
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ,ವಿತರಕ ಕಮಲಾಕರ್ ಇಟ್ಗಾಂಪಲ್ಲಿ ( ೭೪ ) ಅವರು ಮೂತ್ರಪಿಂಡದ ಕ್ಯಾನ್ಸರ್ ಮತ್ತು ಕಿಡ್ನಿ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಮಾನಸ ಸರೋವರ ,ಧರಣಿಮಂಡಲ ಮಧ್ಯದೊಳಗೆ , ಕರುನಾಡ ಕುಳ್ಳ ದ್ವಾರಕೀಶ್ ಅಭಿನಯದ ಪೆದ್ದಗೆದ್ದ ಮತ್ತು ಸಾಹಸಸಿಂಹ ಡಾ ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ,ಸೂರಪ್ಪ , ಜೇಷ್ಠ , ಕದಂಬ ಎಂಬ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ ,ವಿತರಣೆ ಮಾಡಿದ್ದಾರೆ.
Breaking News: ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ, 'ಸಿಂಗ' ಇನ್ನು ನೆನಪು ಮಾತ್ರ!
ಕನ್ನಡ ಹೆಸರಾಂತ ಚಿತ್ರನಿರ್ಮಾಣ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಹಿಟ್ ಸಿನಿಮಾಗಳನ್ನು ಕನ್ನಡ ಸಿನಿರಸಿಕರಿಗೆ ನೀಡಿದ್ದಾರೆ. ನಾಗಣ್ಣ ಅವರ ನಿರ್ದೇಶನದ ಕರುನಾಡ ಚಕ್ರವರ್ತಿ ಡಾ .ಶಿವರಾಜಕುಮಾರ್ ನಟನೆಯ ಬಂಧುಬಳಗ ಕೌಟುಂಬಿಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಇವರದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.