕುಡಿಯಬೇಕಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗರಂ ಆಗಿದ್ದಾರೆ. ತಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಕೇಳಲು ಬಂದವರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ ಲಿಂಗಾಯತ ಮುಖಂಡರ ಮೇಲೆ ನೂತನ ಸಿಎಂ ಸಿಟ್ಟಾಗಿದ್ದಾರೆ.
ಮೂರು ದಿನ ಗಡುವು ಕೊಟ್ಟು ಮುಖ್ಯಮಂತ್ರಿ BSY ವಾರ್ನಿಂಗ್
ಇದರಿಂದ ರಾಜೀನಾಮೆ ಕೊಟ್ಟು ಅನರ್ಹರಾದ ಕೆಲವು ಶಾಸಕರಿಗೆ ಬಿ.ಎಸಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಖಚಿತವಾದಂತಾಗಿದೆ.