ಲಾರಿ ಚಕ್ರದಡಿ ತಲೆ ಸಿಕ್ಕರೂ ಬದುಕುಳಿದ, ಮೈ ಜುಂ ಎನ್ನಿಸುವ ವಿಡಿಯೋ

By Web Desk  |  First Published Jan 11, 2019, 9:38 PM IST

ಈ ದೃಶ್ಯ ಒಂದು ಕ್ಷಣ ನಿಮ್ಮ ಮೈ ಜುಂ ಎನ್ನಿಸಿಬಿಡುತ್ತದೆ. ಬೈಕ್‌ ನಲ್ಲಿ ತೆರಳುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಕೆಳಕ್ಕೆ  ಬಿದ್ದಿದ್ದಾನೆ. ಆದರೆ ಆತ ಧರಿಸಿದ್ದ ಹೆಲ್ಮೆಟ್ ಅವನ ಪ್ರಾಣ ರಕ್ಷಣೆ ಮಾಡಿದೆ.


ಬೆಂಗಳೂರು[ಜ.11] ದೇಶಾದ್ಯಂತ ಸಾರಿಗೆ ಇಲಾಖೆ ಅಧಿಕಾರಿಗಳು ಜನರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ವಿವಿಧ ರೀತಿಯ ಜಾಹೀರಾತುಗಳನ್ನು ನೀಡಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಪೂನಂ ಪಾಂಡೆ ಬಾತ್ ಟಬ್ ವಿಡಿಯೋ ವೈರಲ್‌

Tap to resize

Latest Videos

ಆದರೆ ಈ ಐಪಿಎಸ್‌ ಅಧಿಕಾರಿ ಮಾಡಿರುವ ಟ್ವೀಟ್ ಹೆಲ್ಮೆಟ್‌ನ ಪ್ರಾಮುಖ್ಯವನ್ನು ನಮ್ಮ ಮುಂದೆ ಎತ್ತಿ ಇಡುತ್ತದೆ. ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ರಾಜ್ ತಿಲಕ್ ರೋಶನ್ ಹಾಕಿರುವ ಪೋಸ್ಟ್ ಎಂಥವರ ಮೇಲೆಯೂ ಪ್ರಭಾವ ಬೀರದೆ ಇರಲಾರದು.

Watch how Helmet helped him pic.twitter.com/cL1tpYK6XZ

— Raj Tilak Roushan, IPS (@rtr_ips)
click me!