
ಮಂಡ್ಯ[ಜ.11] ನಾನು ಲೋಕಸಭೆಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಬೇಕಿರುವುದು ನಮ್ಮ ಪಕ್ಷದ ವರಿಷ್ಠರು ಎನ್ನುವ ಮೂಲಕ ಪರೋಕ್ಷವಾಗಿ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುವ ಸುಳಿವನ್ನು ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ.
ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿ, ಮಂಡ್ಯ ಲೋಕಸಭೆಯ ಎಂಟು ಕ್ಷೇತ್ರದ ಶಾಸಕರ ತೀರ್ಮಾನಕ್ಕೆ ನಾನು ಬಧ್ದವಾಗಿರುತ್ತೇನೆ. ನಾನು ಚಿತ್ರನಟನಾಗಿದ್ರು ನನಗೆ ದೊಡ್ಡ ಜವಾಬ್ದಾರಿ ಇದೆ. ನಮ್ಮ ತಂದೆ ಅವರ ಜತೆ ಹಲವು ಸಾರಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ಹಾಸನದಿಂದ ಪ್ರಜ್ವಲ್, ಮಂಡ್ಯದಿಂದ ನಿಖಿಲ್‌ಗೆ ಟಿಕೆಟ್ ಖಚಿತ?
ನಾವು ಈಗ ಸಮ್ಮಿಶ್ರ ಸರಕಾರದಲ್ಲಿದ್ದೇವೆ. ಕುಮಾರಣ್ಣ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನ ಮಾಡ್ತಿದ್ದಾರೆ. ರೈತರ ಸಂಪೂರ್ಣ ಸಾಲಮನ್ನಾ ಆಗ್ಬೇಕು ಅನ್ನೋ ನಿಟ್ಟಿನಲ್ಲಿ ನಮ್ಮ ತಂದೆ ಕೆಲಸ ಮಾಡ್ತಿದ್ದಾರೆ. ನಾನು ರಾಜಕಾರಣಕ್ಕೆ ನನ್ನ ಸ್ವಾರ್ಥಕ್ಕೊಸ್ಕರ ಬರೋದಾದ್ರೆ ನನಗೆ ರಾಜಕಾರಣವೇ ಬೇಡ. ಇದು ನನಗೆ ನಾನೇ ಹಾಕಿಕೊಳ್ಳುವ ಪ್ರಶ್ನೆ. ನಾನು ಇವಾಗ ತಾನೇ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದೇನೆ. ನನ್ನ ತಂದೆಗೆ ಚಿತ್ರರಂಗದ ಮೇಲೆ ತುಂಬಾ ಒಲವಿದೆ ಎಂದರು.
ಸೀತಾರಾಮ ಕಲ್ಯಾಣದಲ್ಲಿನ ನನ್ನ ನಟನೆ ನೋಡಿದ ನಂತರ ನನ್ನನ್ನು ರಾಜಕೀಯ ಹಾದಿ ತುಳಿಸಿ ನನ್ನಲ್ಲಿನ ಪ್ರತಿಭೆಯನ್ನ ಡಿಸ್ಟರ್ಬ್ ಮಾಡ್ಬೇಕಾ ಅನ್ನೋ ಭಾವನೆ ನನ್ನ ತಂದೆಗೆ ಇದೆ. ನಾನು ಯಾವದೇ ಕಾರಣಕ್ಕೂ ಚಿತ್ರರಂಗ ಬಿಡುವುದಿಲ್ಲ. ಮಂಡ್ಯ ರಾಜಕೀಯಕ್ಕೆ ಬರುವುದನ್ನು ತೀರ್ಮಾನಿಸಲು ನಾನು ಯಾರು..? ಜಿಪಂ ಸದಸ್ಯರು ಶಾಸಕರು ನನ್ನನ್ನು ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ನಿಖಿಲ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.