ನಮಿತಾಗೆ ಮಹಾ ಮೋಸ, ನಟ ಧನುಷ್ ಜೊತೆ ರೊಮಾನ್ಸ್ ಇರ್ಲಿಲ್ಲ; ರೊಚ್ಚಿಗೆದ್ದ ನಟಿ ಮಾಡಿದ್ದೇನು?

By Shriram Bhat  |  First Published Jun 10, 2024, 7:18 PM IST

ನಟಿ ನಮಿತಾ ಅವರು ನೀಲಕಂಠ, ಇಂದ್ರ, ಬೆಂಕಿ ಬಿರುಗಾಳಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಹೆಚ್ಚಾಗಿ ಗ್ಲಾಮರಸ್‌ ರೋಲ್‌ಗಳಲ್ಲೇ ತೋರಿಸಲಾಗಿದೆ.


ಒಂದು ಕಾಲದಲ್ಲಿ ಹಲವರ ಹೃದಯ ಬಡಿತ ಹೆಚ್ಚಿಸಿದ್ದ ಬಹುಭಾಷಾ ನಟಿ ನಮಿತಾ, ಈಗ ಸಿನಿಮಾ ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, 90ರ ದಶಕದಲ್ಲಿ ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದ ನಟಿ ನಮಿತಾ (Namitha), ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ತಮ್ಮ ನಟನೆ ಹಾಗೂ ಗ್ಲಾಮರ್‌ನಿಂದ ಭಾರೀ ಗಮನ ಸೆಳೆದಿದ್ದರು. ನಟಿ ನಮಿತಾ ಜೀವನದಲ್ಲಿ ನಡೆದ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆಯುತ್ತಿದೆ. 

ನಟಿ ನಮಿತಾ ಅವರು ತಮಗೆ ಒಮ್ಮೆ ಆದ ಮಹಾ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ಒಮ್ಮೆ ತಮಿಳಿನ ಒಂದು ಚಿತ್ರದಲ್ಲಿ ನಾನು ನಟ ಧನುಷ್‌ ಅವರಿಗೆ ನಾಯಕಿಯೆಂದು ನಿರ್ಮಾಪಕರು ಹೇಳಿದ್ದರು. ಆದರೆ, ನಾನು ಶೂಟಿಂಗ್‌ಗೆ ಹೋದಾಗ ಅಲ್ಲಿ ನನ್ನ ಸಹನಟರಾಗಿದ್ದು ಧನುಷ್ ಅವರ ಸಂಬಂಧಿ ಹುಡುಗ. ನಾನು ನಟಿಯಾಗಿ ಯಾವ ನಾಯಕ ನಟರೆದುರು ಕೂಡ ನಟಿಸುತ್ತೇನೆ. ಆದರೆ, ಹೆಸರಾಂತ ನಟರೆದುರು ನಟಿಸುವಾಗ ನಮಗೆ ಸಿನಿಮಾ ಬಜೆಟ್, ಮೇಕಿಂಗ್, ಬಿಡುಗಡೆ ಹಾಗು ಬಿಸಿನೆಸ್ ಬಗ್ಗೆ ಸ್ಪಷ್ಟತೆ ಇರುತ್ತದೆ. 

Tap to resize

Latest Videos

ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ, ವಿಚ್ಛೇದನ ಅರ್ಜಿ ನನಗೆ ಇನ್ನೂ ತಲುಪಿಲ್ಲ: ಶ್ರೀದೇವಿ ಭೈರಪ್ಪ!

