
ಮೈಸೂರು, [ಅ.05]: ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಬೇಬಿ ಡಾಲ್ ನಿವೇದಿತಾ ಗೌಡ ಹಾಗೂ ಕನ್ನಡ ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿರುದ್ಧ ದೂರು ಸಲ್ಲಿಸಿದ್ದಾರೆ. ವೈಯುಕ್ತಿಕ ಕೆಲಸಕ್ಕಾಗಿ ಸರ್ಕಾರಿ ವೇದಿಕೆ ಬಳಸಿದ್ದು ತಪ್ಪು, ಆಹ್ವಾನವಿಲ್ಲದೆಯೂ ನಿವೇದಿತಾ ಅವರಿಗೆ ವೇದಿಕೆ ಮೇಲೆ ಅವಕಾಶ ನಿಡಲಾಗಿದೆ.ಇದು ಭದ್ರತಾ ಲೋಪವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?
ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲಿಸಲಾಗಿದೆ ಇನ್ನು ಯೂತ್ ಕಾಂಗ್ರೆಸ್ ಮಾತ್ರವಲ್ಲದೆ ಕರ್ನಾಟಕ ಪ್ರಜಾಪಾರ್ಟಿ, ಸಾಮಾಜಿಕ ಹೋರಾಟಗಾರ ಗಂಗರಾಜುರಿಂದಲೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿರುದ್ಧ ದೂರು ದಾಖಲಾಗಿವೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಗಾಯಕ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿಕೊಂಡು ಉಂಗುರ ತೊಡಿಸಿದ್ದರು. ಅದು ಇದೀಗ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿವೆ.
ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ
ಅಷ್ಟೇ ಅಲ್ಲದೇ ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಚಂದನ್ ಶೆಟ್ಟಿ ಪರ ನಿಂತಿದ್ದು, ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಮತ್ತೊಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗರಂ ಆಗಿದ್ದಾರೆ.
ಚಾಮುಂಡೇಶ್ವತಿ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ಎಂಗೇಜ್ ಮೆಂಟ್ ಸರಿಯಲ್ಲ, ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.