ದೇಸಿ ಕೊರೋನಾ ಲಸಿಕೆ ಮಾಡುತ್ತಾ ಕಮಾಲ್, ದುಬೈನಲ್ಲಿ IPL?ಜು.18ರ ಟಾಪ್ 10 ಸುದ್ದಿ!

By Suvarna News  |  First Published Jul 18, 2020, 4:35 PM IST

ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆಯಾಗಿದೆ. 500 ಕೋಟಿ ಆರೋಗ್ಯ ಖರ್ಚು ಉಳಿಕೆಯಾಗಿದೆ ಅನ್ನೋ ವರದಿ ಹೊರಬಿದ್ದಿದೆ. ದೇಶದ ಮೊದಲ ಕೊರೋನಾ ನಿಗ್ರಹ ಲಸಿಕೆ ಮಾನವನ ಮೇಲೆ ಪ್ರಯೋಗ ಆರಂಭಿಸಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಸಿದ್ಧತೆ ಆರಂಭಗೊಂಡಿದೆ. ಬಳುಕುವ ಬಳ್ಳಿಯಂತಾದ ಇಲಿಯಾನ, ಬಿಬಿಎಂಪಿಗೆ ಹೊಸ ಬಾಸ್ ಸೇರಿದಂತೆ ಜುಲೈ 18ರ ಟಾಪ್ 10 ನ್ಯೂಸ್ ಇಲ್ಲಿವೆ.


ನಿನ್ನೆ ಸಭೆಗೆ ನೋ ಎಂಟ್ರಿ: ಇವತ್ತು ಅಧಿಕಾರದಿಂದಲೇ ಎತ್ತಂಗಡಿ: BBMPಗೆ ಹೊಸ ಬಾಸ್...

Tap to resize

Latest Videos

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)  ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅಲ್ಲದೇ ನೂತನ ಕಮಿಷನರ್‌ನನ್ನು ಸಹ ನೇಮಕಗೊಳಿಸಿದೆ.

ಪೈಲಟ್‌ ಪದಚ್ಯುತಿಗೂ ಮುನ್ನ ನಡೆದಿತ್ತು ಈ ಬೆಳವಣಿಗೆ!...

ರಾಜಸ್ಥಾನ ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷಗಿರಿಯಿಂದ ಸಚಿನ್‌ ಪೈಲಟ್‌ರನ್ನು ಪದಚ್ಯುತಗೊಳಿಸುವುದಕ್ಕೂ ಮುನ್ನ, ಅವರ ಜೊತೆ ಪ್ರಿಯಾಂಕಾ ಗಾಂಧಿ 3 ತಾಸು ಚರ್ಚಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!.

ಕೊರೋನಾ ನಿಗ್ರಹಕ್ಕೆ ಹೇರಲಾದ ಲಾಕ್‌ಡೌನ್‌ನಿಂದಾಗಿ ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆಯಾಗಿದ್ದು, ಇದರಿಂದ ದೇಶದ ಪ್ರಮುಖ ಐದು ನಗರಗಳಲ್ಲಿ 630 ಜೀವಗಳು ಉಳಿದಿವೆ. ಅಲ್ಲದೇ ಚಿಕಿತ್ಸೆಗೆ ವ್ಯಯಿಸಬೇಕಿದ್ದ .517 ಕೋಟಿ ಉಳಿತಾಯವಾಗಿದೆ ಎಂದು ವರದಿಯೊಂದು ತಿಳಿಸಿದೆ

ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶುರು!

ದೇಶದ ಮೊದಲ ಕೊರೋನಾ ನಿಗ್ರಹ ಲಸಿಕೆಯಾಗುವ ಭರವಸೆ ಮೂಡಿಸಿರುವ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯ ಮಾನವ ಪ್ರಯೋಗವನ್ನು ರೋಹ್ಟಕ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಲಾಗಿದೆ.

ಲಾಕ್‌ಡೌನ್ ಮತ್ತೆ ಮುಂದುವೆಯುತ್ತಾ? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು!

ಲಾಕ್‌ಡೌನ್‌ ಮುಂದುವರೆಯುವುದಾ ಎಂಬ ಆಶಂಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪೂರ್ಣ ವಿರಾಮ ಹಾಕಿದ್ದಾರೆ. ‘ಲಾಕ್‌ಡೌನ್‌ ಮುಂದುವರೆಯುವುದಿಲ್ಲ’ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ.

ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!...

ಬಹುನಿರೀಕ್ಷಿತ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ದುಬೈನಲ್ಲಿ ಟೂರ್ನಿ ಆಯೋಜನೆ ಬಹುತೇಕ ಪಕ್ಕಾ ಎನಿಸಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಆರಂಭವಾಗಿವೆ.

ನ್ಯೂ ಲುಕ್: ಲಾಕ್‌ಡೌನಲ್ಲಿ ಇನ್ನಷ್ಟು ತೆಳ್ಳನಾದ್ರಾ ಇಲಿಯಾನಾ..?

ನಟಿ ಇಲಿಯಾನ ಡಿಕ್ರೋಜ ಮೊದಲೇ ತೆಳ್ಳನೆ. ಈಗ ಹೊಸ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಅರೆ ಇಲಿಯಾನ ಇನ್ನೂ ತೆಳ್ಳನಾದ್ರಾ ಎಂಬಂತಾಗಿದೆ ನೆಟ್ಟಿಗರ ರಿಯಾಕ್ಷನ್. ಇಲ್ಲಿವೆ ಫೋಟೋಸ್

ಬಾಲಿವುಡ್‌ನಲ್ಲಿ ನಕಲಿ ಸೋಷಿಯಲ್‌ ಮೀಡಿಯಾ ದಂಧೆ: ಮಾನ ಹರಣಕ್ಕೂ ದುಡ್ಡು!

ಬಾಲಿವುಡ್‌ ನಟರು, ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು ಮತ್ತು ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಹಿಂಬಾಲಕರನ್ನು ಸೃಷ್ಟಿಸಿ ಹಣ ಮಾಡುತ್ತಿರುವ ಜಾಲವೊಂದನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರತಿ ವೀಕ್ಷಣೆ, ಲೈಕ್ಸ್‌, ಕಮೆಂಟ್‌ ಮತ್ತು ರೀ ಟ್ವೀಟ್‌ಗೆ ಇಂತಿಷ್ಟುಎಂದು ದರವನ್ನು ದಂಧೆಕೋರರು ನಿಗದಿ ಮಾಡಿದ್ದರು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.

ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!...

ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ  ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ 50% ಬೆಡ್‌ಗಳು ಮೀಸಲು...

ಬೆಡ್ ಕೊರತೆ ಬಗ್ಗೆ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಶೇ.50% ಬೆಡ್‌ಗಳನ್ನು ಮೀಸಲಿಡಲು ಬೆಳಗಾಗಿ ಡಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

click me!