
ಪಾಟ್ನಾ(ಜೂ.16): ಸುಶಾಂತ್ ಸಿಂಗ್ ನಿಧನ ಬಾಲಿವುಡ್ ಇಂಟಸ್ಟ್ರಿಗೆ ಬಹುದೊಡ್ಡ ಶಾಕ್ ನೀಡಿದ್ದು, ತೆರೆ ಮೇಲಿನ ಧೋನಿ ಕಳೆದುಕೊಂಡ ಬಾಲಿವುಡ್ ಮಂದಿ ಶೋಕದಲ್ಲಿದ್ದಾರೆ. ಬಾಲಿವುಡ್ ತನ್ನ ಯುವ ಹಾಗೂ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿದೆ. 34 ವರ್ಷದ ಸುಶಾಂತ್ ಭಾನುವಾರ ತನ್ನ ಬಾಂದ್ರಾದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಬಾಲಿವುಡ್ ಒತ್ತಡದಿಂದಾಗಿ ಸುಶಾಂತ್ ಆತ್ಮಹತ್ಯೆ? ಕಣ್ಣೀರಿಟ್ಟಿದ್ದ ನಟ!
ಆದರೀಗ ಸದ್ಯ ಇತ್ತೀಚೆಗೆ ಸಿಕ್ಕ ಮಾಹಿತಿ ಅನ್ವಯ ಸುಶಾಂತ್ ಕಸಿನ್ ಹೆಂಡತಿ, ಅತ್ತಿಗೆ ಸುಧಾ ದೇವಿ ಕೂಡಾ ಬಿಹಾರದ ಪುರ್ನಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಟ ಸುಶಾಂತ್ ಇನ್ನಿಲ್ಲವೆಂಬ ಆಘಾತ ತಡೆದುಕೊಳ್ಳಲಾರದೆ ಅವರು ಕೊನೆಯುಸಿರೆಳೆದಿದ್ದಾರೆನ್ನಲಾಗಿದೆ. ಇತ್ತ ಮುಂಬೈನಲ್ಲಿ ಸುಶಾಂತ್ ಅಂತಿಮ ಕ್ರಿಯೆ ನಡೆಯುತ್ತಿದ್ದರೆ, ಅತ್ತ ಅತ್ತಿಗೆ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಸುಶಾಂತ್ ನಿಧನದ ಸುದ್ದಿ ತಿಳಿದಾಗಿನಿಂದ ಸುಧಾ ದೇವಿ ಊಟ, ತಿಂಡಿಯನ್ನೂ ಬಿಟ್ಟಿದ್ದರೆಂದು ವರದಿಗಳು ತಿಳಿಸಿವೆ.
ಇನ್ನು ಸುಶಾಂತ್ ನಿಧನದ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಖಿನ್ನತೆಯಿಂದ ಬಳಲುತ್ತಿದ್ದ ನಟ ಸುಶಾಂತ್‌ಗೆ ಅಗತ್ಯವೆನಿಸುವ ಪರಿಸ್ಥಿತಿಯಲ್ಲಿ ಬಾಲಿವುಡ್ ಮಂದಿ ಅವರಿಗೆ ಸಹಕಾರ ನೀಡಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!
ನಿತೀಶ್ ತಿವಾರಿಯ ಚಿಚೋರೆ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಸುಶಾಂತ್, ಅದೆಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಸಂದೇಶ ಸಾರಿದ್ದರು. ಆದರೆ ಮಾನಸಿಕ ಒತ್ತಡ ತಡೆಯಲಾರದೆ ಸುಶಾಂತ್ ಖುದ್ದು ತಾವೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.