'ಬಿಗ್‌ ಬಾಸ್‌'ನಲ್ಲಿ ವಿಜಯ್ ಸೇತುಪತಿ ಹೇಳಿದ 'ಆ ಮಾತು' ಸಿಎಂ ವಿಜಯ್‌ಗೆ ಲಿಂಕ್ ಆಗಿ ಭಾರೀ ಕೋಲಾಹಲ ಸೃಷ್ಟಿ!

Published : Sep 19, 2026, 10:53 AM IST
Vijay Sethupathi Thalapathy Vijay

ಸಾರಾಂಶ

ಹಳೆಯ ಮೆಚ್ಚುಗೆಯ ಮಾತುಗಳ ಜೊತೆಗೆ ಹೊಸ ಹೇಳಿಕೆ ಸೇರಿಕೊಂಡಿರುವುದು ಅಭಿಮಾನಿಗಳ ಹಾಗೂ ನೆಟ್ಟಿಗರ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ. ಸದ್ಯ ಈ ಚರ್ಚೆ ಇಡೀ ತಮಿಳುನಾಡಿನಲ್ಲಿ ತೀವ್ರ ಕೋಲಾಹಲ ಸೃಷ್ಟಿಸುತ್ತಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಸೇತುಪತಿ (Vijay Sethupathi) ಅವರ ಕೆಲ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ‘ಬಿಗ್ ಬಾಸ್ ಸೀಸನ್ 10’ ಕಾರ್ಯಕ್ರಮದಲ್ಲಿ ನಾಯಕತ್ವದ ಕುರಿತು ಅವರು ನೀಡಿದ ಹೇಳಿಕೆಗಳು ತಮಿಳುನಾಡಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ, ಅದರಲ್ಲೂ ನಟ ಹಾಗೂ ಸಿಎಂ ದಳಪತಿ ವಿಜಯ್‌ಗೆ (Thalapathy Vijay) ಸಂಬಂಧಿಸಿದ್ದೆಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಿಜಯ್ ಸೇತುಪತಿ ವಿರುದ್ಧ ಟೀಕೆಗಳೂ ಕೇಳಿಬರುತ್ತಿವೆ.

ಕಾರ್ಯಕ್ರಮದಲ್ಲಿ ಸ್ಪರ್ಧಿ ಸಾಥಿಕಾ ಅವರೊಂದಿಗೆ ಮಾತನಾಡುವ ವೇಳೆ ವಿಜಯ್ ಸೇತುಪತಿ ನಾಯಕತ್ವದ ಅರ್ಥವನ್ನು ವಿವರಿಸಿದ್ದರು. ನಾಯಕತ್ವದ ಬಗ್ಗೆ ಮಾತನಾಡಿದ ಅವರು, ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಬದಲು ಸಮಸ್ಯೆ ಎದುರಾದಾಗ ಮತ್ತೊಬ್ಬರನ್ನು ದೂಷಿಸಿ ಹಿಂದೆ ಸರಿಯುವುದು ನಿಜವಾದ ನಾಯಕನ ಗುಣವಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು.

“ನಾಯಕತ್ವ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳದೆ ಭರವಸೆಗಳನ್ನು ನೀಡಿ, ನಂತರ ಸಮಸ್ಯೆ ಮತ್ತು ಜವಾಬ್ದಾರಿಗಳು ಎದುರಾದಾಗ ಎದುರಾಳಿಯನ್ನು ದೂಷಿಸಿ ಓಡಿಹೋಗುವುದು ನಾಯಕನ ಗುಣವಲ್ಲ. ಅದು ವಂಚನೆ,” ಎಂಬ ಅವರ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.

ಈ ಹೇಳಿಕೆಗಳ ಬೆನ್ನಲ್ಲೇ ಕೆಲವರು ಇದನ್ನು ವಿಜಯ್ ಅವರ ರಾಜಕೀಯ ನಡೆಗೆ ಹೋಲಿಕೆ ಮಾಡಲಾರಂಭಿಸಿದ್ದಾರೆ. ಆದರೆ ವಿಜಯ್ ಸೇತುಪತಿ ತಮ್ಮ ಮಾತಿನಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸಿರಲಿಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚರ್ಚೆ ಜೋರಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ವಿಜಯ್ ಟಿವಿ ಕೂಡ ಸ್ಪಷ್ಟನೆ ನೀಡಿದೆ.

ಇದರ ನಡುವೆ, ವಿಜಯ್ ಸೇತುಪತಿ ಈ ಹಿಂದೆ ನಟ ವಿಜಯ್ ಬಗ್ಗೆ ಮಾತನಾಡಿದ್ದ ಸಂದರ್ಭದ ವಿಡಿಯೋ ಮತ್ತು ಹೇಳಿಕೆಗಳೂ ಮತ್ತೆ ಮುನ್ನೆಲೆಗೆ ಬಂದಿವೆ.

‘ಪಥ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ವಿಜಯ್ ಬಗ್ಗೆ ಮಾತನಾಡಿದ್ದ ಸೇತುಪತಿ, ವಿಜಯ್ ತಮ್ಮ ಪುತ್ರ ಜೇಸನ್ ಸಂಜಯ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಕ್ಕೆ ಕರೆ ಮಾಡಿ ಧನ್ಯವಾದ ತಿಳಿಸಿದ್ದನ್ನು ನೆನಪಿಸಿಕೊಂಡಿದ್ದರು.

ಅಷ್ಟೇ ಅಲ್ಲ, ಸಂಜಯ್ ಅವರ ಸಿನಿಮಾ ಸೆಟ್‌ಗೆ ತಾವು ಭೇಟಿ ನೀಡಿದ್ದಾಗ ವಿಜಯ್ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿದ್ದನ್ನೂ ಅವರು ಹಂಚಿಕೊಂಡಿದ್ದರು. ವಿಜಯ್ ಒಳ್ಳೆಯ ನಟ ಮಾತ್ರವಲ್ಲ, ದಯಾಳು ವ್ಯಕ್ತಿ ಎಂದೂ ಸೇತುಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹೀಗಾಗಿ ಹಳೆಯ ಮೆಚ್ಚುಗೆಯ ಮಾತುಗಳ ನಡುವೆ ಹೊಸ ಹೇಳಿಕೆಗಳು ಸೇರಿಕೊಂಡಿರುವುದು ಅಭಿಮಾನಿಗಳ ಹಾಗೂ ನೆಟ್ಟಿಗರ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ. ಸದ್ಯ ಈ ಚರ್ಚೆ ಇಡೀ ತಮಿಳುನಾಡಿನಲ್ಲಿ ತೀವ್ರ ಕೋಲಾಹಲ ಸೃಷ್ಟಿಸುತ್ತಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾ ಶೂಟಿಂಗ್‌ನಿಂದಲೇ ಫೇಮಸ್ ಆಯ್ತು ಈ 5 ಟಾಪ್ ತಾಣಗಳು: ಒಂದೊಂದರ ಕಥೆಯೇ ರೋಚಕ!
ಕಾರಿನಡಿ ಕೈಯಿಟ್ಟಿದ್ದ ಪವನ್ ಕಲ್ಯಾಣ್: ಕೈ ಮುಟ್ಟಿ ಲೆಜೆಂಡರಿ ಸಿಂಗರ್ ಎಸ್‌ಪಿಬಿ ಹೀಗಾ ಹೇಳೋದು?