ಬಾಲಿವುಡ್‌ಗೆ ಆಘಾತ ತಂದ ರಿಶಿ ಕಪೂರ್ ಅಗಲಿಕೆ, ಎಲ್ಲಿಗೆ ಬಂತು ಕೊರೋನಾ ಲಸಿಕೆ? ಏ.30ರ ಟಾಪ್ 10 ಸುದ್ದಿ!

By Suvarna News  |  First Published Apr 30, 2020, 5:06 PM IST

ಲಾಕ್‌ಡೌನ್ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ಸುಳಿವು ನೀಡಿದೆ.  ಇದರ ನಡುವೆ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕುರಿತು ಆರ್ ಅಶೋಕ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಕಾರಣ ದಿನಸಿ ತರಲು ಅಂಗಡಿಗೆ ಕಳುಹಿಸಿದ ಮಗ, ಮದುವೆಯಾಗಿ ಪತ್ನಿ ಜೊತೆ ವಾಪಸ್ ಆದ ಘಟನೆ ನಡೆದಿದೆ. ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಇರ್ಫಾನ್ ಖಾನ್ ಅಗಲಿಕೆ ನೋವಿನಲ್ಲಿದ್ದ ಬಾಲಿವುಡ್‌ಗೆ ಇದೀಗ ಹಿರಿಯ ನಟ ರಿಷಿ ಕಪೂರ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಚೀನಾದಲ್ಲಿದ್ದ ಅಮೆರಿಕಾ ಕಂಪನಿ ಭಾರತಕ್ಕೆ, ರೋಹಿತ್ ಶರ್ಮಾಗೆ ಹುಟ್ಟು ಹಬ್ಬ ಸಂಭ್ರಮ ಸೇರಿದಂತೆ ಏಪ್ರಿಲ್ 30ರ ಟಾಪ್ 10 ಸುದ್ದಿ ಇಲ್ಲಿವೆ.


ಮದ್ಯ ಮಾರಾಟ:  ಸಚಿವ ಸಂಪುಟ ಸಭೆ ತೀರ್ಮಾನ ಹೇಳಿದ ಅಶೋಕ್

Tap to resize

Latest Videos

ಮದ್ಯ ಮಾರಾಟಕ್ಕೆ ಅನುಮತಿ ಕೊಡಿ  ಎಂದು ಪದೇ ಪದೇ ಬೇಡಿಕೆಗಳು ಹೆಚ್ಚಾಗುತ್ತಿವೆ. ರಾಜ್ಯದ ಹಸಿರು ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆಯಾ? ಈ ಹಿಂದೆ ಆರ್ಥಿಕ ಇಲಾಖೆ ಅಧಿಕಾರಿಗಳು ಸಹ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿತ್ತು. ಆದರೆ ಎಲ್ಲದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ತೀರ್ಮಾನವೇ ಅಂತಿಮ ಎಂದು ಹೇಳಲಾಗಿದೆ.

ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ: ತಾಯಿಗೆ ಆಘಾತ!...

ದಿನಸಿ ತರಲೆಂದು ಕಳುಹಿಸಿದ್ದ ಮಗ, ಮನೆಗೆ ಬರುವಾಗ ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆಂದು ಹೇಳಿ ತಾಯಿಯೊಬ್ಬಳು ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ಲಾಕ್‌ಡೌನ್ ಕರ್ತವ್ಯದಲ್ಲಿ ತಲ್ಲೀನರಾಗಿರುವ ಪೊಲೀಸರಿಗೆ ಈ ಪ್ರಕರಣ ಅಚ್ಚರಿಗೀಡು ಮಾಡಿದೆ.

ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!...

 

ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತಾ? ಹೌದು ಎನ್ನುತ್ತಿದೆ ಕೇಂದ್ರ ಗೃಹ ಇಲಾಖೆ ಟ್ವೀಟ್. ಮೇ.4 ರ ನಂತರ ಮತ್ತಷ್ಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳು ಸಡಲಿಕೆಯಾಗಲಿವೆ. ಆದರೆ ಹಲವು ಜಿಲ್ಲೆಗಳು ಎಂದು ಹೇಳುವ ಮೂಲಕ ಹಾಟ್ ಸ್ಪಾಟ್ಸ್ ಗೆ ಮುಕ್ತಿ ಇಲ್ಲ ಎಂದಿದೆ. ಈ ಮೂಲಕ ಪರೋಕ್ಷವಾಗಿ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಸೂಚನೆ ನೀಡಿದೆ. ಹೊಸ ಮಾರ್ಗಸೂಚಿ ಮೇ 4 ರಿಂದ ಜಾರಿಗೆ ಬರಲಿದ್ದು, ಹಲವು ಜಿಲ್ಲೆಗಳಿಗೆ ಮತ್ತಷ್ಟು ವಿನಾಯಿತಿ ಸಿಗಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಈರುಳ್ಳಿ ಬೆಳೆದಾಕೆಗೆ ಸಿಎಂ ಕರೆ ಮಾಡಲು ಕಾರಣ ಜಾಲತಾಣ..! ತಡೆರಹಿತ ರಹ'ದಾರಿ'...

ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಕರಣ ಎಲ್ಲರಿಗೂ ಗೊತ್ತಿದೆ. ಇದು ಸಾಧ್ಯವಾಗುವುದು ಹೇಗೆ..? ಸಾಮಾಜಿಕ ಜಾಲತಾಣ ಹೇಳಬೇಕಾದ್ದನ್ನು ಕೇಳಬೇಕಾದವರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದೆ.

ಹಿಟ್‌ಮ್ಯಾನ್ ರೋಹಿತ್‌ಗಿಂದು 33ನೇ ಹುಟ್ಟುಹಬ್ಬದ ಸಂಭ್ರಮ; ಹರಿದುಬಂತು ಶುಭಾಶಯಗಳ ಮಹಾಪೂರ

ಆಧುನಿಕ ಕ್ರಿಕೆಟ್‌ನ ವಿದ್ವಂಸಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಂದು(ಏ.30) ತಮ್ಮ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ಮುಂಬೈಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. 

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ!.

ಉಸಿರಾಟದ ಸಮಸ್ಯೆಯಿಂದ ಬುಧವಾರ ಬೆಳಗ್ಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್(67) ಚಿಕಿತ್ಸೆ ಫಲಕಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಇರ್ಫಾನ್‌ ಕಳೆದುಕೊಂಡ ದುಃಖದಲ್ಲಿದ್ದ ಬಾಲಿವುಡ್‌ಗೆ ಮತ್ತೊಂದು ಆಘಾತವಾಗಿದೆ.

ಚೀನಾದಲ್ಲಿನ ಅಮೆರಿಕ ಕಂಪನಿಗಳು ಭಾರತಕ್ಕೆ?

ಕೊರೋನಾ ವೈರಸ್‌ ಪಿಡುಗು ಕೊನೆಗೊಂಡ ಬಳಿಕ ಚೀನಾದಲ್ಲಿರುವ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ಪರಾರ‍ಯಯ ಹೂಡಿಕೆ ತಾಣವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

ಆ್ಯಂಬುಲೆನ್ಸ್‌ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!

ಟ್ರಾಫಿಕ್ ನಿಯಮ ಪಾಲಿಸುವುದರಲ್ಲಿ ಭಾರತೀಯರು ಎಲ್ಲರಿಗಿಂತ ಭಿನ್ನ. ದುಬಾರಿ ಮೊತ್ತದ ಫೈನ್ ಜಾರಿಗೆ ತಂದಾಗ ಪ್ರತಿಭಟನೆಗೆ ಬಹುತೇಕರು ಸಜ್ಜಾಗಿದ್ದರು. ಆದರೆ ನಿಯಮ ಪಾಲಿಸಲು ಮಾತ್ರ ಹಲವರಿಗೆ ಅಸಡ್ಡೆ. ಅದರಲ್ಲೂ ತುರ್ತು ಸೇವೆಗಳಿಗೆ ಅಡ್ಡಿ ಪಡಿಸಿದರೆ ದುಬಾರಿ ದಂಡ ಮಾತ್ರವಲ್ಲ, ಜೈಲು ಶಿಕ್ಷೆ ಕೂಡ ಅನುಭವಿಸಬೇಕು. ಹೀಗೆ ಆ್ಯಂಬುಲೆನ್ಸ್‌ಗೆ 17 ವರ್ಷದ ಬಾಲಕನೋರ್ವ ದಾರಿ ಬಿಡದೆ ಅಡ್ಡಿ ಪಡಿಸಿದ್ದಾನೆ. ಇದೀಗ ಬಾಲಕ ಹಾಗೂ ಪೋಷಕರ ಮೇಲೆ ಕೇಸ್ ದಾಖಲಾಗಿದೆ.


ವಿಜಯ್ ದೇವರಕೊಂಡ ನಟಿಗೆ ವಿಜಯ್ ದಳಪತಿ ಫ್ಯಾನ್ಸ್‌ ಕ್ಲಾಸ್‌; ಅಕೌಂಟ್ ಡಿಲೀಟ್!...

'ಪಟ್ಟಂ ಪೋಲ್' ಮಾಲಿವುಡ್‌ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಳವಿಕಾ ಮೋಹನ್ ಮೊದಲ ಬಾರಿಗೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅಷ್ಟಕ್ಕೂ ಈ ಮಾಳವಿಕಾ ಯಾರು ಇಲ್ಲಿದೆ ನೋಡಿ...


ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!

 ಕೊರೋನಾ ಹೊಡೆದೋಡಿಸುವ ಲಸಿಕೆಗಾಗಿ ಸಂಶೀಧನೆ ತೀವ್ರಗೊಂಡಿದ್ದು, ಮಾನವರ ಮೇಲೆ ಏಳು ಲಸಿಕೆಗಳ ಪ್ರಯೋಗವೂ ನಡೆದಿದೆ. ಹೀಗಿರುವಾಗ ಸದ್ಯ ಔಷಧಿಯೊಂದು ಇಡೀ ವಿಶ್ವಕ್ಕೇ ಗುಡ್‌ ನ್ಯೂಸ್ ಕೊಟ್ಟಿದೆ.
 

click me!