ಇರಾಕ್, ಅಫ್ಘಾನ್ ಕಲಾಕೃತಿ ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧಾರ!

By Web DeskFirst Published Jul 9, 2019, 3:16 PM IST
Highlights

ಲೂಟಿಗೈದಿದ್ದ ಇರಾಕ್ ಮತ್ತು ಅಫ್ಘಾನಿಸ್ತಾನ್‌ ಕಲಾಕೃತಿಗಳು| ಪುರಾತನ ಕಲಾಕೃತಿಗಳನ್ನು ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧಾರ| ರಹಸ್ಯವಾಗಿ ಇಂಗ್ಲೆಂಡ್‌ಗೆ ಸ್ಮಗಲ್ ಮಾಡಲಾಗಿದ್ದ ಪುರಾತನ ಕಲಾಕೃತಿಗಳು| ಅಫ್ಘಾನಿಸ್ತಾನಕ್ಕೆ ಸೇರಿದ ಪುರಾತನ ಗಾಂಧಾರ ಶಿಲ್ಪ ಕಲಾಕೃತಿಗಳು| ಇರಾಕ್‌ಗೆ ಸೇರಿದ ಮೆಸೊಪೊಟೊಮಿಯಾ ನಾಗರಿಕತೆ ಕಾಲದ ಕ್ಯುನಿಫಾರಂ ಸ್ಕ್ರಿಪ್ಟ್|

ಲಂಡನ್(ಜು.09): ಲೂಟಿಗೈದಿದ್ದ ಇರಾಕ್ ಮತ್ತು ಅಫ್ಘಾನಿಸ್ತಾನ್‌ಗೆ ಸೇರಿದ ಪುರಾತನ ಕಲಾಕೃತಿಗಳನ್ನು ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧರಿಸಿದೆ.

ಇರಾಕ್ ಮತ್ತು ಅಫ್ಘಾನಿಸ್ತಾನದ ಪುರಾತನ ಕಲಾಕೃತಿಗಳನ್ನು ಲೂಟಿಗೈದು ಅವುಗಳನ್ನು ಗುಪ್ತವಾಗಿ ಇಂಗ್ಲೆಂಡ್‌ಗೆ ರವಾನಿಸಲಾಗಿದ್ದು, ಇವುಗಳನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಡಲಾಗಿದೆ.

2002ರಲ್ಲಿ ಲಂಡನ್‌ಗೆ ಸ್ಮಗಲ್ ಮಾಡಲಾಗಿದ್ದ ಅಫ್ಘಾನಿಸ್ತಾನದ ಗಾಂಧಾರ ಶಿಲ್ಪ ಕಲಾಕೃತಿಗಳು ಮತ್ತು 2011ರಲ್ಲಿ ಸ್ಮಗಲ್ ಮಾಡಲಾಗಿದ್ದ ಮೆಸೊಪೊಟೊಮಿಯನ್ ನಾಗರಿಕತೆಗೆ ಸೇರಿದ ಭಾಷೆಯ ಅಕ್ಷರಗಳಿರುವ ಕ್ಯುನಿಫಾರಂ ಸ್ಕ್ರಿಪ್ಟ್‌ಗಳನ್ನು ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧರಿಸಿದೆ.

ಇದೇ ವೇಳೆ ಈಜಿಪ್ಟ್ ಹಾಗೂ ಸುಡಾನ್‌ನಿಂದ ಸ್ಮಗಲ್ ಮಾಡಲಾಗಿರುವ ಹಲವು ಪುರಾತನ ಕಲಾಕೃತಿಗಳನ್ನೂ ಮರಳಿಸಲು ಬ್ರಿಟಿಷ್ ಮ್ಯೂಸಿಯಂ ಚಿಂತಿಸುತ್ತಿದೆ ಎನ್ನಲಾಗಿದೆ.

click me!