ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್

By Shriram Bhat  |  First Published Jun 16, 2024, 2:51 PM IST

ಅದು ಕೆಲಸ ಆಗಿರಬಹುದು, ಅಥವಾ ಸಾಧನೆ ಆಗಿರಬಹುದು. ಒಟ್ಟಿನಲ್ಲಿ ಏನೂ ಇಲ್ಲದಿರುವಾಗ ನೀವು ಪಡೆಯಲು ಬಯಸುತ್ತೀರಿ, ಹಾಗೂ ಆಗ ಬೇರೆಯವರು ಕೊಡಲಿ ಎಂದು ಇಷ್ಟಪಡುತ್ತೀರಿ. ಆದರೆ, ಯಾವಾಗ ನಿಮ್ಮ ಬಳಿ ಎಲ್ಲವೂ ಇದೆಯೋ ಆಗ..


ಸೌತ್ ಇಂಡಿಯಾದ, ಅದರಲ್ಲೂ ಮುಖ್ಯವಾಗಿ ತಮಿಳು ಸ್ಟಾರ್ ನಟ ವಿಜಯ್ (Thalapathy Vijay)ಅವರು ಮಾತುಕತೆ ವೇಳೆ ಒಮ್ಮೆ ಹೀಗೆ ಹೇಳಿದ್ದಾರೆ. 'ಒಂದು, ಏನೂ ಇಲ್ಲದಿರುವಾಗ ನೀವು ಹೇಗೆ ಇರುತ್ತೀರಿ..?. ಇನ್ನೊಂದು, ಎಲ್ಲವೂ ಇರುವಾಗ ನೀವು ಹೇಗೆ ಇರುತ್ತೀರಿ..?' ಈ ಎರಡೇ ಎರಡು ಸಂಗತಿಗಳು ನೀವೇನು ಎಂಬುದನ್ನು ಹೇಳುತ್ತವೆ. ದೊಡ್ಡ ಸಭೆಯೊಂದರ ವೇದಿಕೆಯಲ್ಲಿ ಮಾತನಾಡುತ್ತಿದ್ದ ನಟ ವಿಜಯ್ 'ನಿಮ್ಮ ಬಳಿ ಏನೂ ಇಲ್ಲದಿರುವಾಗ ನೀವು ಅದನ್ನು ಪಡೆಯಬೇಕೆಂದು ಸಹಜವಾಗಿ ಹಂಬಲಿಸುತ್ತೀರಿ. ಅದಕ್ಕೆ ಪೂರಕವಾಗಿ ನೀವು ಎಲ್ಲವನ್ನೂ ಮಾಡುತ್ತಲೇ ಇರುತ್ತೀರಿ. 

ಅದು ಕೆಲಸ ಆಗಿರಬಹುದು, ಅಥವಾ ಸಾಧನೆ ಆಗಿರಬಹುದು. ಒಟ್ಟಿನಲ್ಲಿ ಏನೂ ಇಲ್ಲದಿರುವಾಗ ನೀವು ಪಡೆಯಲು ಬಯಸುತ್ತೀರಿ, ಹಾಗೂ ಆಗ ಬೇರೆಯವರು ಕೊಡಲಿ ಎಂದು ಇಷ್ಟಪಡುತ್ತೀರಿ. ಆದರೆ, ಯಾವಾಗ ನಿಮ್ಮ ಬಳಿ ಎಲ್ಲವೂ ಇದೆಯೋ ಆಗ ನೀವು ಕೊಡಲು ಬಯಸಬೇಕು. ಏಕೆಂದರೆ, ಆಗ ನಿಮ್ಮ ಎದುರು ಪಡೆದುಕೊಳ್ಳುವವರ ಸಾಲೇ ಇರುತ್ತದೆ. ಆದರೆ ನೀವು ಆಗ ಕೊಡಲು ಇಷ್ಟಪಡುವುದಿಲ್ಲ. ಬದಲಿಗೆ, ಇನ್ನೂ ಬೇಕು ಮತ್ತೂ ಬೇಕು ಎಂಬ ಹಂಬಲಕ್ಕೆ, ಬಯಕೆಗೆ ಬೀಳುತ್ತೀರಿ. ಆಗಲೇ ಸಮಸ್ಯೆ ಶುರುವಾಗುವುದು. 

Tap to resize

Latest Videos

ನಿಮ್ಮಲ್ಲಿ ಬೇಕಾದಷ್ಟು ಇರುವಾಗ ನೀವು ಕೊಡಲು ಶುರು ಮಾಡಬೇಕು. ಆಗ ನಿಮ್ಮ ಬಳಿ ಇರುವ ಹಣ, ಅಂತಸ್ತು, ಖ್ಯಾತಿಯ ಸದುಪಯೋಗ ಆಗುತ್ತದೆ. ಆಗ ಜನಸಾಮಾನ್ಯರೂ ನಿಮ್ಮ ಬಳಿ ಬರುತ್ತಾರೆ, ಇರುತ್ತಾರೆ. ಏಕೆಂದರೆ, ನಿಮ್ಮ ಬಳಿ ಏನೂ ಇಲ್ಲದಿರುವಾಗ ನೀವೂ ಕೂಡ ಅದನ್ನೆಲ್ಲ ಪಡೆಯಲು ಜನರ ಬಳಿ ಹೋಗಿದ್ದೀರಿ. ಯಾರದೋ ಬಳಿ ಇರುವುದನ್ನು ನೀವು ಪಡೆದುಕೊಂಡಿದ್ದೀರಿ. ಅದು ಇನ್ಮುಂದೆ ನಿಮ್ಮಿಂದ ಬೇರೆಯವರಿಗೆ ಹೋಗಲೇಬೇಕು. ಆಗಲೇ ಅದಕ್ಕೊಂದು ಬೆಲೆ. 

ಪ್ರಪಂಚ ನಡೆಯುವುದೇ ಹೀಗೆ. ಆದರೆ, ಕೆಲವರಿಗೆ ಅದು ಅರ್ಥವಾಗುವುದಿಲ್ಲ. ತಮ್ಮ ಬಳಿ ಏನೂ ಇಲ್ಲದಿರುವಾಗ ಅವರಲ್ಲಿ ನಯ, ವಿನಯ, ವೃತ್ತಿಪರತೆ, ದಯೆ,ಕರುಣೆ ಎಲ್ಲವೂ ಇರುತ್ತದೆ, ಆದರೆ ಹಣ, ಅಂತಸ್ತು, ಖ್ಯಾತಿ ಇವುಗಳನ್ನು ಬಿಟ್ಟು. ಹಣ ಬಂದರೆ ಸಾಕು, ಅದರ ಹಿಂದೆ ಹಲವರಿಗೆ ದುರಂಹಂಕಾರ, ಅವಿಧೇಯತೆ ಹಾಗು ಸಿಟ್ಟು, ದ್ವೇಷ ಎಲ್ಲವೂ ಬಂದು ಬಿಡುತ್ತದೆ. ಹಾಗೆ ಆದಾಗಲೇ ವ್ಯಕ್ತಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಹಾಗೂ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಬರುವುದು' ಎಂದಿದ್ದಾರೆ ತಮಿಳು ನಟ ವಿಜಯ್.

click me!