ಪರೀಕ್ಷೆ ಇಲ್ಲದೆ ಪಾಸಾದ ಹರ್ಷ, ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಏ.02ರ ಟಾಪ್ 10 ಸುದ್ದಿ!

Suvarna News   | Asianet News
Published : Apr 02, 2020, 05:11 PM ISTUpdated : Apr 02, 2020, 05:13 PM IST
ಪರೀಕ್ಷೆ ಇಲ್ಲದೆ ಪಾಸಾದ ಹರ್ಷ, ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಏ.02ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್‌ನಿಂದ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಮಾಡಲಾಗಿದೆ. ಇತ್ತ ಶಾಲಾ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಲಾಗಿದೆ. ಕೊರೋನಾ ವಿರುದ್ಧ ವೈದ್ಯರು ಆಸ್ಪತ್ರೆ ಸಿಬ್ಬಂದಿಗಳು ಹಗಲಿರುಳು ಹೋರಾಡುತ್ತಿದ್ದಾರೆ. ಇದರ ನಡುವೆ ತಪಾಸನೆಗೆ ಹೋದ ವೈದ್ಯರನ್ನೇ ಥಳಿಸಿದ ಘಟನೆ ನಡೆದಿದೆ. ಆದೇಶ ಉಲ್ಲಂಘಿಸಿ ಜಮಾತ್ ಮಸೀದಿ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಹಲವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 2011ರ ಟೀಂ ಇಂಡಿಯಾದ ವಿಶ್ವಕಪ್ ಗೆಲುವಿನ ಸಂಭ್ರಮದ ಮೆಲುಕು, ಮಲೈಕಾ ಆರೋರ ಮಾತಿಗೆ ಬೆಚ್ಚಿ ಬಿದ್ದ ಫ್ಯಾನ್ಸ್ ಸೇರಿದಂತೆ ಏಪ್ರಿಲ್ 2ರ ಟಾಪ್ 10 ಸುದ್ದಿ ಇಲ್ಲಿವೆ.

ಆರೋಗ್ಯ ಸಿಬ್ಬಂದಿಯನ್ನೇ ಅಟ್ಟಾಡಿಸಿ ಹೊಡೆದ 'ಮೂರ್ಖರು': ಇಬ್ಬರು ವೈದ್ಯರಿಗೆ ಗಾಯ...

ಮಧ್ಯಪ್ರದೇಶದ ಇಂದೋರ್‌ನಲ್ಲಿ ಆರೋಗ್ಯ ಸಿಬ್ಬಂದಿಗಳ ಮೇಲೆ ಕಲ್ಲೆಸೆದಿರುವ ಆಗೂ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಟಾಟ್‌ಪಟ್ಟೀ ಬಾಖಲ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಡಿಯೋ ವೈರಲ್ ಅಗಿದೆ


SSLC ಹೊರತುಪಡಿಸಿ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪಾಸ್..!

ಕೊರೋನಾ ವೈರಸ್ ಸೋಂಕು ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಇರುವ ಕಾರಣ ಕರ್ನಾಟಕ ಪಠ್ಯ ಕ್ರಮದ ಓದುತ್ತಿರುವ 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಪಾಸ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಬೀದರ್‌: ಜಮಾತ್‌ಗೆ ಹೋಗಿ ಬಂದವರ ಪೈಕಿ 11 ಮಂದಿಗೆ ಕೊರೋನಾ ಸೋಂಕು

ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಮರಳಿದ 27 ಜನರ ಪೈಕಿ 11 ಮಂದಿಗೆ ಕೊರೋನಾ ಸೋಂಕು ಇರುವುದು ಪ್ರಯೋಗಾಲಯದ ಮೊದಲ ಸುತ್ತಿನ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ, ಈ ಬಗ್ಗೆ ಮೌಖಿಕ ಮಾಹಿತಿಯಷ್ಟೇ ಬಂದಿದ್ದು, ಅಧಿಕೃತ ವರದಿ ಇನ್ನೂ ಬಂದಿಲ್ಲ. ಇವರಿಗೆ ಇನ್ನೂ 2 ಸುತ್ತಿನ ಪರೀಕ್ಷೆ ನಡೆಯಬೇಕಿದ್ದು, ಆ ನಂತರವಷ್ಟೇ ಸೋಂಕು ತಗುಲಿರುವ ಬಗ್ಗೆ ದೃಢವಾಗಿ ಹೇಳಲು ಸಾಧ್ಯ ಎಂದು ಬೀದರ್‌ ಜಿಲ್ಲಾಧಿಕಾರಿ ಡಾ. ಎಚ್‌.ಆರ್‌.ಮಹಾದೇವ್‌ ತಿಳಿಸಿದ್ದಾರೆ.


ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!

ವಿತ್‌ಡ್ರಾಯಲ್‌ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರಿಂದ ಚೀಟಿ ಬರೆಸಿಕೊಂಡು ಬಂದರೆ, ಅವರು ಸೂಚಿಸಿದಷ್ಟುಪ್ರಮಾಣದ ಮದ್ಯವನ್ನು ಸರ್ಕಾರಿ ಮದ್ಯದಂಗಡಿ ಮೂಲಕ ವಿತರಿಸುವುದಾಗಿ ಹೇಳಿದ್ದ ಕೇರಳ ಸರ್ಕಾರ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ಕಟುವಾಗಿ ಟೀಕಿಸಿದೆ. 


2011ರ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಇಲ್ಲಿದೆ ಟೀಂ ಇಂಡಿಯಾ ಐತಿಹಾಸಿಕ ಪಯಣದ ಚಿತ್ರ!

