
ಇತ್ತೀಚೆಗೆ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋದಲ್ಲಿ ಬಾಯಿಗೆ ಬಂದಂತೆ ಅಶ್ಲೀಲವಾಗಿ ಮಾತನಾಡಿ ಭಾರತೀಯರಿಂದ ಯಕ್ಕಾಮಕ್ಕಾ ಜಾಡಿಸಿಕೊಂಡ ರಣವೀರ್ ಅಲಹಾಬಾದಿಯಾ ಎಂಬ ಯೂಟ್ಯೂಬರ್‌ನ ಕುಟುಂಬದ ಹಿನ್ನೆಲೆ ಕೂಡ ಭಯಾನಕವಾಗಿದೆ ಎಂಬ ಸಂಗತಿ ಇದೀಗ ಹೊರಬೀಳುತ್ತಿದೆ. ಇವನ ತಂದೆಯ ಮೇಲೂ ಒಂದು ಕರಾಳ ಪ್ರಕರಣದ ಪೊಲೀಸ್ ಕೇಸ್ ಇದೆ.
ರಣವೀರ್ ಅಲಹಾಬಾದಿಯಾನ ತಂದೆ ಡಾ. ಗೌತಮ್ ಅಲಹಾಬಾದಿಯಾ. ಸುಷ್ಮಾ ಪಾಂಡೆ ಎಂಬ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮತ್ತು ನಿಗೂಢ ಸಾವಿನ ಪ್ರಕರಣದಲ್ಲಿ ಇವನು ಸಹ ಆರೋಪಿಯಾಗಿದ್ದಾನೆ. 2010ರಲ್ಲಿ ತನ್ನ ಮುಂಬೈ ಚಿಕಿತ್ಸಾಲಯದಲ್ಲಿ ಈಕೆ ತನ್ನ ಅಂಡ (eggs) ದಾನ ಮಾಡಲು ಒತ್ತಾಯಿಸಿ ಅಪಹರಿಸಿ ಎರಡು ದಿನಗಳ ನಂತರ ಈಕೆ ಸಾವನ್ನಪ್ಪಿದ್ದಳು.
ಈ 17 ವರ್ಷದ ಹಿಂದೂ ಹುಡುಗಿ ಇಕ್ಬಾಲ್ ಹುಸೇನ್ ಎಂಬ ಮುಸ್ಲಿಂ ಯುವಕನ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯನ್ನು ನೂರ್ ಜಹಾನ್ ಮುನೀರ್ ಎಂಬ ಮಹಿಳೆ ಪೋಷಕಳಾಗಿ ಕ್ಲಿನಿಕ್‌ಗೆ ಕರೆತಂದಿದ್ದಳು. ನಂತರ ಆಕೆ (ನೂರ್ ಜಹಾನ್) ನಿಗೂಢವಾಗಿ ನಾಪತ್ತೆಯಾಗಿದ್ದಳು. ಅವರೊಂದಿಗೆ ಸಮವುಲ್ಲಾ ಮುಸ್ತಾಕಿನ್ ಎಂಬ ವ್ಯಕ್ತಿ ಕೂಡ ಹೋಗಿದ್ದ.
ನೂರ್ ಜಹಾನ್, ಹಿಂದೂ ಹುಡುಗಿ ಪ್ರೌಢವಯಸ್ಕಳು ಎಂದು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ನೀಡಿದ್ದಳು. ಹೀಗಾಗಿ ಅಂಡ ಹೊರತೆಗೆಯುವಾಗ ಅವಳು ಅಪ್ರಾಪ್ತೆ ಎಂದು ನನಗೆ ಗೊತ್ತಿರಲಿಲ್ಲ. ಹೀಗಾಗಿ ಆಕೆಯ ಸಾವಿಗೆ ನನ್ನನ್ನು ದೂಷಿಸಲಾಗದು ಎಂದು ಡಾ. ಅಲಹಾಬಾದಿಯಾ ಹೇಳಿದ್ದ.
ಆದರೆ ಇನ್ನೊಂದು ಅನುಮಾನ ಮೂಡುತ್ತದೆ. ಅಪ್ರಾಪ್ತೆಯೇ ಆದರೂ, ಅಂಡ ಹೊರತೆಗೆಯುವಿಕೆಯಂತಹ ಒಂದು ಸರಳ, ನಿರುಪದ್ರವ ಶಸ್ತ್ರಚಿಕಿತ್ಸೆ ಆಕೆಯ ಸಾವಿಗೆ ಹೇಗೆ ಕಾರಣವಾಯಿತು? ಇಲ್ಲಿ ಅನುಮಾನ ಬಲವಾಗುತ್ತದೆ. ಹಾಗಾದರೆ ಬರೀ ಅಂಡ ತೆಗೆದಿಲ್ಲ. ಇನ್ನೇನೋ ನಡೆದಿದೆ.
