Latest Videos

ಬಡಮಕ್ಕಳನ್ನು ಭೇಟಿಯಾದ ನಟ ಕಿಚ್ಚ ಸುದೀಪ್; ಮೈಸೂರಿನಲ್ಲಿ ಹೀಗೊಂದು ಮನಮುಟ್ಟಿದ ಸಂಭ್ರಮ!

By Shriram BhatFirst Published Jun 16, 2024, 1:07 PM IST
Highlights

ಮುಂಬರುವ ಸುದೀಪ್ ಅವರ ಸಿನಿಮಾಗೆ ಹೇಮಂತ್ ಎಂ ರಾವ್ ನಿರ್ದೇಶನ ಮಾಡುವ ಸಾಧ್ಯತೆ ಬಗ್ಗೆ ಸಂದೇಶ್ ಸುಳಿವು ನೀಡಿದ್ದಾರೆ.   ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದಿರುವ..

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ಮೈಸೂರಿನಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲಿರುವ ಮಕ್ಕಳು ಸಾಮಾನ್ಯಜನರ ಮಕ್ಕಳಲ್ಲ, ಅವರೆಲ್ಲರೂ ಬಡಮಕ್ಕಳು. ಅಂದರೆ, ತುತ್ತು ಅನ್ನಕ್ಕೂ ಪರದಾಡಿ ಅದೆಷ್ಟೋ ಬಾರಿ ಹಸಿವು ಪಟ್ಟುಕೊಂಡೇ ದಿನ ಕಳೆಯುವವರು. ಅರ್ಜುನವರ ಜ್ಯುವೆಲ್ಲರ್ಸ್ ಅವರ ವತಿಯಿಂದ ಬಡಮಕ್ಕಳು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಅವರೊಟ್ಟಿಗೆ ತಿಂಡಿ ತಿನ್ನುವ ಭಾಗ್ಯವನ್ನು ಕರುಣಿಸಿದೆ. ಮೈಸೂರಿನಲ್ಲಿ ಇಂದು ಆ ಮಕ್ಕಳಿಗೆ ಈ ಭಾಗ್ಯ ದೊರಕಿದೆ.

ಅರ್ಜುನವರ ಜ್ಯುವೆಲ್ಲರ್ಸ್ ಕಡೆಯಿಂದ ಒಂದು ದಿನದ ಈ ಟ್ರಿಪ್‌ನಲ್ಲಿ ನಟ ಸುದೀಪ್ ಅವರು ಇದೀಗ ಮೈಸೂರಿನಲ್ಲಿ ನಿರ್ಗತಿಕ ಮಕ್ಕಳ ಜತೆ ಕಾಲ ಕಳೆಯುತ್ತಿದ್ದಾರೆ. ಸಾಧ್ಯವಾದಷ್ಟೂ ಮಕ್ಕಳಿಗೆ ಸ್ವತಃ ತಾವೇ ತಿಂಡಿಯನ್ನು ತಮ್ಮ ಕೈಯಾರೆ ಕೊಡುತ್ತಿರುವ ನಟ ಕಿಚ್ಚ ಸುದೀಪ್ ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಮಕ್ಕಳು ಸ್ಟಾರ್ ನಟ ಸುದೀಪ್ ಅವರನ್ನು ಹತ್ತಿರದಿಂದ ನೋಡಿ, ಮುಟ್ಟಿ ಮಾತನಾಡಿಸಿ ಬಹಳಷ್ಟು ಖುಷಿ ಪಟ್ಟಿದ್ದಾರೆ. ಜತೆಗೆ, ಅವರೇ ತಮ್ಮ ಕೈಯಾರೆ ಕೊಟ್ಟ ತಿಂಡಿ ತಿಂದು ಹರ್ಷ ಗೊಂಡಿದ್ದಾರೆ. 

ಗಾಯತ್ರಿಗೂ ಮೊದಲು ಅನಂತ್‌ ನಾಗ್ ಲವ್ ಮಾಡಿದ್ದು ಪ್ರಿಯಾ ತೆಂಡೂಲ್ಕರ್; ಏನ್ ಪ್ರಾಬ್ಲಂ ಆಯ್ತು..?

ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುಪಾಲು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಸಿಕ್ಕ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್‌ ಬಳಿಕ ಕಿಚ್ಚ ಸುದೀಪ್‌ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಈ ನಡುವೆ ಸುದೀಪ್‌ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್‌ ಸಹ ಹೊರಬಿದ್ದಿದ್ದು, ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ನಿರ್ಮಾಪಕ ಎನ್ ಸಂದೇಶ್ ಹಾಗೂ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಮ್ಯಾಕ್ಸ್ ಹೀರೋ ಸುದೀಪ್ ಮನೆಗೆ ತೆರಳಿ ಕಿಚ್ಚನನ್ನು ಭೇಟಿಯಾಗಿದ್ದಾರೆ. 

ಕೊಲೆ ಕೇಸ್‌ನಿಂದ ಮುಕ್ತಿ ಸಿಗಲೆಂದು ಕೈಗಾದಲ್ಲಿ ದರ್ಶನ್ ಬಾವ ಮಂಜುನಾಥ್ ಮಾಡಿದ್ದೇನು?

