ರಿಲಾಯನ್ಸ್ ಓಡಿಹೋದರೆ ಏನು ಕಥೆ..?

By Web DeskFirst Published Nov 15, 2018, 11:00 AM IST
Highlights

ದೇಶದಲ್ಲಿ ಅತೀ ಹೆಚ್ಚು ಚರ್ಚಿತ ವಿಚಾರವಾಗಿರುವ ಹಾಗೂ ಬೃಹತ್ ಉದ್ಯಮವೊಂದು ಕೈಗೆತ್ತಿಕೊಂಡಿರುವ ರಫೇಲ್ ಡೀಲ್ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಸದ್ಯ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 

ನವದೆಹಲಿ: ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಬುಧವಾರ 4 ತಾಸಿಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪು ಕಾದಿರಿಸಿದೆ. ಇದೇ ವೇಳೆ ರಫೇಲ್‌ ಯುದ್ಧ ವಿಮಾನಗಳ ಬೆಲೆಯನ್ನು ಸದ್ಯಕ್ಕೆ ಹೊರಗೆಳೆಯದೇ ಇರಲು ನಿರ್ಧರಿಸಿದೆ.

ರಿಲಾಯನ್ಸ್ ಓಡಿಹೋದರೆ ಏನಾದೀತು..?

ಒಂದು ವೇಳೆ ಡಸಾಲ್ಟ್‌ನ ಭಾರತೀಯ ಪಾಲುದಾರರು ಓಡಿಹೋದರೆ ಏನಾದೀತು? ಆ ಪಾಲುದಾರ ಕಂಪನಿ ಉತ್ಪಾದನೆ ಯನ್ನೇ ಮಾಡದಿದ್ದರೆ? ಎಂದು ಪ್ರಶ್ನಿಸಿದ ನ್ಯಾಯಪೀಠ, ಮುಖ್ಯ ಒಪ್ಪಂದದಿಂದ ಭಾರತೀಯ ಪಾಲುದಾರಿಕೆ ಗುತ್ತಿಕೆಯನ್ನು ಬೇರ್ಪಡಿಸಬಾರದು ಎಂದು ಹೇಳಿತು. 

ವಿಮಾನಕ್ಕೆ ಶೇ. 40 ರಷ್ಟು ಅಧಿಕ ಬೆಲೆ ನೀಡಲಾಗಿದೆ. 1200 ಕೋಟಿ ರು. ಮೌಲ್ಯದ ವಿಮಾನಗಳಿಗೆ 2200 ಕೋಟಿ ರು. ಪಾವತಿಸಲಾಗಿದೆ. ಹೀಗಾಗಿ ಈ ಬಗ್ಗೆ ಸಿಬಿಐ ಎಫ್‌ಐಆರ್ ದಾಖಲಿಸಬೇಕು ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಪ್ರಶಾಂತ್ ಭೂಷಣ್ ವಾದಿಸಿದರು.

click me!