ವೈರಸ್ ಹರಡಿಸುವಂತೆ ಕರೆ ಕೊಟ್ಟವನಿಗೆ ಜಾಮೀನು ನಕಾರ/ ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿ ವಜಾ/ 'ಹೊರಗೆ ಹೋಗಿ ಸೀನಿ, ವೈರಸ್ ಹರಡಿಸಿ'/ ಹೀಗೆಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್
ಬೆಂಗಳೂರು(ಮೇ 26) ವೈರಸ್ ಹರಡಿಸುವಂತೆ ಕರೆ ಕೊಟ್ಟವನಿಗೆ ಜಾಮೀನು ಸಿಕ್ಕಿಲ್ಲ. ಟೆಕ್ಕಿ ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಯನ್ನು ನ್ಯಾತಯಾಲಯ ವಜಾ ಮಾಡಿದೆ.
'ಹೊರಗೆ ಹೋಗಿ ಸೀನಿ, ವೈರಸ್ ಹರಡಿಸಿ' 'ಈ ವಾಕ್ಯ ಹರಡಿ ಪ್ರಪಂಚ ಕೊನೆಗಾಣಿಸಿ' 'ನಾಯಿಗಳ ಸಾಯಿಸಲು ನನ್ನ ಸ್ಟೆನ್ ಗನ್ ರೆಡಿ' ಹೀಗೆಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಟೆಕ್ಕಿ ಮುಜೀಬ್ ಬಂಧನವಾಗಿತ್ತು.
ಕೊರೋನಾ ಚೀನಾ ಲ್ಯಾಬ್ ಶಿಶು ಅಲ್ಲ, ಇಲ್ಲಿದೆ ಡಿಟೇಲ್ಸ್
ತನಿಖೆ ವೇಳೆ ಹಲವು ಮಹತ್ವದ ಅಂಶ ಪತ್ತೆಯಾಗಿದೆ. ಪಾಕಿಸ್ತಾನದ ವಾಟ್ಸ್ ಆ್ಯಪ್ ನಂಬರ್ ಮುಜೀಬ್ ಶೇರ್ ಮಾಡಿದ್ದ ಎಂದು ಹೇಳಲಾಗಿದೆ. ಧಾರ್ಮಿಕ ಮೂಲಭೂತವಾದ, ದೇಶ ವಿರೋಧಿ ಚಿಂತನೆ ಹೊಂದಿದ್ದ ಈತನ ಬಗ್ಗೆ ಎನ್ಐಎ ಸಹ ತನಿಖೆ ನಡೆಸುತ್ತಿದೆ.
ಈ ಬಗ್ಗೆ ತನಿಖೆ ವಿವರ ಕೋರ್ಟ್ ಗೆ ಪೊಲೀಸರು ಸಲ್ಲಿಸಿದ್ದಾರೆ. ಆರ್ಟಿಕಲ್ 21 ಅಡಿ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತ ಹಕ್ಕೆಂದು ಆರೋಪಿ ಪರ ವಕೀಲರು ಮುಂದಿಟ್ಟಿದ್ದರು . ಆರ್ಟಿಕಲ್ 21 ಗಿಂತ ಸಂವಿಧಾನದ ಮುನ್ನುಡಿಗೆ ಪ್ರಾಮುಖ್ಯತೆ ಇರಬೇಕು ಎಂದು ವಾದ ಮಂಡಿಸಲಾಗಿದೆ.
ಕೋವಿಡ್ 19 ಗೆ ಹೆದರಿರುವ ಜನರಲ್ಲಿ ಭೀತಿ ಹುಟ್ಟಿಸುವ ಯತ್ನ ಮಾಡಿದ್ದಾನೆ. ಇಂತಹ ಪೋಸ್ಟ್ ಗಳಿಂದ ಸಾಮರಸ್ಯ, ಸಮಗ್ರತೆಗೆ ಧಕ್ಕೆ ಬರುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ.ಕೆ.ಎಸ್.ಮುದಗಲ್ ಅಭಿಪ್ರಾಯ ಪಟ್ಟಿದ್ದು ಮೊಹಮ್ಮದ್ ಮುಜೀಬ್ ಜಾಮೀನು ಅರ್ಜಿ ವಜಾ ಮಾಡಿದ್ದಾರೆ.