'ಕಮಲ' ಮುಡಿದರು: ಹಾಸನ್ ಅಭ್ಯರ್ಥಿಗಳು ಕಮಾಲ್ ಮಾಡಿದರು!

Published : Nov 06, 2019, 01:22 PM ISTUpdated : Nov 06, 2019, 01:26 PM IST
'ಕಮಲ' ಮುಡಿದರು: ಹಾಸನ್ ಅಭ್ಯರ್ಥಿಗಳು ಕಮಾಲ್ ಮಾಡಿದರು!

ಸಾರಾಂಶ

ಕಮಲ್ ಹಾಸನ್‌ಗೆ ಕೈಕೊಟ್ಟ ಲೋಕಸಭಾ ಚುನವಣಾ ಅಭ್ಯರ್ಥಿಗಳು| ಪಕ್ಷ ತ್ಯಜಿಸಿದ ಮೂವರು MNM ಲೋಕಸಭಾ ಅಭ್ಯರ್ಥಿಗಳು| ಕಮಲ್ ರಾಜಕೀಯ ನಿಲುವುಗಳಿಂದ ಬೇಸರಗೊಂಡು ಪಕ್ಷ ತೊರೆಯುತ್ತಿರುವುದಾಗಿ ಘೋಷಣೆ| ಮೋದಿ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಬಿಜೆಪಿ ಸೇರುತ್ತಿರುವಿದಾಗಿ ಸ್ಪಷ್ಟನೆ|  

ಚೆನ್ನೈ(ನ.06): ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಾಯಮ್(MNM)ಪಕ್ಷದಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಬಿಜೆಪಿ ಸೇರಿದ್ದಾರೆ.

ಭಾರತದ ಮೊದಲ ಟೆರರಿಸ್ಟ್ ಹಿಂದೂ; ಕಮಲ್ ಹಾಸನ್ ವಿವಾದದ ಕಿಡಿ

ಪ್ರತಿಯೊಂದು ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ: ಕಮಲ್

ಪಕ್ಷ ಸ್ಥಾಪನೆ ಸಂದರ್ಭದಲ್ಲಿ ಕಮಲ್ ಜೊತೆಗೆ ನಿಂತಿದ್ದ ಎನ್.ರಾಜೇಂದ್ರನ್, ಟಿ.ರವಿ ಹಾಗೂ ಎಸ್.ಕರುಣ್ಯಾ, ಇದೀಗ ಪಕ್ಷ ತೊರೆದು ಕಮಲ ಪಾಳೇಯ ಸೇರಿದ್ದಾರೆ. ಈ ಮೂವರೂ ಕಳೆದ ಲೋಕಸಭೆ ಚುನಾವಣೆಯಲ್ಲಿ MNM ಪಕ್ಷದಿಂದ ಸ್ಪರ್ಧಿಸಿದ್ದರು.

'ಹಿಂದೂ' ಎನ್ನುವ ಬದಲು ಭಾರತೀಯರೆನ್ನಿ, ಯಾಕಂದ್ರೆ...!: ಕಮಲ್ ಮತ್ತೊಂದು ವಿವಾದ

ಕಮಲ್ ಟೀವಿ ಚಾನೆಲ್ ಆರಂಭ, ಚುನಾವಣೆಗೆ ಸಜ್ಜು

ಆದರೆ ಕಮಲ್ ರಾಜಕೀಯ ನಿಲುವುಗಳಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಈ ಮೂವರೂ ನಾಯಕರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದ್ದು, ಈ ಕಾರಣಕ್ಕೆ ಬಿಜೆಪಿ ಸೇರುತ್ತಿರುವುದಾಗಿ ಈ ನಾಯಕರು ಹೇಳಿದ್ದಾರೆ.

ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್

POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್
ಕಮಲ್ ಹಾಸನ್ 2018ರಲ್ಲಿ ಮಕ್ಕಳ್ ನಿಧಿ ಮಾಯಮ್ ಪಕ್ಷ ಸ್ಥಾಪಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ MNM ಪಕ್ಷ ಶೇ.3.2ರಷ್ಟು ಮತಗಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!