ಭಾರತೀಯರು ಅದೆಷ್ಟೇ ಬ್ಯುಸಿ ಇದ್ದರೂ, ಎಲ್ಲೇ ಇದ್ದರೂ ಈ ದಿನವನ್ನು(ಏಪ್ರಿಲ್ 02) ಯಾವತ್ತೂ ಮರೆಯುವುದಿಲ್ಲ. ಸದ್ಯ ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಬಹುತೇಕರು ಈ ಐತಿಹಾಸಿಕ ದಿನವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದೇ 2011ರ ವಿಶ್ವಕಪ್ ಟ್ರೋಫಿ ಗೆದ್ದ ದಿನ. 28 ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ವಿಶ್ವ ಸಾಮ್ರಾಟನಾಗಿ ಮೆರೆದ ದಿನ. ತಂಡದ ಅದ್ಭುತ ಹೋರಾಟಕ್ಕೆ ಸಿಕ್ಕ ಗೆಲುವಿದು. 

ತಮ್ಮಿಷ್ಟದ ಸೆಕ್ಸ್ ಪೋಜಿಶನ್ ರಿವೀಲ್ ಮಾಡಿದ ಮಲೈಕಾ, ಅಭಿಮಾನಿಗಳಿಗೆ ಆಘಾತ!

ಇಂದಿಗೂ ಹಾಟ್ ಚಾರ್ಮ್ ಉಳಿಸಿಕೊಂಡೇ ಬಂದಿರುವ ಮಲೈಕಾ ಅರೋರಾ ನಟಿ ನೇಹಾ ಧೂಪಿಯಾ ಅವರಿಗೆ ಪ್ರತಿಕ್ರಿಯೆ ನೀಡುವಾಗ  ಅಭಿಮಾನಿಗಳಿಗೆ ಶಾಕ್ ಒಂದನ್ನು ನೀಡಿದ್ದಾರೆ.

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಮಾಡ್ಕೊಂಡ ಮತ್ತೊಂದು ಎಡವಟ್ಟಿದು


ಎಲ್ಲೇ ನೋಡಿದರೂ ಈಕೆ ಕಣ್ಣು ಹೊಡೆಯುವುದೇ ವಿಡಿಯೋ, ರಾತ್ರೋರಾತ್ರಿ ವೈರಲ್ ಆದ 'ಓರು ಆಂಡಾಲ್ ಲವ್' ಟ್ರೈಲರ್‌ ಈಕೆಯ ವೃತ್ತಿ ಬದುಕನ್ನೇ ಬದಲಾಯಿಸಿತು. ಆದರೆ ಈಗ ಪ್ರಿಯಾ ವಾರಿಯರ್ ಏನ್‌ ಮಾಡುತ್ತಿದ್ದಾರೆ ? ಇಲ್ಲಿದೆ ನೋಡಿ...

Fact Check| ಹಣ ಬೀದಿಗೆ ಎಸೆದ ಇಟಲಿ ಜನ!

ಹಣವನ್ನು ಬೀದಿಯಲ್ಲಿ ಹರಡಿರುವ ಎರಡು ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿವೆ. ‘ಕೊರೋನಾವೈರಸ್‌ನಿಂದ ಹೈರಾಣಾದ ಇಟಲಿಯ ಜನರು ಹಣವನ್ನು ಬೀದಿಯಲ್ಲಿ ಎಸೆಯುತ್ತಿದ್ದಾರೆ. ಹಣವೇ ಜೀವನದಲ್ಲಿ ಎಲ್ಲವೂ ಅಲ್ಲ!! ಆರೋಗ್ಯವೇ ಜೀವನ’ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ ಎನ್ನುವ ಸಂದೇಶ ಅದರ ಜೊತೆಗಿದೆ.

ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್ ವಿರುದ್ಧ ಆಕ್ರೋಶ...

ಕೊರೋನಾ ವೈರಸ್ ವಿರುದ್ಧ ಸಮರಕ್ಕೆ ಸಂಸದ ಪ್ರದೇಶಾಭಿವೃದ್ಧಿಯಲ್ಲಿ 1 ಕೋಟಿ ರೂ. ಪ್ರಧಾನಿ ಮಂತ್ರಿ ಪರಿಹಾರ ನಿಧಿಗೆ ಕೊಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಕೊರೋನಾ ತಾಂಡವ: ಚೀನಾದ ಒಂದು ನಿರ್ಧಾರ, ಉಳಿಯಿತು 7 ಲಕ್ಷ ಜನರ ಪ್ರಾಣ!.

ಚೀನಾದ ವುಹಾನ್‌ನಿಂದ ಹರಡಿದ ಕೊರೋನಾ ವೈರಸ್‌ ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ. ಅಮೆರಿಕಾ, ಇಟಲಿಯಲ್ಲಂತೂ ಇದು ಮರಣ ಮೃದಂಗ ಬಾರಿಸುತ್ತಿದೆ. ಹೀಗಿರುವಾಗ ಅಧ್ಯಯನ ವರದಿಯೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ ಚೀನಾ ಇಷ್ಟು ಶೀಘ್ರವಾಗಿ ಕೊರೋನಾ ತಡೆಯಲು ಹೇಗೆ ಯಶಸ್ವಿಯಾಯಿತು ಎಂಬುವುದನ್ನು ತಿಳಿಸಲಾಗಿದೆ. ಅಲ್ಲದೇ ಚೀನಾದ ಒಂದು ನಿರ್ಧಾರದಿಂದ ಹೇಗೆ ಏಳು ಲಕ್ಷ ಮಂದಿಯ ಪ್ರಾಣ ಉಲೀಯಿತು ಎಂಬಬುವುದನ್ನೂ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