ಪಂದ್ಯದ ನಡುವೆ ಕುಸಿದ ಕರೀಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಅಂತಿಮ ಕ್ಷಣದ ವಿಡಿಯೋ

Published : Jun 21, 2025, 03:52 PM IST
Sunjay Kapur

ಸಾರಾಂಶ

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಪೋಲೋ ಪಂದ್ಯದ ನಡುವೆ ಇತ್ತೀಚೆಗೆ ಮೃತಪಟ್ಟಿದ್ದರು. ಪಂದ್ಯ ಆಡುತ್ತಿದ್ದಂತೆ ಕುಸಿದು ಬಿದ್ದ ಸಂಜಯ್ ಕಪೂರ್ ಅಂತಿಮ ಕ್ಷಣದ ವಿಡಿಯೋ ಬಹಿರಂಗವಾಗಿದೆ.

ಲಂಡನ್ (ಜೂ.21) ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ ಹಲವರನ್ನು ಬೆಚ್ಚಿ ಬೀಳಿಸಿದೆ. ಅತ್ಯಂತ ಫಿಟ್ ಆಗಿದ್ದ ಸಂಜಯ್ ಕಪೂರ್ ಪೋಲೋ ಪಂದ್ಯದ ನಡುವೆ ಮೃತಪಟ್ಟಿದ್ದರು. ಕುದುರೆ ಸವಾರಿ ಮೂಲಕ ಆಡುವ ಪೋಲೋ ಪಂದ್ಯದಲ್ಲಿ ಸಂಜಯ್ ಕಪೂರ್ ಜೇಣುನೊಣ ನುಂಗಿದ್ದರು. ಇದರ ಬೆನ್ನಲ್ಲೇ ಅಸ್ವಸ್ಥಗೊಂಡ ಸಂಜಯ್ ಕಪೂರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಲಂಡನ್‌ನಲ್ಲಿ ಈ ಘಟನೆ ನಡೆದಿತ್ತು.ಶ್ರೀಮಂತ ಉದ್ಯಮಿ, 10 ಸಾವಿರ ಕೋಟಿ ರೂಪಾಯಿ ಒಡೆಯ ಸಂಜಯ್ ಕಪೂರ್ ಕೊನೆಯ ಕ್ಷಣಗಳ ವಿಡಿಯೋ ಬಹಿರಂಗವಾಗಿದೆ.

ಕುದುರೆಯಿಂದ ಕುಸಿದು ಬಿದ್ದ ಸಂಜಯ್ ಕಪೂರ್‌ಗೆ ಸಿಪಿಆರ್

ಸಂಜಯ್ ಕಪೂರ್ ಪೊಲೋ ಪಂದ್ಯದ ನಡುವೆ ಜೇಣುನೊಣ ನುಂಗಿದ್ದರು. ಕುದರೆ ಮೂಲಕ ವೇಗವಾಗಿ ಸಾಗುವಾಗ ಅಚಾನಕ್ಕಾಗಿ ಜೇಣುನೊಣ ನುಂಗಿದ್ದರು. ಇದು ಉಸಿರಾಟವನ್ನೇ ಬ್ಲಾಕ್ ಮಾಡಿತ್ತು. ಇದರಿಂದ ಹೃದಯಾಘಾತವಾಗಿತ್ತು. ಜೇಣುನೊಣ ನುಂಗಿದ ತಕ್ಷಣವೇ ಸಂಜಯ್ ಕಪೂರ್ ಅಸ್ವಸ್ಥಗೊಂಡು ಕುದುರೆಯಿಂದ ಕುಸಿದು ಬಿದ್ದಿದ್ದಾರೆ. ಸಂಜಯ್ ಕಪೂರ್ ಮೈದಾನಕ್ಕೆ ಕುಸಿದು ಬಿದ್ದ ತಕ್ಷಣ ತಕ್ಷಣವೇ ವೈದ್ಯರ ತಂಡ ಧಾವಿಸಿದೆ. ವೈದ್ಯರು ಸಂಜಯ್ ಕಪೂರ್‌ಗೆ ಸಿಪಿಆರ್ ನೀಡಿದ್ದಾರೆ. ಆದರೆ ಮೈದಾನದಲ್ಲಿ ನಿರ್ಜೀವವಾಗಿ ಬಿದ್ದಿದ್ದರು. ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ.

