ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?

Published : Jun 13, 2024, 02:11 PM ISTUpdated : Jun 13, 2024, 02:17 PM IST
ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?

ಸಾರಾಂಶ

ರಾಕಿಂಗ್ ಸ್ಟಾರ್ ನಟ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಸ್ನೇಹ, ಗೆಳೆತನದ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಸ್ನೇಹ ತುಂಬಾ..

ಕನ್ನಡದ, ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Yash) ಇಂದು ಜಗದ್‌ವಿಖ್ಯಾತಿ ಪಡೆದಿರುವ ನಟ. ಕೆಜಿಎಫ್ (KGF) ಸಿನಿಮಾಗಳ ಮೂಲಕ ಪ್ರಪಂಚದ ಮೂಲೆಮೂಲೆಯನ್ನು ತಲುಪಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಇದೀಗ ಟಾಕ್ಸಿಕ್ ಎಂಬ ಪ್ಯಾನ್ ವರ್ಲ್ಡ್‌ ಹಾಗು ರಾಮಾಯಣ ಎಂಬ ಬಾಲಿವುಡ್‌ ಸಿನಿಮಾದಲ್ಲಿ ನಟ ಯಶ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾಗೆ ನಟ ಯಶ್ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಈ ಸಿನಿಮಾದ ಬಜೆಟ್ 885 ಕೋಟಿ. 

ವಿಷಯ ಏನೆಂದರೆ, ರಾಕಿಂಗ್ ಸ್ಟಾರ್ ನಟ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಸ್ನೇಹ, ಗೆಳೆತನದ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಸ್ನೇಹ ತುಂಬಾ ಮುಖ್ಯವಾದುದು. ಸ್ನೇಹ ಅಂದ್ರೆ ಏನು ಅಂದ್ರೆ, ನಾವು ಏನ್ ಮಾಡಿದೀವೋ ಅದು ವಾಪಸ್ ಬರುತ್ತೆ ಪ್ರಪಂಚದಲ್ಲಿ. ಅದೇ ಅಲ್ವಾ ಜೀವನದ ಬೇಸಿಕ್? ನಟ ಯಶ್ ಕೂಡ ಅದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅದನ್ನೇ ಅವರು ಹೇಳಿದ್ದಾರೆ ಕೂಡ. 

ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!

ನಟ ಯಶ್ ಮಾತು ಅದೆಷ್ಟು ಸತ್ಯ ಅಲ್ಲವೇ? ಸನಾತನ ಧರ್ಮದ ತಿರಳೇ ಅದು, ಸಿದ್ದಾಂತವೇ ಅದು. ಅದನ್ನೇ ಕರ್ಮ ಸಿದ್ಧಾಂತ ಎಂದು ಕರೆಯುವುದು. ನಾವು ಏನು ಮಾಡಿದ್ದೇವೋ ಅದೇ ನಮಗೆ ಸಿಗುತ್ತದೆ. ಅದನ್ನು ಜನ್ಮಜನ್ಮಾಂತರಕ್ಕೆ ಅಳವಿಡಿಸಿ ಹೇಳಿದ್ದಾರೆ. ಆದರೆ, ಸ್ನೇಹದ ವಿಷಯದಲ್ಲಿ ಅದು ತತ್ ಕ್ಷಣದ ಪರಿಣಾಮ. ಅಂದರೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ. ನಾವು ಯಾವ ರೀತಿಯಲ್ಲಿ ಎಷ್ಟು ಒಳ್ಳೆಯ ಸ್ನೇಹವನ್ನು ಕೊಡುತ್ತೇವೆಯೋ ಅಷ್ಟು ನಮಗೆ ಅದು ವಾಪಸ್ ಬರುತ್ತದೆ. 

ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?

ಯಾವುದಾದರೂ ಅಷ್ಟೇ. ನಾವು ಕೊಡುವುದೇ ನಮಗೆ ವಾಪಸ್ ಬರುತ್ತದೆ. ಅದು ಪ್ರೀತಿ, ಕರುಣೆ, ದ್ವೇಷ, ದಯೆ ಅಥವಾ ಸ್ನೇಹ ಹೀಗೆ ಯಾವುದೇ ಆಗಿರಲಿ, ನಾವೇನು ನೀಡಿದ್ದೇವೆಯೋ ಅದೇ ನಮಗೆ ವಾಪಸ್ ಬರುತ್ತದೆ. ಈ ಪ್ರಪಂಚ ನಡೆಯುವುದೇ ಹೀಗೆ. ಅದನ್ನು ಚೆನ್ನಾಗಿ ಅರಿತಿರುವ ಯಶ್ ಯಾವುದೋ ಒಂದು ವೇದಿಕೆಯಲ್ಲಿ ಈ ಮಾತು ಹೇಳಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಹೇಳಿ ಕೇಳಿ ನಟ ಯಶ್ ಈಗ ಪ್ಯಾನ್ ಇಂಡಿಯಾ ನಟ. ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನಲ್ಲೇ ಪ್ರಪಂಚದ ತುಂಬಾ ಹೆಸರು ಮಾಡಿರುವ ವ್ಯಕ್ತಿ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್