ಭೇಟಿಯಾಗಲು ಹೋದ ರಾಜ್ಯ ನಾಯಕರಿಗೆ ಶಾ ಬುದ್ಧಿವಾದ

By Web DeskFirst Published Jul 9, 2019, 3:51 PM IST
Highlights

ಅಮಿತ್ ಶಾ ಭೇಟಿ ಮಾಡಿದ ಅರವಿಂದ ಲಿಂಬಾವಳಿ | ರಾಜ್ಯ ಬಿಜೆಪಿಗೆ ಅಮಿತ್ ಶಾ ಸಲಹೆ | ಪಿಯೂಶ್ ಗೋಯಲ್ ಮಾತನಾಡಲು ಸೂಚನೆ 

15 ದಿನದ ಹಿಂದೆ ಅರವಿಂದ ಲಿಂಬಾವಳಿ ದಿಲ್ಲಿಗೆ ಬಂದಾಗ ಅಮಿತ್‌ ಶಾರನ್ನು ಭೇಟಿಯಾಗಿದ್ದರು. ಆಗ ಅವರ ಜೊತೆ ಇದ್ದವರು ಕರ್ನಾಟಕದ ಉಸ್ತುವಾರಿ ಮುರಳೀಧರ ರಾವ್‌ ಮತ್ತು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌. ಆಗ ಕರ್ನಾಟಕದ ವಿಷಯ ಪ್ರಸ್ತಾಪ ಆಗಿ 20 ನಿಮಿಷ ಚರ್ಚೆ ನಡೆದಿದೆ.

ಅಂದು ಆಡಿಸಿದ್ರು ದೇವೇಗೌಡ್ರು, ಇಂದು ಅದೇ ಆಟಕ್ಕೆ ಸಿಲುಕಿದ್ರಾ?

ಆದರೆ ಶಾ, ‘ಎಚ್ಚರಿಕೆಯಿಂದ ಹೆಜ್ಜೆಯಿಡಿ. ಪಿಯೂಶ್‌ ಗೋಯಲ್ ಜೊತೆಗೆ ಮಾತನಾಡಿ’ ಎಂದು ಕಳುಹಿಸಿದ್ದರಂತೆ. ಅದರ ನಂತರ ನಡೆದದ್ದು ಎಲ್ಲವೂ ಗುಪ್ತ್ ಗುಪ್ತ್. ಆದರೆ ಈಗ ದಿಲ್ಲಿ ನಾಯಕರು ಹೇಳುವ ಪ್ರಕಾರ, ಬಿಜೆಪಿಗೆ ಏನೂ ಗಡಿಬಿಡಿ ಇಲ್ಲ. ಸ್ಪೀಕರ್‌ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎನ್ನುತ್ತಾರೆ.

ಮುಂಬೈ ಹೋಟೆಲ್‌ನಲ್ಲಿ ಹಳ್ಳಿ ಹಕ್ಕಿ

2007ರಿಂದ ಸತತವಾಗಿ ಪಕ್ಷಾಂತರಿಗಳ ಬಗ್ಗೆ ಕನ್ನಡದ ದೊಡ್ಡ ದೊಡ್ಡ ಪದಗಳನ್ನು ಬಳಸಿ ಟೀಕಾಪ್ರಹಾರ ನಡೆಸುತ್ತಿದ್ದ ಎಚ್‌ ವಿಶ್ವನಾಥ್‌ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದರು.

ಈಗ ಸರಿಯಾಗಿ ಎರಡು ವರ್ಷದ ನಂತರ ಮತ್ತೆ ಪಕ್ಷ ಬದಲಿಸಲು ಮುಂಬೈ ಹೋಟೆಲ್ಗೆ ಹೋಗಿ ತಂಗಿದ್ದಾರೆ. ರಾಮಲಿಂಗಾರೆಡ್ಡಿ ರಾಜೀನಾಮೆ ಕೊಟ್ಟರೂ ಹೋಟೆಲ್ ಗೆ ಹೋಗಿ ಕೂತಿಲ್ಲ. ಆದರೆ, ಸಂವೇದನಾಶೀಲ ರಾಜಕಾರಣಿ ಎಂದು ಹೇಳಿಕೊಳ್ಳುವ ಹಳ್ಳಿ ಹಕ್ಕಿ ಮುಂಬೈಗೆ ಹಾರಿದೆ. ರಾಜಕಾರಣ! 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

click me!