
ಬೆಂಗಳೂರು[ಜ.11] ಆದಾಯ ತೆರಿಗೆ ವಿಚಾರಣೆ ಮುಗಿಸಿ ಹೊರ ಬಂದ ನಟ ಯಶ್ ಮಾಧ್ಯಮಗಳಿಗೆ ಪ್ರಶ್ನೆ ಎಸೆದಿದ್ದಾರೆ. ‘ನನಗೆ 40 ಕೋಟಿ ಸಾಲ ಯಾಕೆ ಕೊಡುತ್ತಾರೆ. ನನ್ನ ಪ್ರಕಾರ ನನಗೆ 15 ರಿಂದ 16 ಕೋಟಿ ಲೋನ್ ಇದೆ. 15-16 ಕೋಟಿ ಲೋನ್ ಕೊಡಬೇಕಾದರೆ, ತೆರಿಗೆ ಎಷ್ಟಿರಬೇಕು? ದಾಖಲೆ ಎಷ್ಟು ನೀಡಬೇಕು? ಎಂದು ಕೇಳಿದ್ದಾರೆ.
ದಾಳಿ ವೇಳೆ ಯಶ್ ಮನೆಯಲ್ಲಿ 6.76 ಕೆಜಿ ಚಿನ್ನ ಪತ್ತೆಯಾಗಿತ್ತು. ರಾಧಿಕ ಪಂಡಿತ್ ಕುಟುಂಬದ ಹೆಸರಲ್ಲಿ ಯಶ್ ಆಸ್ತಿ ಖರೀದಿ ಮಾಡಿದ್ದರು. ಆದರೆ ಈಗ ಚಿನ್ನದ ಮಾಹಿತಿ ಕೇಳಿದಾಗ ಉಡುಗೊರೆ ಯಶ್ ಉಡುಗೊರೆ ಲೆಕ್ಕ ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಜಯಣ್ಣ, ಯಶ್ ಇಬ್ಬರಿಗು ಆಡಿಟರ್ ಆಗಿರುವ ಬಸವರಾಜ್ ಅವರ ಮೇಲೆ ದಾಳಿ ಮಾಡಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ಪಡೆದುಕೊಂಡಿದ್ದಾರೆ.
ಇಂಥ ಕೆಲಸ ಮಾಡ್ಕೊಂಡ್ರೆ ನಾನಂತೂ ಬರಲ್ಲ.. ಯಶ್ ಬೇಸರಕ್ಕೆ ಕಾರಣವೇನು?
ಇವೆಲ್ಲ ಇಂದಿಗೆ ಮುಗಿಯುವ ತನಿಖೆಯಲ್ಲ. ಐಟಿ ವಿಚಾರಣೆ ಇನ್ನೂ ಎರಡು ವರ್ಷಗಳ ಕಾಲ ನಡೆಯಲಿದ್ದು, ಅಧಿಕಾರಿಗಳು ಕರೆದಾಗೆಲೆಲ್ಲ ವಿಚಾರಣೆಗೆ ಹಾಜರಾಗುತ್ತೇವೆ. ಐಟಿ ದಾಳಿ ವೇಳೆ ಮನೆಯಲ್ಲಿ ಏನು ಸಿಕ್ಕಿದೆ ಎಂದು ಅಧಿಕಾರಿಗಳಿಗೆ ಗೊತ್ತು. ಕೆಲ ಮಾಧ್ಯಮಗಳು ಗಾಳಿ ಸುದ್ದಿ ಹರಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರ ಕಣ್ಣು ತಪ್ಪಿಸಿ ಏನು ಮಾಡಲು ಸಾಧ್ಯ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ ಮುಂದೆ ಸಹ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.