 

 

ಗಂಭೀರತೆ ಅರಿವಾಗುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನೆ

ಸಿಪಿಆರ್ ನೀಡಿದರೂ ಸಂಜಯ್ ಕಪೂರ್ ದೇಹ ಸ್ಪಂದಿಸಲಿಲ್ಲ. ವೈದ್ಯರು ತಕ್ಷಣವೇ ಪರಿಸ್ಥಿತಿ ಗಂಭೀರತೆಯನ್ನು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಮೈದಾನಕ್ಕೆ ಹೆಲಿಕಾಪ್ಟರ್ ಆಗಮಿಸಿತ್ತು. ಬಳಿಕ ತಕ್ಷಣವೇ ಸಂಜಯ್ ಕಪೂರ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ವೈದ್ಯರು ಸಂಜಯ್ ಕಪೂರ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ವಿಡಿಯೋ ಇದೀಗ ಬಹಿರಂಗವಾಗಿದೆ.

ಲಂಡನ್‌ನ ಗಾರ್ಡ್ಸ್ ಪೋಲೋ ಕ್ಲಬ್‌ನಲ್ಲಿ ಮಹತ್ವದ ಪಂದ್ಯ ಆಯೋಜಿಸಲಾಗಿತ್ತು. ಔರಸ್ ತಂಡದ ಪ್ರಮುಖ ಸದಸ್ಯನಾಗಿದ್ದ ಸಂಜಯ್ ಕಪೂರ್ ಸುಜನ್ ತಂಡದ ವಿರುದ್ಧ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಾಕಿ ರೀತಿಯಲ್ಲೇ ಆಡುವ ಪೋಲೋ ಗೇಮ್‌ನಲ್ಲಿ ಕುದುರೆ ಸವಾರಿ,ನಿಯಂತ್ರಣ ಕೌಶಲ್ಯ ಕೂಡ ಅಷ್ಟೇ ಮುಖ್ಯ. ಕುದರೇ ಮೂಲಕ ವೇಗವಾಗಿ ಚೆಂಡನ್ನು ಗುರಿಯತ್ತ ಸಾಗಿಸುವ ವೇಳೆ ಜೇನು ನೋಣವೊಂದು ಸಂಜಯ್ ಕಪೂರ್ ಬಾಯಿಯೊಳಗಿಂದ ಸಾಗಿದೆ. ಆದರೆ ಜೇಣು ನೋಣ ಉಸಿರಾಟದ ಸಮಸ್ಯೆ ಮಾಡಿತ್ತು. ಉಸಿರು ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಇದರ ಬೆನ್ನಲ್ಲೇ ಸಂಜಯ್ ಕಪೂರ್ ಹೃದಯಾಘಾತದಿಂದ ಮೃತಪಟ್ಟಿದ್ದರು.

ಸಂಜಯ್ ಕಪೂರ್ ಆತ್ಮೀಯ , ಉದ್ಯಮಿ ಅಜಿತ್ ನಂದಾಲ್ ಅಂತಿಮ ಕ್ಷಣದ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೈದ್ಯರ ವರದಿ ಪ್ರಕಾರ ಸಂಜಯ್ ಕಪೂರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೇಣುನೊಣ ನುಂಗಿದ ಪರಿಣಾಮ ಸಂಜಯ್ ಕಪೂರ್ ತೀವ್ರ ಉಸಿರಾಟ ಸಮಸ್ಯೆ ಎದುರಿಸಿದ್ದಾರೆ. ಉಸಿರಾಟ ನಾಳಗಳು ಜೇಣುನೊಣ ಕಾರಣದಿಂದ ಬ್ಲಾಕ್ ಆಗಿದೆ. ಇದರ ಬೆನ್ನಲ್ಲೇ ಹೃದಯಾತವಾಗಿದೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಅಂತ್ಯಸಂಸ್ಕಾರ

ಲಂಡನ್‌ನಲ್ಲಿ ಮೃತಪಟ್ಟ ಸಂಜಯ್ ಕಪೂರ್ ಮೃತದೇಹವನ್ನು ದೆಹಲಿಗೆ ತರಲಾಗಿತ್ತು. ಜೂನ್ 19 ರಂದು ದೆಹಲಿಯಲ್ಲಿ ಸಂಜಯ್ ಕಪೂರ್ ಅಂತ್ಯಸಂಸ್ಕಾರ ನಡೆದಿತ್ತು. ಮಾಜಿ ಪತ್ನಿ ಕರೀಷ್ಮಾ ಕಪೂರ್, ಮಕ್ಕಳಾದ ಸಮೈರಾ ಹಾಗೂ ಕಿಯಾನ, ಕರಿಷ್ಮಾ ಸಹೋದರಿ ಕರೀನಾ ಕಪೂರ್, ಸೈಫ್ ಆಲಿ ಖಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಕೇವಲ 56 ವರ್ಷದ ಸಂಜಯ್ ಕಪೂರ್ ಆರೋಗ್ಯವಾಗಿದ್ದು ಮಾತ್ರವಲ್ಲ, ಫಿಟ್ ಆಗಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!