ನಟ ಕಿಚ್ಚ ಸುದೀಪ್ ಜೊತೆ ಇರುವ ಫೋಟೋ ಶೇರ್ ಮಾಡಿರುವ ಸಂದೇಶ್, ಸಂದೇಶ್ ಪ್ರೊಡಕ್ಷನ್ಸ್‌ನಿಂದ ಫೆಂಟಾಸ್ಟಿಕ್ ಸುದ್ದಿ ಬರಲಿದೆ, ಜಸ್ಟ್ ವೇಟ್ ಆ್ಯಂಡ್ ವಾಚ್, ಫೆಂಟಾಸ್ಟಿಕ್ ನ್ಯೂಸ್ ಬರುತ್ತೇ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಂದೇಶ್ ಅವರು ನಟ ಸುದೀಪ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು ಎಂಬ ಬಗ್ಗೆ ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಸಂದೇಶ್ ಪ್ರೊಡಕ್ಷನ್ ಸಿನಿಮಾದಲ್ಲಿ ಕಿಚ್ಚ ಅಭಿನಯಿಸುವ ಬಗ್ಗೆ ತಿಳಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾದಲ್ಲಿ ಹಲವು ಬಹುಭಾಷಾ ನಟರು ಕೂಡ ನಟಿಸಲಿದ್ದಾರೆ. 

ಕೊಲೆ ಕೇಸ್‌ ಆರೋಪಿ ದರ್ಶನ್‌ ಬಗ್ಗೆ ಬಾವ ಮಂಜುನಾಥ್ ಹೇಳಿದ್ದೇನು? ಜನ ಏನಂತ ರಿಯಾಕ್ಟ್ ಮಾಡ್ಬಹುದು?

ಮುಂಬರುವ ಸುದೀಪ್ ಅವರ ಸಿನಿಮಾಗೆ ಹೇಮಂತ್ ಎಂ ರಾವ್ ನಿರ್ದೇಶನ ಮಾಡುವ ಸಾಧ್ಯತೆ ಬಗ್ಗೆ ಸಂದೇಶ್ ಸುಳಿವು ನೀಡಿದ್ದಾರೆ.   ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ಯುವ ನಿರ್ದೇಶಕರಲ್ಲಿ ಹೇಮಂತ್‌ ಎಂ ರಾವ್‌ ಸಹ ಒಬ್ಬರು. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸೈಡ್‌ 1 ಮತ್ತು ಸೈಡ್‌ 2 ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ನೆಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಈ ನಿರ್ದೇಶಕ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಅವರ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.  

ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಇಲ್ಲಿಗೆ ಬಂದು ನಿಂತಿದೆ; ಸಖತ್ ಸದ್ದು ಮಾಡ್ತಿರೋ ಆಲ್ ಓಕೆ!

ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸದ್ಯ ನಟ ಶಿವರಾಜ್‌ಕುಮಾರ್‌ ಅವರಿಗೆ ಹೇಮಂತ್‌ ಎಂ ರಾವ್‌ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಈಗಾಗಲೇ ತೆರೆಮರೆಯಲ್ಲಿ ಅದರ ತಯಾರಿಯೂ ನಡೆದಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದ ಸ್ಕ್ರಿಪ್ಟ್‌ ಕೆಲಸದಲ್ಲಿ ಹೇಮಂತ್‌ ಬಿಜಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕವೇ ಸುದೀಪ್‌ ಜತೆಗಿನ ಚಿತ್ರದತ್ತ ಅವರು ಮುಖಮಾಡಲಿದ್ದಾರೆ. ಏತನ್ಮಧ್ಯೆ, ಸುದೀಪ್ ಶೀಘ್ರದಲ್ಲೇ ಚೇರನ್ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ, ನಂತರ ಅನೂಪ್ ಭಂಡಾರಿ ಜೊತೆಗಿನ ಬಿಲ್ಲಾ ರಂಗ ಬಾಷಾ ಹಾಗೂ ಕೆಆರ್‌ಜಿಯೊಂದಿಗೆ ಮತ್ತೊಂದು ಪ್ರಾಜೆಕ್ಟ್‌ಗೂ ಸುದೀಪ್ ಸಹಿ ಹಾಕಿದ್ದಾರೆ.

ದುಬಾರಿ ಕಾರು ಪವಿತ್ರಾ ಗೌಡಗೂ ಬಂದಿದ್ದು ಹೇಗೆ; ದರ್ಶನ್ ಪತ್ನಿ 'ರೇಂಜ್‌' ತಲುಪಿದ್ರಾ ಪವಿತ್ರಾ ಗೌಡ!

 

Arjunawara Jewellers organised a one day trip to Mysore for underprivileged kids and on their intent to meet anna , breakfast meet was organised with boss!!

Man of million hearts!♥️ pic.twitter.com/b4Wn14Wtlc

— Kiccha Sudeep Trends™ (@TheSudeepTrends)

 

click me!