ತಮಿಳುನಾಡಿಗೆ ಅಪ್ಪಳಿಸಲಿದೆ 'ಗಜ’? : ಬೆಂಗಳೂರಿನಲ್ಲಿ ಮೂರು ದಿನ ಮಳೆ

By Web DeskFirst Published Nov 15, 2018, 11:39 AM IST
Highlights

ಈ ಮೊದಲು 'ಗಜ' ಚಂಡಮಾರುತ ದಕ್ಷಿಣ ಭಾರತದ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂಬ ವರದಿ ಬಂದಿತ್ತು. ಆದರೀಗ ಇದ್ದಕ್ಕಿದ್ದಂತೆ ಚಂಡಮಾರುತದ ದಿಕ್ಕು ಬದಲಾಗಿದೆ.  ಪಶ್ಚಿಮ-ನೈಋತ್ಯ ದಿಕ್ಕಿನೆಡೆಗೆ ಚಂಡಮಾರುತ ಬೀಸುತ್ತಿದ್ದು, ತಮಿಳುನಾಡಿನ ಪಂಬನ್ ಮತ್ತು ಕದ್ದಲೂರುಗಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಚೆನ್ನೈ[ನ.15]: ಚಂಡಮಾರುತ 'ಗಜ' ಗುರುವಾರ ಸಂಜೆ ತಮಿಳುನಾಡಿನ ಕರಾವಳಿ ಭಾಗಕ್ಕೆ ಅಪ್ಪಳಿಸಲಿದ್ದು, ಇದು ಅಪಾರ ಪ್ರಮಾಣದ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಈ ಮೊದಲು 'ಗಜ' ಚಂಡಮಾರುತ ದಕ್ಷಿಣ ಭಾರತದ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂಬ ವರದಿ ಬಂದಿತ್ತು. ಆದರೀಗ ಇದ್ದಕ್ಕಿದ್ದಂತೆ ಚಂಡಮಾರುತದ ದಿಕ್ಕು ಬದಲಾಗಿದೆ.  ಪಶ್ಚಿಮ-ನೈಋತ್ಯ ದಿಕ್ಕಿನೆಡೆಗೆ ಚಂಡಮಾರುತ ಬೀಸುತ್ತಿದ್ದು, ತಮಿಳುನಾಡಿನ ಪಂಬನ್ ಮತ್ತು ಕದ್ದಲೂರುಗಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿ ಮಾತನಾಡಿದ ತಮಿಳುನಾಡಿನ ಕಂದಾಯ ಸಚಿವ 'ಗಜ ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನತ್ತ ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಚೆನ್ನೈನಿಂದ 490 ಕಿಲೋ ಮೀಟರ್ ಮತ್ತು ನಾಗಪಟ್ಟಿಂನಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ' ಎಂದಿದ್ದಾರೆ.

ಇದನ್ನೂ ಓದಿ: ಅಪ್ಪಳಿಸಲಿದ್ದಾನೆ ಗಜ, ಕರ್ನಾಟಕಕ್ಕೂ ಇದೆಯಾ ಸಜಾ?

ಚಂಡಮಾರುತದಿಂದಾಗಿ ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಸಮುದ್ರ ನೀರಿನ ಒಳಹರಿವು ಹೆಚ್ಚಾಗಲಿದ್ದು, ಇದರಿಂದ ಗುಡಿಸಲುಗಳು, ವಿದ್ಯುತ್ ಮತ್ತು ಟೆಲಿಕಾಂ ಕೇಬಲ್ ಸೇವೆಗಳಿಗೆ ಹಾನಿಯಾಗುವ ಹಾನಿಯಾಗುವ ಸಾಧ್ಯತೆಗಳಿವೆ. ಗಾಳಿಯ ವೇಗಕ್ಕೆ ಗಿಡ-ಮರಗಳು ನೆಲಕ್ಕುರುಳುವ ಸಾಧ್ಯತೆಗಳಿವೆ. ಈಗಾಗಲೇ ತಮಿಳುನಾಡು ಸರ್ಕಾರವು ಇದಕ್ಕಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ 3500 ರಕ್ಷಣಾ ಸಿಬ್ಬಂದಿಗಳನ್ನು ತಯಾರಿಟ್ಟಿರುವುದಾಗಿಯೂ ತಿಳಿಸಿದೆ.

ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸಂಭವವಿರುವುದರಿಂದ ರಕ್ಷಣಾ ಸಾಮಾಗ್ರಿಗಳನ್ನು ಹಾಗೂ ಪೆಟ್ರೋಲ್ ಬಂಕ್ಗಳ ಸಾಕಷ್ಟು ಪೆಟ್ರೋಲ್ ಸಂಗ್ರಹಿಸಿಟ್ಟುಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಇಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಲ್ಲದೇ ನಾಗಪಟ್ಟಿಂ ಮತ್ತು ಕದ್ದಲೂರು ಜಿಲ್ಲೆಗಳಲ್ಲಿ ಅನಿಯಮಿತ ಟೆಲಿಕಾಂ ಸೇವೆ ನೀಡುವ ಸಲುವಾಗಿ 15 ದಿನಗಳವರೆಗೆ ಸಾಕಷ್ಟು ಇಂಧನವನ್ನು ಉತ್ಪತ್ತಿ ಮಾಡಿ ಸಂಗ್ರಹಿಸಲೂ ಸೂಚಿಸಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ : ಯಾವ ಪ್ರದೇಶಕ್ಕೆ ಅವಾಂತರ

ಬೆಂಗಳೂರು ಸೇರಿ ರಾಜ್ಯಾದ್ಯಂತ ಮಳೆ:

ಚೆನ್ನೈಗೆ ಅಪ್ಪಳಿಸಲಿರುವ ಗಜ ಚಂಡಮಾರುತದಿಂದಾಗಿ ಕರ್ನಾಟಕದಲ್ಲೂ ಮಳೆ ಸುರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ 3 ದಿನಗಳವವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.

click me!