
ಪಾಟ್ನ, [ಡಿ.15]: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಶಾಸಕ ರಾಜ್ ಬಲ್ಲಭ್ ಯಾದವ್ ತಪಿತಸ್ಥ ಎಂದು ಕೋರ್ಟ್ ಆದೇಶಿಸಿದೆ.
ನ್ಯಾಯಾಲದ ವಿಶೇಷ ನ್ಯಾಯಾಧೀಶ [ಸಂಸದರು / ಎಂಎಲ್ಎ ಪ್ರಕರಣಗಳು] ಪರಶುರಾಮ ಯಾದವ್ ಅವರು ಇಂದು [ಶನಿವಾರ] ಕೂಲಂಕುಶವಾಗಿ ಪರಿಶೀಲಿಸಿದ್ದು, ಆರ್ ಜೆಡಿ ಶಾಸಕ ರಾಜ್ ಬಲ್ಲಭ್ ಒಳಗೊಂಡಂತೆ ಇತರೆ ಐವರನ್ನು ಅಪರಾಧಿಗಳು ಎಂದು ಹೇಳಿ ಆದೇಶ ಹೊರಡಿಸಿದರು.
ಇನ್ನು ಈ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಇನ್ನು ಪ್ರಕಟಿಸಿಲ್ಲ. 2016 ಫೆಬ್ರವರಿ 6ರಂದು ಮನೆಯಿಂದ ಹೊರಕ್ಕೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯನ್ನು ಅಪಹರಿಸಿ ಶಾಸಕರ ಬಳಿಗೆ ಕರೆದುಕೊಂಡು ಬಂದು ಮದ್ಯಪಾನ ಮಾಡಿಸಿ ಅತ್ಯಾಚಾರ ಮಾಡಿದ್ದರು.
ಘಟನೆಯಿಂದ ಆಘಾತಕ್ಕೊಳಗಾಗಿದ್ದ ಬಾಲಕಿ ಚೇತರಿಸಿಕೊಂಡು ಮನೆಯವರಿಗೆ ವಿಷಯ ತಿಳಿಸಿದ್ದಳು. ಬಳಿಕ ಫೆಬ್ರವರಿ 09ರಂದು ನಲಂದಾ ಪೊಲೀಸರು ಐಪಿಸಿ ಸೆಕ್ಷನ್ 164ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದರು.
ಘಟನೆ ಬಗ್ಗೆ ಎಫ್ ಐಆರ್ ವರದಿಗಳು ಬರುತ್ತಿದ್ದಂತೆ ತಕ್ಷಣವೇ ಶಾಸಕ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು, ನವಾಡ ಕ್ಷೇತ್ರದ ಶಾಸಕ ರಾಜ್ ಅವರು ಈ ಹಿಂದೆ ಆರ್ ಜೆಡಿ ಸರ್ಕಾರದಲ್ಲಿ ಸಚಿವರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