ಬಲಿಯಾದವಳು ಬಡ ಕೂಲಿ ಕೆಲಸಗಾರ್ತಿ ಆಗಿದ್ದಳು. ತನ್ನ ತಾಯಿ ಎರಡು ದಿನಗಳ ಹಿಂದೆ ತನ್ನ ಆಹಾರದಲ್ಲಿ ಮಾದಕವಸ್ತುವನ್ನು ನೀಡಿದ್ದಾಗಿ ಆಕೆ ಸಾಯುವ ಮೊದಲು ಹೇಳಿದಳು. ಆಮೇಲೆ ಏನಾಯಿತು ಎಂದು ಆಕೆಗೆ ನೆನಪಿಲ್ಲ. ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ, ಕ್ಲಿನಿಕ್‌ನಲ್ಲಿ ಹಲವು ಬಾರಿ ಆಕೆಯಿಂದ ಅಂಡಗಳನ್ನು ತೆಗೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ಹಿಂದೂ ಹುಡುಗಿಯರಿಗೆ ಮಾದಕ ದ್ರವ್ಯ ಸೇವನೆ ಮಾಡಿಸಿ ಬಲವಂತವಾಗಿ ಅಂಡ ಹೊರತೆಗೆಯುವ ಮೋಸದ ದಂಧೆ ನಡೆಯುತ್ತಿರುವುದು ಸಂಪೂರ್ಣವಾಗಿ ಸಾಧ್ಯ. ಅವರ ಅಪಕ್ವ ದೇಹಗಳು ಹೆಚ್ಚಿನ ಅಂಡ ಹೊರತೆಗೆಯುವಿಕೆ, ಹಾರ್ಮೋನ್ ಚುಚ್ಚುಮದ್ದು ಮತ್ತು ಅಂಡೋತ್ಪಾದನೆಗಾಗಿ ಸ್ಟಿರಾಯ್ಡ್ ಔಷಧಿಗಳ ಆಘಾತವನ್ನು ತಡೆದುಕೊಳ್ಳುವುದಿಲ್ಲ.
ಪೊಲೀಸರು ಈ ಕೇಸ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಜೆಜೆ ಆಸ್ಪತ್ರೆಯ ಸಮಿತಿ ಡಾಕ್ಟರ್‌ಗೆ ಕ್ಲೀನ್ ಚಿಟ್ ನೀಡಿತು. ನ್ಯಾಯಾಲಯ ತೃಪ್ತವಾಗಲಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದರು. 2013ರಲ್ಲಿ, ಮತ್ತೊಂದು ವೈದ್ಯರ ಸಮಿತಿ ತನಿಖೆ ನಡೆಸಿ, ಮತ್ತೆ ಅಲಹಾಬಾದಿಯಾನಿಗೆ ಕ್ಲೀನ್ ಚಿಟ್ ಕೊಟ್ಟಿತು. ಇಲ್ಲೂ ಅಲಹಾಬಾದಿಯಾನ ಹಣ ಕೆಲಸ ಮಾಡಿದಂತಿತ್ತು.
ನ್ಯಾಯಾಲಯ ಅನಿವಾರ್ಯವಾಗಿ ಆರೋಪಿ ವೈದ್ಯರನ್ನು ಬಿಡುಗಡೆ ಮಾಡಿತು. ಆದರೆ ನ್ಯಾಯಾಧೀಶರು ಮುಂಬೈ ಪೊಲೀಸರ ಅಸಮರ್ಥತೆ ಮತ್ತು ದಾರಿ ತಪ್ಪಿದ ತನಿಖೆಯನ್ನು ಕಟುವಾಗಿ ಟೀಕಿಸಿದರು. ಅದೇ ಡಾ. ಗೌತಮ್ ಅಲಹಾಬಾದಿಯಾನ ಮಗ ಈ ರಣವೀರ್.
