
ಅಹಮದಾಬಾದ್(ಜು,.18): ಮಹಾರಾಷ್ಟ್ರದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಗುಜರಾತ್‌ನ ಕಛ್‌ನಲ್ಲಿ ಬಿಎಸ್‌ಎಫ್ ಪಡೆ ಯೋಧರು ಬಂಧಿಸಿದ್ದಾರೆ. ಈತ ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ ಆಗಿದ್ದ ಮಹಿಳೆಯನ್ನು ಭೇಟಿಯಾಗಲು ಭಾರತ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ಬಂಧಿತ ವಿದ್ಯಾರ್ಥಿಯನ್ನು ಜಿಶಾನ್ ಮೊಹಮ್ಮದ್ ಸಿದ್ಧಿಕಿ ಎಂದು ಗುರಿತಿಸಲಾಗಿದ್ದು, ಈತ ಮಹಾರಾಷ್ಟ್ರದ ಖ್ವಾಜಾನಗರದ ನಿವಾಸಿ ಎಂದು ತಿಳಿದು ಬಂದಿದೆ. ಜಿಶಾನ್ ಬಂಧನದ ಕುರಿತು ಪ್ರತಿಕ್ರಿರುವ ಕಛ್ ಪೂರ್ವ ವಲಯದ ಎಸ್‌ಪಿ ಪರೀಕ್ಷಿತ ರಾಠೋಡ್ 'ಜಿಶಾನ್ ಸಿದ್ಧಿಕಿಯನ್ನು ಗುರುವಾರ ರಾತ್ರಿ ಬಿಎಸ್‌ಎಫ್ ಯೋಧರು ಬಂಧಿಸಿದ್ದು, ಬಳಿಕ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಕುಲಭೂಷಣ್ ಜಾಧವ್ ಕೇಸಲ್ಲಿ ಪಾಕ್ ಮತ್ತೆ ಕ್ಯಾತೆ..!
ಗುರುವಾರ ಸಂಜೆ ಕಛ್‌ನ ಡೊಲವೀರ ಗ್ರಾಮದಲ್ಲಿ ಮಹಾರಾಷ್ಟ್ರ ನೋಂದಾವಣಿ ಸಂಖ್ಯೆ ಇರುವ ಬೈಕ್ ಒಂದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದರು. ಇದಾದ ಬಳಿಕ ಆತ ಪಾಕಿಸ್ತಾನ ಪ್ರವೇಶಿಸಲು ಗಡಿ ರೇಖೆ ಬಳಿ ಹೆಜ್ಜೆ ಹಾಕುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಪಡೆ ಆತನನ್ನು ಬಂಧಿಸಿದ್ದಾರೆ ಎಂದು ರಾಥೋಡ್ ತಿಳಿಸಿದ್ದಾರೆ.
ಇನ್ನು ಸಿದ್ಧಿಕಿ ಜುಲೈ 11 ರಂದು ತನ್ನ ಮನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಪಾಕಿಸ್ತಾನದ ಮಹಿಳೆಯನ್ನು ಭೇಟಿಯಾಗಲು ಹೊರಟಿದ್ದ. ಲಾಕ್‌ಡೌನ್ ಇರುವುದರಿಂದ ಪಾಕಿಸ್ತಾನಕ್ಕೆ ಪ್ರವೇಶಿಸಲು ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆತ ಖುದ್ದು ಕಾಲ್ನಡಿಗೆಯಲ್ಲಿ ಈ ಕೃತ್ಯಕ್ಕೆ ಕೈ ಹಾಕಿದ್ದ ಎನ್ನಲಾಗಿದೆ.
ಚೀನಾ ವಿರುದ್ಧ ಪ್ರತಿಭಟನೆ; ಭಾರತೀಯರ ಜೊತೆ ಜನ ಗಣ ಮನ ಹಾಡಿದ ಪಾಕಿಸ್ತಾನಿಯರು!
ಆದರೆ ಕಛ್ ಬಳಿ ಆತನಿದ್ದ ಬೈಕ್ ಮರಳಿನಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಆತ ಕಾಲ್ನಡಿಗೆಯಲ್ಲೇ ಪಾಖಿಸ್ತಾನಕ್ಕೆ ಪ್ರವೇಶಿಸಲು ಮುಂದಾಗಿದ್ದ. ಇನ್ನು ಪಾಕಿಸ್ತಾನದ ಈ ಮಹಿಳೆ ಕಳೆದ ಕೆಲ ತಿಂಗಳ ಹಿಂದಷ್ಟೇ ಆತನಿಗೆ ಪರಿಚಯವಾಗಿದ್ದಳೆಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಸಿದ್ಧಿಕಿಯ ಸೋಶಿಯಲ್ ಮೀಡಿಯಾ ಖಾತೆಗಳನ್ನೂ ಪರಿಶೀಲಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