ಕೊರೋನಾ ವೈರಸ್ ಭೀತಿ ನಡುವೆ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕೊರೋನಾ ವೈರಸ್ ಪ್ರಕರಣದಲ್ಲಿ 50ನೇ ಸ್ಥಾನದಲ್ಲಿದ್ದ ಭಾರತ ಇದೀಗ 10ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದೆ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಕಠಿಣ ನಿರ್ಧಾರಕ್ಕೆ ಸಿಎಂ ನಿರ್ಧರಿಸಿದ್ದಾರೆ. ಇಂಡಿಯನ್ ಪೋಲ್ ಲೀಗ್‌ನಲ್ಲಿ ಸನ್‌ರೈಸರ್ಸ್ ಮಣಿಸಿ ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಬರ್ಟ್ ಸೇರಿದಂತೆ ಮೇ.26ರ ಟಾಪ್ 10 ಸುದ್ದಿ ಇಲ್ಲಿವೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!...
ಭಾರೀ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ ಕೊನೆಗೂ ಆರಂಭಿಸಲಾಗಿದೆ. ಈ ಹಿನ್ನೆಲೆ ಮಂಗಳವಾರ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮಂದಿರದಲ್ಲಿ ರಾಮಲಲ್ಲಾಗೆ ಪೂಜೆ ನೆರವೇರಿಸಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಮಭಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಆತಂಕಕಾರಿ ನಿರ್ಧಾರಕ್ಕೆ ಮುಂದಾಯ್ತಾ ಕರ್ನಾಟಕ ಸರ್ಕಾರ..?
ಕೊರೋನಾ ನಿಯಂತ್ರಿಸುವ ನಿಟ್ಟಿನ್ಲಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮ ಇಡೀ ದೇಶದ ಗಮನ ಸೆಳೆದಿತ್ತು. ಲಾಕ್‌ಡೌನ್ ಹೇರಿವುದರಿಂದ ಆರಂಭವಾಗಿ, ಪರೀಕ್ಷೆ, ಕ್ವಾರಂಟೈನ್, ಸೋಂಕಿತರು ಭೇಟಿಯಾದವರನ್ನು ಗುರುತಿಸುವುದು ಹೀಗೆ ಪ್ರತಿಯೊಂದು ವಿಚಾರವಾಗಿ ತೆಗೆದುಕೊಂಡ ಕ್ರಮ ಮೆಚ್ಚುಗೆಗೆ ಪಾತ್ರವಾಗಿತ್ತು. ಆರೀಗ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಮಾತುಗಳು ಮಾತ್ರ ಭಾರೀ ಆಘಾತ ಹುಟ್ಟಿಸುವಂತಿದೆ.
ಈ ದೇಶಕ್ಕೆ ಕೊರೋನಾ ಎಂಟ್ರಿ ಬ್ಯಾನ್: ಒಬ್ಬ ಮಹಿಳೆಯ ಚಮತ್ಕಾರವಿದು!...
ಒಂದು ರಾಷ್ಟ್ರದಲ್ಲಿ ಕೊರೋನಾದ ಒಂದೇ ಒಂದು ಪ್ರಕರಣ ಈವರೆಗೆ ವರದಿಯಾಗಿಲ್ಲ. ಇದಕ್ಕೆಲ್ಲಾ ಕಾರಣವಾಗಿದ್ದು ಈ ದೇಶದ ಬ್ಯೂಟಿ ಕ್ವೀನ್. ಈ ಮಹಿಳೆಯೇ ತನ್ನ ದೇಶದ ನಾಗರಿಕರನ್ನು ಮಹಾಮಾರಿಯಿಂದ ಕಾಪಾಡಿದ್ದಾರೆ.
ಕೊರೋನಾ ಕೇಸ್ ಹೆಚ್ಚಳ: 50ನೇ ಸ್ಥಾನದಲ್ಲಿದ್ದ ಭಾರತ, ವಿಶ್ವದಲ್ಲೇ ನಂ.10!