ಅದೇ ಡಾ.ಗೌತಮ್ ಭಾರತದಲ್ಲಿ ಸಲಿಂಗ ದಂಪತಿಗಳ ಗರ್ಭಧಾರಣೆಯನ್ನೂ ಬಾಡಿಗೆ ತಾಯ್ತನದ ಮೂಲಕ ಪ್ರಾರಂಭಿಸಿದ್ದಾನೆ. ಜೊತೆಗೆ ಟ್ರಾನ್ಸ್-ಎಥ್ನಿಕ್ ಬಾಡಿಗೆ ಗರ್ಭಧಾರಣೆ ಕೂಡ. ಅದರಲ್ಲಿ ವಿದೇಶಿ ದಂಪತಿಗಳು ತಮ್ಮ ಮಕ್ಕಳನ್ನು ಬಡ ಭಾರತೀಯ ಮಹಿಳೆಯರಿಂದ ಪಡೆಯುತ್ತಾರೆ. ಡಾ. ಗೌತಮ್ ಅಲ್ಲಾಬಾಡಿಯಾ ಅವರ ವೆಬ್‌ಸೈಟ್ ಪ್ರಕಾರ, ಅವರು ದುಬೈ ಮತ್ತು ಶಾರ್ಜಾದಲ್ಲಿ ಪ್ರಮುಖ ಐವಿಎಫ್ ವೈದ್ಯ. ರಿಪ್ರೊಡಕ್ಟಿವ್ ಎಂಡೋಕ್ರೈನಾಲಜಿ ಮತ್ತು ಐವಿಎಫ್ ಕ್ಷೇತ್ರದಲ್ಲಿ ತಜ್ಞ. ಮುಂಬೈನ ಬಾಂದ್ರಾದಲ್ಲಿ ಅವರ ಕ್ಲಿನಿಕ್ ಕೂಡ ಇದೆ.
ಈ ನಮ್ಮ ʼಗೌರವಾನ್ವಿತʼ ವೈದ್ಯ ಅಂತಾರಾರಾಷ್ಟ್ರೀಯ IVF ರಾಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರಾ ಎಂಬ ಬಲವಾದ ಅನುಮಾನವಿದೆ. ಬಡ ಭಾರತೀಯ ಮಹಿಳೆಯರ ಅನೈತಿಕ ಮತ್ತು ಕಾನೂನುಬಾಹಿರ ಶೋಷಣೆ, ಬಲವಂತವಾಗಿ ಅವರ ಅಂಡಗಳ ಬಳಕೆ, ಮಧ್ಯಪ್ರಾಚ್ಯ ಮತ್ತು ಚೀನಾದ ಶ್ರೀಮಂತ ಗ್ರಾಹಕರಿಗೆ ಅದನ್ನು ಸರಬರಾಜು ಮಾಡುವುದು... ಇತ್ಯಾದಿ.
ರಣವೀರ್‌ಗೆ ಮತ್ತೊಂದು ಶಾಕ್, ಯೂಟ್ಯೂಬರ್ ಅನ್‌ಫಾಲೋ ಮಾಡಿದ ಯುವರಾಜ್ -ಕೊಹ್ಲಿ
ಅವರ ಪತ್ನಿ ಡಾ. ಸ್ವಾತಿ ಅಲ್ಲಾಬಾಡಿಯಾ ಮತ್ತು ಮಗಳು ಡಾ. ಆಕಾಂಕ್ಷಾ ಕೂಡ ಐವಿಎಫ್ ತಜ್ಞರು. ಚಲನಚಿತ್ರ ನಿರ್ಮಾಪಕಿ ಜೆನ್ನಿಫರ್ ಡಹ್ಲ್, ಎಗ್‌ಸ್ಪ್ಲೋಯೇಶನ್ ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಇದರಲ್ಲಿ ಈ "IVF ತಜ್ಞರು" ಬಡ ಮಹಿಳೆಯರನ್ನು ಹೇಗೆ ಬೇಟೆಯಾಡುತ್ತಾರೆ, ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಣವೀರ್‌ನ ಈ ಕುಟುಂಬದಲ್ಲಿ ಕರಾಳತೆ, ಅಪರಾಧ ಎಂಬುದು ತುಂಬಾ ಆಳದಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಈಗ ಮಗ ಕೂಡ ತನ್ನ ತಂದೆಗೆ ತಕ್ಕ ಮಗ ಎಂದು ತೋರಿಸಿದ್ದಾನೆ.
ರಣವೀರ್ ವಿವಾದದ ಬೆನ್ನಲ್ಲೇ ಅನ್‌ಫಾಲೋ ಮಾಡಿದ ಸೆಲೆಬ್ರಿಟಿಗಳು, ಸಮಯ್ ರೈನಾ ಅಳುವ ಫೇಕ್ ವಿಡಿಯೋ ವೈರಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.