
ವಿಜಯಪುರ [ಜು.09] : ರಾಜ್ಯ ರಾಜಕೀಯ ಸ್ಥಿತಿಗತಿ ಕ್ಷಣ ಕ್ಷಣವೂ ಬದಲಾವಣೆಯಾಗುತ್ತಿದೆ. ರಾಜೀನಾಮೆ ಮುಂದುವರಿದಿದೆ. ರಾಜೀನಾಮೆ ನೀಡಿದ ಶಾಸಕರಿಗೆ ಬಿಜೆಪಿಯಿಂದ ಹಣದ ಆಫರ್ ನೀಡಲಾಗಿದೆ ಎನ್ನುವ ಆರೋಪಕ್ಕೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ ಎನ್ನುವ ಸಿಎಂ ಆರೋಪದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಪಾಟೀಲ್, ನಾನೂ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಸ್ವಾಮಿ ನನಗೂ 30 ಕೋಟಿ ರು.ಬೇಡಿಕೆ ಇಟ್ಟಿದ್ದರು.
MLC ಮಾಡಲು ನನ್ನ ಕಾರ್ಯಕರ್ತರ ಬಳಿ ಬಳಿ ಹಣ ನೀಡಬೇಕಾಗುತ್ತದೆ ಎಂದು ಕೇಳಿದ್ದರು. ಕುಮಾರಸ್ವಾಮಿ ಅವರೇನು ಸತ್ಯ ಹರಿಶ್ಚಂದ್ರನಲ್ಲ. ಬಿಜೆಪಿ ನಾಯಕರ ಹೆಸರು ಕೆಡಿಸಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಇನ್ನು ಅಂದು ಸಿಎಂ ಕುಮಾರಸ್ವಾಮಿ ನಮ್ಮ ಕಾರ್ಯಕರ್ತರ ಬಳಿ ಹಣ ಕೇಳಿದ್ದನ್ನ ಕಾಂಗ್ರೆಸ್ ನಾಯಕರು ಆಡಿಯೋ ಮಾಡಿದ್ದರು. ಅದನ್ನು ಕಾಂಗ್ರೆಸ್ ನಾಯಕರೇ ಆಡಿಯೋ ಮಾಡಿದ್ದರು. ಅದನ್ನು ಕಾಂಗ್ರೆಸ್ ನಾಯಕರೇ ಸೀಡಿಯನ್ನೂ ಮಾಡಿದ್ದರು. ಅವರಿಗೆ ನಾಚಿಕೆ ಎನ್ನುವುದೇ ಇಲ್ಲವೆಂದು ವಿಜು ಗೌಡ ಪಾಟೀಲ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.