ಆದರೆ, ಯಾವುದೋ ಹೊಸ ನಟರ ಜತೆ ನಟಿಸುವಾಗ ನಮಗೆ ಸಿನಿಮಾ ಕಂಪ್ಲೀಟ್ ಆಗುವ ಬಗ್ಗೆ ಕೂಡ ಯಾವುದೇ ಗ್ಯಾರಂಟಿ ಇರುವುದಿಲ್ಲ. ಇದು ಒಂದು ಕಾರಣವಾದರೆ, ನನಗೆ ಸುಳ್ಳು ಹೇಳಿದರೂ ನಡೆಯುತ್ತದೆ, ನಾನು ಯಾರ ಜತೆಗಾದರೂ ನಟಿಸುತ್ತೇನೆ, ನನಗೆ ನನ್ನತನ ಇಲ್ಲ ಎಂದು ಆಗಬಾರದಲ್ಲ. ಜತೆಗೆ, ಒಂದು ವಿಷಯದಲ್ಲಿ ಮೋಸವಾದರೆ, ನಾವು ಅದಕ್ಕೆ ಕಾಂಪ್ರೋಮೈಸ್ ಆದರೆ, ಮುಂದೆ ಅದೇ ಸಂಭಾವನೆ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಆಗಬಹುದು. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿ ಇಟ್ಟುಕೊಂಡೇ ನಾನು ಆವತ್ತು ಆ ನಿರ್ಧಾರ ತೆಗೆದುಕೊಂಡೆ' ಎಂದಿದ್ದಾರೆ ನಟಿ ನಮಿತಾ. 

ಹಾಗೆಲ್ಲಾ ಮಾಡ್ಬೇಡಿ ಅಂದ್ರು ಪ್ರಣೀತಾ ಸುಭಾಷ್ ಫ್ಯಾನ್ಸ್; 'ಸ್ನೇಹಿತರು' ನಟಿ ಏನ್ ಮಾಡಿದ್ರು?

ಹಾಗಿದ್ದರೆ, ನಟಿ ನಮಿತಾ ತಮಗೆ ಮೋಸವಾದಾಗ ಏನು ಮಾಡಿದ್ದರು ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಹೌದು, ಆವತ್ತು ಧನುಷ್ ನಾಯಕತ್ವದ ಸಿನಿಮಾ ಎಂದು ಒಪ್ಪಿಕೊಂಡು ಶೂಟಿಂಗ್‌ ಸೆಟ್‌ಗೆ ಹೋಗಿದ್ದ ನಟಿ ನಮಿತಾ, ಅಲ್ಲಿ ನಟ ಧನುಷ್ ಅವರಲ್ಲ, ಅವರ ಸಂಬಂಧಿ ಹುಡುಗ ಎಂದು ತಿಳಿಯುತ್ತಲೇ ಕೋಪದಿಂದ ಹೊರಟು ಹೋಗಿದ್ದರು. ಮತ್ತೆ ತಿರುಗಿ ಆ ಸಿನಿಮಾ ಶೂಟಿಂಗ್‌ಗೆ ನಮಿತಾ ಬರಲೇ ಇಲ್ಲ.  ಈ ಮೂಲಕ ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಿದ್ದರು ನಟಿ ನಮಿತಾ. 

ಡಾ. ರಾಜ್‌ಕುಮಾರ್ ಕುಟುಂಬದಲ್ಲಿ ಮೊದಲ ಡಿವೋರ್ಸ್, ವಿಫಲವಾದ ಕುಟುಂಬದ ಮಧ್ಯಸ್ಥಿಕೆ

ಅಂದಹಾಗೆ, ನಟಿ ನಮಿತಾ ಅವರು ನೀಲಕಂಠ, ಇಂದ್ರ, ಬೆಂಕಿ ಬಿರುಗಾಳಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಹೆಚ್ಚಾಗಿ ಗ್ಲಾಮರಸ್‌ ರೋಲ್‌ಗಳಲ್ಲೇ ತೋರಿಸಲಾಗಿದೆ. ಸೆಕ್ಸಿ ಲುಕ್, ಮೈ ಚಳಿ ಬಿಟ್ಟು ಎಂತಹ ಪಾತ್ರವನ್ನಾದರೂ ಮಾಡಬಲ್ಲೆ ಎಂಬ ಅವರ ದಿಟ್ಟತನ ಅವರಿಗೆ ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶ ಗಿಟ್ಟಿಸಲು ನೆರವಾಗಿತ್ತು. 

click me!