ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಹೊಸ ಲುಕ್/ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡ ನಿರಾಭರಣ ಸುಂದರಿ/ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ ಪ್ರಿಯಾ ಭಜನೆ
ಬೆಂಗಳೂರು[ಅ. 10] ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಮೋಡಿ ಮಾಡಿದ್ದಾರೆ. ಹೊಸ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಹವಾನೇ ಸೃಷ್ಟಿ ಮಾಡಿದ್ದ ಪ್ರಿಯಾ ಲುಕ್ ಒಮ್ಮೆ ನೋಡಲೇಬೇಕು. ಯಾವುದೇ ಆಭರಣಗಳನ್ನು ಹಾಕಿಕೊಳ್ಳದೆ ನಿರಾಭರಣ ಸುಂದರಿಯಾಗಿ ಪ್ರಿಯಾ ಹೊಚ್ಚ ಹೊಸ ಪೋಟೋ ಶೂಟ್ ನಲ್ಲಿ ಮಿಂಚಿದ್ದಾರೆ.
ಕಿಚ್ಚು ಹಚ್ಚಿದ ಪ್ರಿಯಾ ವಾರಿಯರ್ ಟ್ಯಾಟೊ
ಹಿಂದಿಯ ಗೀತೆಯೊಂದನ್ನು ಕೋಟ್ ಮಾಡಿರುವ ಪ್ರಿಯಾ ಅವರ ಕೋಟ್‌ಗೆ ಕಮೆಂಟ್ ಗಳು ಬಂದಿವೆ. ಮಲೆಯಾಳಂ ಚಿತ್ರದಿಂದ ಜೀವನ ಆರಂಭಿಸಿದ ಪ್ರಿಯಾ ಅದೆಷ್ಟೊ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು.
ಬಾಲಿವುಡ್ ಸಿನಿಮಾ ಶ್ರೀದೇವಿ ಬಂಗಲೋದಲ್ಲಿಯೂ ಕಾಣಿಸಿಕೊಂಡ ಪ್ರಿಯಾ ಅಭಿಮಾನಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಯ್ತು. ತೆಲುಗು ಚಿತ್ರ ರಂಗದಲ್ಲಿಯೂ ಪ್ರಿಯಾ ಹೆಜ್ಜೆ ಗುರುತು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ಪ್ರಿಯಾ ಸದಸ್ಯದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.