ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ 30 ಸ್ತ್ರೀಯರು ಸಜ್ಜು: ದಿನಾಂಕವೂ ಫಿಕ್ಸ್!

By Web DeskFirst Published Dec 16, 2018, 8:20 AM IST
Highlights

ಶಬರಿಮಲೆ ಅಯ್ಯಪ್ಪ ದೇವರ ದರ್ಶನಕ್ಕೆ ತೆರಳಲು ತಮಿಳುನಾಡಿನ 30 ಮಹಿಳೆಯರ ಗುಂಪು ನಿರ್ಧರಿಸಿದೆ. ಇದಕ್ಕೆ ಈಗಾಗಲೇ ದಿನಾಂಕವನ್ನೂ ಫಿಕ್ಸ್ ಮಾಡಿದೆ.

ಚೆನ್ನೈ[ಡಿ.16]: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ತೆರಳಲು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಡ್ಡಿ ಮಾಡುತ್ತಿರುವ ಹೊರತಾಗಿಯೂ ಡಿ.23ರಂದು ದೇವರ ದರ್ಶನಕ್ಕೆ ತೆರಳಲು ತಮಿಳುನಾಡಿನ 30 ಮಹಿಳೆಯರ ಗುಂಪು ನಿರ್ಧರಿಸಿದೆ. ಏನೇ ಪರಿಸ್ಥಿತಿ ಎದುರಾದರೂ ದೇವರ ದರ್ಶನ ಮಾಡಿಯೇ ತೀರುವುದಾಗಿ 35-40ರ ವಯೋಮಾನ ಮಹಿಳೆಯರ ಈ ಗುಂಪು ಘೋಷಿಸಿದೆ.

ಶಬರಿಮಲೆ ಅಯ್ಯಪ್ಪ ದೇಗುಲ ಹೋರಾಟಕ್ಕೆ ಮೊದಲ ಬಲಿ?

ತಮಿಳುನಾಡಿನಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಮನಿಥಿ’ ಎಂಬ ಸಂಘಟನೆ ಸದಸ್ಯರು ಈ ತೀರ್ಮಾನ ಪ್ರಕಟಿಸಿದ್ದಾರೆ. ನಾವೆಲ್ಲಾ ಅಯ್ಯಪ್ಪನ ಕಟ್ಟಾಭಕ್ತರು. ಡಿ.22ಕ್ಕೆ ನಾವು ತಮಿಳುನಾಡಿನಿಂದ ಹೊರಟು ಡಿ.23ಕ್ಕೆ ದೇವರ ದರ್ಶನಕ್ಕಾಗಿ ಶಬರಿಮಲೆ ಬೆಟ್ಟಹತ್ತಲಿದ್ದೇವೆ. ಈ ವೇಳೆ ಎದುರಾಗಬಹುದಾದ ಅಡ್ಡಿ ಆತಂಕಗಳ ಬಗ್ಗೆ ನಮಗೆ ಎಲ್ಲಾ ರೀತಿಯ ಅರಿವೂ ಇದೆ. ಅವರು ನಮ್ಮನ್ನು ಹಿಂದೆ ಹಿಂದೆ ತಳ್ಳಿದಷ್ಟೂನಮ್ಮ ಹೋರಾಟ ಮತ್ತಷ್ಟುತೀವ್ರಗೊಳ್ಳುತ್ತದೆ. ಇಂಥ ಸಂಕಷ್ಟನಮಗೆ ಹೊಸದೇನಲ್ಲ. ನಿತ್ಯ ಜೀವನದಲ್ಲಿ ನಾವು ಇದನ್ನೆಲ್ಲಾ ಅನುಭವಿಸಿಯೇ ಇರುತ್ತೇವೆ ಎಂದು ಸಂಘಟನೆಯ ಸದಸ್ಯರ ಪೈಕಿ ಒಬ್ಬರಾದ ವಸುಮತಿ ವಾಸಂತಿ ಹೇಳಿದ್ದಾರೆ.

ಕೊನೆಗೂ ಶಬರಿಮಲೆಯತ್ತ ಮುಖಮಾಡಿದ ಭಕ್ತರು!

ಅಯ್ಯಪ್ಪ ದೇವರ ದರ್ಶನ ಮಾಡಲು ಎಲ್ಲಾ ವಯೋಮಾನದ ಮಹಿಳೆಯರಿಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದ ಹೊರತಾಗಿಯೂ, ವಿವಿಧ ಸಂಘಟನೆಗಳ ವಿರೋಧದ ಕಾರಣ, ಇದುವರೆಗೆ 10-50ರ ವಯೋಮಾನದ ಯಾವುದೇ ಮಹಿಳೆಯರಿಗೆ ದೇಗುಲ ಪ್ರವೇಶ ಸಾಧ್ಯವಾಗಿಲ್ಲ. ದೇವರ ದರ್ಶನಕ್ಕೆಂದು ಬಂದ 16 ಮಹಿಳೆಯರನ್ನು ಇದುವರೆಗೆ ಹಿಂದಕ್ಕೆ ಕಳುಹಿಸಲಾಗಿದೆ.

click me!