
ನವದೆಹಲಿ(ನ.08): ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಅತ್ಯಂತ ಕುತೂಹಲಕಾರಿ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪು ನಾಳೆ(ನ.09) ಪ್ರಕಟವಾಗಲಿದೆ.
ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!
ಈ ಕುರಿತು ಮಾಹಿತಿ ನೀಡಿರುವ ಸುಪ್ರೀಂಕೋರ್ಟ್ ಪಂಚಪೀಠ, ನಾಳೆ(ನ.09) ಬೆಳಗ್ಗೆ 10-30ಕ್ಕೆ ಅಯೋಧ್ಯೆ ತೀರ್ಪು ಪ್ರಕಟಿಸಲಿರುವುದಾಗಿ ಘೋಷಣೆ ಮಾಡಿದೆ.
ಅಯೋಧ್ಯೆ ತೀರ್ಪು: ವಾಟ್ಸಪ್, ಟ್ವಿಟ್ಟರ್ ಮೇಲೆ ಸರ್ಕಾರದ ನಿಯಂತ್ರಣ!
ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಮುಂದಿನ ವಾರದಲ್ಲಿ ಪ್ರಕಟಿಸಲಿದೆ ಎಂದು ಭಾವಿಸಲಾಗಿತ್ತಾದರೂ, ನಾಳೆಯೇ ತೀರ್ಪು ಪ್ರಕಟಿಸುವುದಾಗಿ ಪಂಚಪೀಠ ಸ್ಪಷ್ಟಪಡಿಸಿದೆ.
ಇನ್ನು ನಾಳೆ ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ಎಲ್ಲಾ ರಾಜ್ಯ ಸರ್ಕಾರಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.
"
ರಾಮ ಜನ್ಮಭೂಮಿಯಲ್ಲಿ ಭಾರಿ ಕಟ್ಟೆಚ್ಚರ; ಸಂಭ್ರಮಾಚರಣೆ ನಿಷೇಧ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಪೀಠ ನಾಳೆ ಬೆಳಗ್ಗೆ 10-30ಗೆ ತೀರ್ಪು ಪ್ರಕಟಿಸಲಿದೆ.
ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?
ಗೊಗೊಯ್ ನೇತೃತ್ವದ ಪಂಚಪೀಠದಲ್ಲಿ ಎಸ್. ಎ. ಬೊಬ್ಡೆ, DY ಚಂದ್ರಚೂಡ್, ಅಶೋಕ್ ಭೂಷಣ ಹಾಗೂ ಎಸ್.ಎ ನಜೀರ್ ಇರಲಿದ್ದಾರೆ.
ಸೋಶಿಯಲ್ ಮಿಡಿಯಾ ಬಳಕೆದಾರರು ಗಮನಿಸಿ: ಅಯೋಧ್ಯೆ ರೂಲ್ಸ್ ಒಮ್ಮೆ ವಿಚಾರಿಸಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.