
ಬೆಂಗಳೂರು [ಜು.31]: ಗುಜರಾತ್ ಮೂಲದವರಾದ ಮಹೇಂದ್ರ ಕಂಪಾನಿ ಅವರಿಗೆ ಸಿದ್ಧಾರ್ಥ ಅತ್ಯಂತ ಆತ್ಮೀಯರಾಗಿಬಿಟ್ಟರು. ಅದಕ್ಕೆ ಕಾರಣವೂ ಇತ್ತು.
ಸಿದ್ಧಾರ್ಥ ಬೆಳಗ್ಗೆ 7ಕ್ಕೆಲ್ಲಾ ಕಚೇರಿಗೆ ಹಾಜರಾಗುತ್ತಿದ್ದರು. ಮಹೇಂದ್ರ ಕಂಪಾನಿ ಅವರು ಕಚೇರಿಯಿಂದ ಮನೆಗೆ ಹೋಗುವುದು ರಾತ್ರಿ 9 ಗಂಟೆಯಾಗುತ್ತಿತ್ತು. ಅಲ್ಲಿವರೆಗೂ ಅವರ ಜತೆಯೇ ಇರುತ್ತಿದ್ದರು.
ಅವರ ಕಾರಿನವರೆಗೆ ಫೈಲ್‌ಗಳು ಹಾಗೂ ಊಟದ ಡಬ್ಬಿ ತಂದುಕೊಡುವ ಕೆಲಸವನ್ನೂ ಮಾಡಿದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಒಡೆಯ ಎಂಬ ಹಮ್ಮು-ಬಿಮ್ಮು ಬಿಟ್ಟು ಅವರು ಮಾಡಿದ ಕೆಲಸ ಕಂಪಾನಿ ಅವರ ವಿಶ್ವಾಸ ವಲಯಕ್ಕೆ ತಂದುಬಿಟ್ಟಿತು.
ಷೇರುಪೇಟೆಯ ಪ್ರತಿಯೊಂದು ವ್ಯವಹಾರ, ಹೂಡಿಕೆ ಮಾಡುವಾಗ ವಹಿಸಬೇಕಾದ ಎಚ್ಚರ ಸೇರಿದಂತೆ ತಮಗೆ ಗೊತ್ತಿದ್ದ ಎಲ್ಲ ವಿಷಯಗಳನ್ನೂ ಕಂಪಾನಿ ಅವರು ಸಿದ್ಧಾರ್ಥ ಅವರಿಗೆ ಸೂಕ್ಷ್ಮವಾಗಿ ಅರ್ಥ ಮಾಡಿಸಿಕೊಟ್ಟರು. 2 ವರ್ಷ ಅಲ್ಲಿದ್ದು ಕಂಪಾನಿ ಅವರಿಗೆ ಹೇಳಿ ಸಿದ್ಧಾರ್ಥ ಬೆಂಗಳೂರಿಗೆ ಬಂದು ದೊಡ್ಡ ಉದ್ಯಮಿಯಾಗಿ ಬೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.