ಸೋಂಕಿತರ ಸಂಖ್ಯೆ ದಿನೇದಿನೇ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಕೊರೋನಾ ವೈರಸ್‌ಪೀಡಿತರು ಇರುವ ವಿಶ್ವದ ಟಾಪ್ 10 ದೇಶಗಳ ಪಟ್ಟಿಗೆ ಭಾರತ ಸೋಮವಾರ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ
ಲಾಕ್‌ಡೌನ್: ವಾಟ್ಸಾಪ್ ಗ್ರೂಪ್ ಮಾಡಿ ಬಡವರಿಗೆ ಮನೆ ಕಟ್ಟಿದ ಯುವಕರು..! ಇಲ್ಲಿವೆ ಫೋಟೋಸ್...
ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ರೆ ಅಲ್ಲೊಂದು ಯುವಕರ ಗುಂಪು ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ.
ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!
ಈ ಸಲ ಕಪ್ ನಮ್ದೆ ಅನ್ನೋ ಅಭಿಮಾನಿಗಳ ಅಭಿಯಾನ ಭಾರಿ ಸದ್ದು ಮಾಡಿದೆ. ಆದರೆ RCB ಮಾತ್ರ ಪ್ರಶಸ್ತಿ ಗೆಲ್ಲಲೇ ಇಲ್ಲ. ಈ ಬಾರಿ ಕೊರೋನಾ ವೈರಸ್ ಕಾರಣ ಐಪಿಎಲ್ ಸ್ಥಗಿತಗೊಂಡಿದೆ. ಇಜರ ಬೆನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಲ ಕಪ್ ನಿಮ್ದೆ ಅಂತ ಟ್ರೋಲ್ ಮಾಡಿದೆ.
ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ದಾಸ!...
ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ. ಮಸ್ತ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ದರ್ಶನ್ ವಿಶೇಷ ಸ್ಟೈಲಿಷ್ ಹೊಸ ಲುಕ್ ರಂಜಾನ್ ಹಬ್ಬದಂದು ರಿವೀಲ್ ಆಗಿದೆ.
ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!...
ಒರಿಜಿನಲ್ ವಸ್ತುಗಳನ್ನು ಒಂದು ಇಂಚು ವ್ಯತ್ಯಾಸವಿಲ್ಲದೆ ಡೂಪ್ಲಿಕೇಟ್ ಮಾಡುವುದರಲ್ಲಿ ಚೀನಾ ಮೀರಿಸುವರು ಯಾರು ಇಲ್ಲ. ಬಹುತೇಕ ಎಲ್ಲಾ ಬ್ರಾಂಡೆಡ್ ವಸ್ತುಗಳು ಡೂಪ್ಲಿಕೇಟ್ ಚೀನಾದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೂ ರಫ್ತು ಮಾಡುತ್ತದೆ. ಈ ಕಾರಣಕ್ಕೆ ಹಲವು ಬ್ರಾಂಡೆಡ್ ಕಂಪನಿಗಳು ಚೀನಾ ವಿರುದ್ಧ ಕನೂನು ಹೋರಾಟ ಮಾಡಿ ಗೆಲುವು ಸಾಧಿಸಿದೆ. ಇದೀಗ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಸಂಕಷ್ಟ ಎದುರಾಗಿದೆ.
ಲಾಕ್‌ಡೌನ್ ನಡುವೆ ಸಿದ್ದರಾಮಯ್ಯ ಏನು ಮಾಡ್ತಿದ್ದಾರೆ?...
ಕೊರೋನಾ ಅಟ್ಟಹಾಸ ಇಡೀ ಜಗತ್ತನ್ನು ಕಾಡುತ್ತಿದೆ. ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಜನರ ಸಂಕಷ್ಟ ಆಲಿಸುತ್ತ ಬಂದಿದ್ದಾರೆ. ಪರಿಹಾರ ನೀಡಲು ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದಾರೆ. ಕೊರೋನಾ ನಡುವೆ ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ?
ನೇಪಾಳದಲ್ಲಿ ಕೊರೋನಾ ಹರಡಲು ಭಾರತ ಕಾರಣ; ಪ್ರಧಾನಿ ಕೆಪಿ ಶರ್ಮಾ!
ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ಕುರಿತು ಆರಂಭದಿಂದಲೇ ಮುನ್ನಚ್ಚೆರಿಕೆ ವಹಿಸಿದ್ದ ನೇಪಾಳ, ಇದೀಗ ಭಾರತದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ. ಭಾರತದ ಧೋರಣೆ ಹಾಗೂ ಸಡಿಲ ನಿಯಮ ನೇಪಾಳದಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದಿದ್ದಾರೆ.