ಡಾ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರಿಬ್ಬರದು ಅನುರೂಪವಾದ ಜೋಡಿ. ಅವರಿಬ್ಬರಲ್ಲಿ ಅದೆಷ್ಟು ಹೊಂದಾಣಿಕೆ ಇತ್ತು ಎಂದರೆ, ಹೊರಗಡೆ ನೋಡಿದವರು ಅವರಿಬ್ಬರ ಅನ್ಯೋನ್ಯತೆಯ ಬಗ್ಗೆಯೇ ಮಾತನಾಡುತ್ತಿದ್ದರು.
ಡಾ ರಾಜಕುಮಾರ್ (Dr Rajkumar) ಹಾಗೂ ಪಾರ್ವತಮ್ಮ (Parvathamma Rajkumar) ಅವರಿಬ್ಬರದು ಅನುರೂಪವಾದ ಜೋಡಿ. ಅವರಿಬ್ಬರಲ್ಲಿ ಅದೆಷ್ಟು ಹೊಂದಾಣಿಕೆ ಇತ್ತು ಎಂದರೆ, ಹೊರಗಡೆ ನೋಡಿದವರು ಅವರಿಬ್ಬರ ಅನ್ಯೋನ್ಯತೆಯ ಬಗ್ಗೆಯೇ ಮಾತನಾಡುತ್ತಿದ್ದರು. ಆದರೆ, ಅಂತಹ ಅಪರೂಪ ಹಾಗು ಅನುರೂಪ ಜೋಡಿ ಆಗಿದ್ದ ಡಾ ರಾಜ್‌ಕುಮಾರ್ ಹಾಗು ಪಾರ್ವತಮ್ಮ ಅವರಿಬ್ಬರೂ ಎಂದಾದರೂ ಜಗಳ ಆಡಿದ್ದರೇ? ಹೌದು, ಸಾಕಷ್ಟು ಬಾರಿ ಜಗಳ ಆಡಿದ್ದರು. ಆದರೆ ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡಿದ್ದರು.
ಆದರೆ, ಕುತೂಹಲದ ಸಂಗತಿ ಎಂದರೆ, ಅವರಿಬ್ಬರೂ ಮೊದಲು ಜಗಳವಾಡಿದ್ದು ಯಾವತ್ತು? ಇದಕ್ಕೆ ಉತ್ತರವನ್ನು ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಒಮ್ಮೆ ಹಂಚಿಕೊಂಡಿದ್ದರು. 'ನಮ್ಮಿಬ್ಬರಲ್ಲಿ ಮೊದಲು ಜಗಳವಾಗಿದ್ದು ಚಿತ್ರದುರ್ಗದ ಕ್ಯಾಂಪ್‌ನಲ್ಲಿ. ಅದು ಬೇಡರ ಕಣ್ಣಪ್ಪ ಚಿತ್ರದ ಶೂಟಿಂಗ್ ಸಮಯ. ಆ ಸಿನಿಮಾದ ಶೂಟಿಂಗ್ ಮುಗಿದು ಚಿತ್ರವು ರಿಲೀಸ್ ಕೂಡ ಆಗಿತ್ತು. ಮೇ 8ನೇ ತಾರೀಖು ನಾವಿಬ್ಬರೂ ಸಂಸಾರ ಶುರು ಮಾಡಿದ್ದು. ಆ ಸಮಯದಲ್ಲೇ ನಮ್ಮಿಬ್ಬರ ಮಧ್ಯೆ ನಡೆದಿದ್ದು ಮೊದಲ ಸಿಟ್ಟಿನ ಕಾಳಗ.
ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?
ನನಗಾಗ 14 ವರ್ಷ ತುಂಬಿ 15ನೇ ವರ್ಷ ಕಾಲಿಟ್ಟಿತ್ತು. ಆ ಸಮಯದಲ್ಲಿ ನಾವಿಬ್ಬರೂ ಚಿತ್ರದುರ್ಗದಲ್ಲಿದ್ದ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ವಿ. ಬಸ್‌ನಲ್ಲಿ ನಾವಿಬ್ಬರೂ ಹೋಗುತ್ತಿರುವಾಗ ನಿನಗೆ ಅಡುಗೆ ಬರುತ್ತಾ ಎಂದು ಕೇಳಿದ್ರು, ನಾನು ಫಸ್ಟ್ ಕ್ಲಾಸ್ ಅಂದೆ. ಆದ್ರೆ ಅವ್ರ ರಿಲೇಷನ್ ಮನೆಗೆ ಹೋದಗ ಅಲ್ಲಿನ ಮನೆಯೊಡತಿ ಇರಲಿಲ್ಲ. ಆಗ ನಮ್ಮನೆಯವರು ನಿನಗೆ ಹೇಗೂ ನಾನ್‌ವೆಜ್ ಮಾಡೋಕೆ ಬರುತ್ತಲ್ಲಾ, ಮಾಡು ಅಂದ್ಬಿಟ್ರು. ನಾನು ನಾಲ್ಕಾರು ಹಸಿಮೆಣಸಿನ ಕಾಯಿ ಹಿಡಿದು ಅಡುಗೆ ಮಾಡವವರ ಥರ ಆಕ್ಟ್ ಮಾಡತೊಡಗಿದೆ.
ಶೆಡ್‌ನಲ್ಲಿ ಕೂಡಿಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಡುವಾಗ ನಟ ದರ್ಶನ್ ಹೇಳಿದ್ದೇನು?
ಡಾ ರಾಜ್ ಅವರಿಗೆ ಸಿಕ್ಕಾಪಟ್ಟೆ ಹಸಿವು ಬೇರೆ ಆಗಿತ್ತು. ಅವರು ನನಗೆ ಸಿಕ್ಕಾಪಟ್ಟೆ ಬೈದುಬಿಟ್ರು. ಆಗ ಅಲ್ಲಿದ್ದ ನಮ್ಮ ಚಿಕ್ಕಪ್ಪ 'ಹೋಗ್ಲಿ ಬಿಡಿ, ಅವ್ರಿಗೆ ಮಾಡಿ ಅಭ್ಯಾಸ ಇಲ್ಲ' ಅಂದ್ಬಿಟ್ಟು ನಮ್ಮನೆಯವ್ರನ್ನ ಸಮಾಧಾನ ಮಾಡಲು ನೋಡಿದ್ರು. ಆದರೆ ತುಂಬಾ ಹಸಿದಿದ್ದ ನಮ್ಮನೆಯವರು ಬರುತ್ತೆ ಅಂದ್ಬಿಟ್ಟು ಈಗ ನಾಟಕ ಮಾಡ್ತವ್ಳೆ ಎನ್ನುತ್ತಾ ನನ್ನನ್ನೇ ಗುರಾಯಿಸಿದ್ದರು. ಅದೇ ನಮ್ಮಬ್ಬರಲ್ಲಿ ಮೂಡಿದ್ದ ಮೊದಲ ಸಿಟ್ಟಿನ ಸನ್ನಿವೇಶ' ಎಂದಿದ್ದರು ಪಾರ್ವತಮ್ಮ ರಾಜ್‌ಕುಮಾರ್.
ರಿಯಲೀ ಅದೊಂದೇ ಕಾರಣ, ನಮ್ಮಿಬ್ಬರ ಡಿವೋರ್ಸ್‌ಗೆ ಮತ್ತೇನೂ ಕಾರಣವಿರಲಿಲ್ಲ; ಚಂದನ್ ಶೆಟ್ಟಿ